ಮನಕಲಕಿದ ಜೋಕು...
ಒಮ್ಮೆ ನಮ್ಮ ಭಾರತೀಯ ರಾಜಕಾರಣಿಯೊಬ್ಬರು ವಿದೇಶಕ್ಕೆ ತೆರಳಿದ್ದರಂತೆ. ಅಲ್ಲಿನ ಒಬ್ಬ ರಾಜಕಾರಣಿಯನ್ನು ಭೇಟಿ ಮಾಡಿ "ನೀವು ಇಷ್ಟು ಬೇಗ ಹೇಗೆ ಶ್ರೀಮಂತರಾದಿರಿ?" ಎಂದು ಕೇಳಿದ. ಅದಕ್ಕೆ ಆ ರಾಜಕಾರಣಿ ನಮ್ಮ ಭಾರತೀಯ ರಾಜಕಾರಣಿಯನ್ನು ತನ್ನ ಮನೆಯ ಕಿಟಕಿಯ ಹತ್ತಿರ ಕರೆದುಕೊಂಡು ಹೋಗಿ "ನಿಮಗೆ ಆ ಸೇತುವೆ ಕಾಣುತ್ತಿದೆಯಾ?" ಅಂದ.ಅದಕ್ಕಿವನು "ಹೌದು.. ಕಾಣ್ತಿದೆ.." ಎಂದ. ಆಗ ಆ ರಾಜಕಾರಣಿ "ನಾನು ಆ ಸೇತುವೆಯಲ್ಲಿ 10% ಗುಳುಂ ಮಾಡ್ದೆ" ಅಂತಂದ. 1 ತಿಂಗಳು ನಂತರ ಆ ವಿದೇಶಿ ರಾಜಕಾರಣಿ ಭಾರತಕ್ಕೆ ಬಂದ. ಆಗ ತನ್ನ ಮನೆಗೆ ಭೇಟಿ ಕೊಟ್ಟಿದ್ದ ಹಳೇ ಭಾರತೀಯ ರಾಜಕಾರಣಿಯನ್ನು ಕಂಡು ಬೆರಗಾದ. ಭಾರತೀಯ ರಾಜಕಾರಣಿ ಕೇವಲ ಒಂದು ತಿಂಗಳಲ್ಲಿ ಶ್ರೀಮಂತನಾದದ್ದನ್ನು ಕಂಡು ಇದ್ಹೇಗೆ ಸಾಧ್ಯ ಅಂತ ಕೇಳಿದಾಗ ಆತ ತನ್ನ ಮನೆಯ ಕಿಟಕಿ ಹತ್ತಿರ ಆ ವಿದೇಶಿ ರಾಜಕಾರಣಿಯನ್ನು ಕರೆದುಕೊಂಡು ಹೋಗಿ "ನಿಮಗೆ ಆ ಸೇತುವೆ ಕಾಣ್ತಿದೆನಾ?" ಅಂತಂದ. "ಇಲ್ಲ..." ವಿದೇಶಿ ರಾಜಕಾರಣಿ ಹೇಳ್ದ. "ನಾನು 100ಕ್ಕೆ 100ರಷ್ಟು ಗುಳುಂ ಮಾಡ್ದೆ..." ಆ ವಿದೇಶಿ ರಾಜಕಾರಣಿ ದಂಗಾದ... (ಮೊನ್ನೆ ಕನ್ನಡ ಪ್ರಭದಲ್ಲಿ ಓದಿದ್ದು..)