ಪ್ರಶ್ನೆಗಳೆಂದರೆ....
ಪ್ರಶ್ನೆಗಳೆಂದರೆ ಈಗೀಗ ಏನೇನೋ ಅವ್ಯಕ್ತ ಭಯ.. ಮುಲಾಜಿಗೆ ಉತ್ತರಿಸಲಾಗುವುದಿಲ್ಲ.. ಉತ್ತರಿಸದೇ ಇರಲಾಗುವುದಿಲ್ಲ... ಶ್ವಾಸ ಅದುಮಿ ನಿಶ್ವಾಸಕ್ಕೆ ಕಾದಂತೆ.. ಕೆಲವು ಪ್ರಶ್ನೆಗಳಿಗೆ ಕರುಣೆಯಿಲ್ಲ... ಕೋರ್ಟಿನ ಆಸ್ಥಾನದಂತಾಗುತ್ತದೆ ಮನ ತಿವಿವ ಭರಕೆ ಎದೆ ರಕ್ತಸಿಕ್ತ... ಎಷ್ಟು ತಡಕಾಡಿದರೂ ಸರಿಯೇ ಸುಳ್ಳಿನ ನಿಲುವಂಗಿ ತೊಟ್ಟ ಸತ್ಯ ಒಂಮೊಂಮೆ ಆಗದಿರದು ಮುಕ್ತ..! ಪ್ರಶ್ನೆಗಳಿಗೋ ಸತ್ಯದ ಹಸಿವೋ? ಅರಿವಿನ ದಾಹವೋ..? ಉತ್ತರದ ಅನ್ವೇಷಣೆಗಾಗಿ ಮುಸಲ ಯುದ್ಧ ಉತ್ತರಗಳೋ ಅಂತರಂಗದಲ್ಲಿ ಹುದುಗಿ ಆತ್ಮ ಸಾಕ್ಷಿಯ ಗರ್ಭದಲಿ ಸ್ಫುರಿಸಿ ನಿತ್ಯ ಸತ್ಯಕ್ಕೆ ಬದ್ಧ... ಪ್ರಶ್ನೆಗಳು ನಿಮಿತ್ತ... ಉತ್ತರಗಳು ಸತ್ಯತೆಯ ಸುತ್ತ... --- ರನ್ನ ಕಂದ