ಇದು ನಿರಂತರವಾಗಿ ಪ್ರಕಟಗೊಳ್ಳುತ್ತಿರುವ ಮಾಗ್ ಝೀನ್..
ಜಗತ್ತಿನಲ್ಲಿ ಪ್ರಾರಂಭವಾದಾಗಿನಿಂದಲೂ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ ಅತ್ಯಂತ ಹಳೆಯ ಪತ್ರಿಕೆಯೆಂದರೆ 'ಕ್ವೆಟಿ'. ಇತ್ತೀಚಗೆ ಝೆಕ್ ಗಣರಾಜ್ಯದ ಪ್ರೇಗ್ ನಲ್ಲಿ ನಡೆದ 'ಸನೋಮಾ ಮ್ಯಾಗ್ ಝೀನ್ಸ್ ಪ್ರಹಾ' ಎಂಬ ಗೋಷ್ಠಿಯಲ್ಲಿ ಪ್ರಕಾಶಕ ಫ್ರಾಂಕ್ ಹಿಟ್ ಝರ್ಟ್ ಈ ಐತಿಹಾಸಿಕ ಸಂಗತಿಯನ್ನು ಬಹಿರಂಗಗೊಳಿಸಿದರು. 'ಕ್ವೆಟಿ' ಎಂದರೆ 'ಹೂವು' ಎಂದರ್ಥ. 1834ರಲ್ಲಿ ಜೆ.ಹೆಚ್.ಪಾಸ್ಫಿಸಿಲ್ ಎಂಬ ಪ್ರಕಾಶಕರಿಂದ ಜನ್ಮ ತಾಳಿದ 'ಕ್ವೆಟಿ'ಯ ಮೊದಲ ಸಂಪಾದಕ ಝೆಕ್ ಗಣರಾಜ್ಯದ ರಾಷ್ಟ್ರಗೀತೆಯ ರಚನಕಾರ ಮತ್ತು ಖ್ಯಾತ ನಾಟಕಕಾರನಾದ ಜೋಸೆಫ್ ಕೆಟ್ ಜೇನ್ ಟೈಲ್. 1834ರಿಂದ ಪ್ರಕಟಗೊಳ್ಳುತ್ತಿರುವ ಈ ಪತ್ರಿಕೆಗೆ ಈಗ 175ನೇ ತುಂಬು ಪ್ರಾಯ. ಇದಕ್ಕೂ ಮುಂಚೆ ಅಮೆರಿಕದ 'ಸೈಂಟಿಫಿಕ್ ಅಮೆರಿಕನ್' ಎಂಬ ಪತ್ರಿಕೆಯೇ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ ಅತ್ಯಂತ ಹಳೆಯ ಪತ್ರಿಕೆಯೆಂದು ನಂಬಲಾಗಿತ್ತು.ಆದರೆ 1845ರಲ್ಲಿ ಪ್ರಕಟಗೊಂಡ ಇದು, 'ಕ್ವೆಟಿ' ಗಿಂತ 11ವರ್ಷ ಕಿರಿಯ ಪತ್ರಿಕೆಯೆಂಬುದು ಮೊನ್ನೆ ನಡೆದ ಗೋಷ್ಠಿಯಲ್ಲಿ ಚರ್ಚಿತವಾಯಿತು. 1834ರಲ್ಲಿ ಪ್ರಕಟಗೊಂಡ 'ಕ್ವೆಟಿ'ಯು ಮೊದಮೊದಲು ನಾಲ್ಕು ತಿಂಗಳಿಗೊಂದರಂತೆ ಪ್ರಕಟಗೊಳ್ಳುತ್ತಿತ್ತು. ಮುಂದೆ ದ್ವೈಮಾಸಿಕವಾಗಿ ಪ್ರಕಟಗೊಳ್ಳಹತ್ತಿತು.ಬರಬರುತ್ತ ದಶಕಗಳಿಂದೀಚೆಗೆ ಸಾಪ್ತಾಹಿಕವಾಗಿ ಓದುಗರ ಕೈ ಸೇರುತ್ತಿದೆ. ಇದರ ಿನ್ನೊಮದ...