ಸಾಕಿನ್ನು ಸೇರಿರೈ ಮನುಜ ಮತಕೆ.....
ಸಪ್ಟೆಂಬರ್ 30,2010 ರಂದು ಮಹತ್ತರವಾದ ಅಯೋಧ್ಯೆ ತೀರ್ಪು ಪ್ರಕಟವಾಗಲಿದೆ. ತ್ರಿ ಸದಸ್ಯ ಪೀಠ ನೀಡುವ ಶ್ರೀರಾಮ ಜನ್ಮ ಭೂಮಿ ಕುರಿತಾದ ಐತಿಹಾಸಿಕ ತೀರ್ಪು ಜನಮಾನಸವನ್ನು ಹದಗೆಡಿಸದಿರಲಿ. ತೀರ್ಪು ಏನೇ ಬರಲಿ, ಯಾರ ಪರವೆ ಬರಲಿ ಅದನ್ನು ಗೌರವದಿಂದ ಸ್ವಾಗತಿಸೋಣ. ನ್ಯಾಯ ದೇವತೆಯ ನಿರ್ಧಾರಕ್ಕೆ ಬದ್ಧರಾಗಿರೋಣ. ಕುವೆಂಪುರವರು ಹೇಳಿದಂತೆ ನಾನು ಹಿಂದು, ನಾನು ಮುಸ್ಲಿಂ ಅಂತೆಲ್ಲಾ ಭೇದ ತೋರದೆ ಒಂದಾಗೋಣ. ಅಂದಹಾಗೆ ಶಾಂತಿ ಪ್ರಿಯರಾದ ನಾವು ಧರ್ಮಕ್ಕೆ ನಿಜವಾದ ವ್ಯಾಖ್ಯಾನ ನೀಡೋಣ. ರಾಮರೂ ನಾವೇ, ರಹೀಮರೂ ನಾವೇ..ಮೇಲಾಗಿ ನಾವು ಭಾರತೀಯರೆಂಬುದನ್ನು ಮರೆಯದಿರೋಣ.. --ಸಚಿನ್ ಕುಮಾರ ಬಿ.ಹಿರೇಮಠ , ಜೇವರ್ಗಿ