ಅ ದೊಂದು ಸುಂದರವಾದ ದ್ವೀಪ. ಅದು ನೋಡಲಿಕ್ಕೆ ತುಂಬಾ ಚಿಕ್ಕದೇ. ಆದರೆ ಅದರ ಮನಸ್ಸು ವಿಶಾಲವಾದದ್ದು. ಅಲ್ಲಿ ಏನಿತ್ತು? ಏನಿಲ್ಲ ಎಂದೆಲ್ಲ. ಎಲ್ಲವೂ ಇತ್ತು. ಆದ್ದರಿಂದಲೇ ಆ ದ್ವೀಪ ಸಮೃದ್ಧವಾಗಿತ್ತು. ಅಲ್ಲಿ ಒಂದಿಷ್ಟು ಭಾವನೆಗಳು ನೆಲೆಸಿದ್ದವು. ಅದೂ ಅವೆಲ್ಲವೂ ಸುಮಧುರವಾದ ಭಾವನೆಗಳು. ಪ್ರೀತಿ, ಪ್ರೇಮ, ವಾತ್ಸಲ್ಯ, ಮಮತೆ, ಕರುಣೆ, ಸಹಾನುಭೂತಿ, ಸ್ನೇಹ, ಅಹಂಕಾರ..ಹೀಗೆ ಅನೇಕ ಭಾವನೆಗಳು ಆ ದ್ವೀಪದಲ್ಲಿ ಬದುಕುತ್ತಿದ್ದವು. ಎಲ್ಲಾ ಭಾವನೆಗಳಿಗೂ ಅವುಗಳದ್ದೇ ಬದುಕು. ಅವುಗಳದ್ದೇ ಖದರ್ರು.ಕೆಲವು ಭಾವನೆಗಳು ಬೇರೆ ಭಾವನೆಗಳೊಂದಿಗೆ ಹೊಂದಿಕೊಂಡು ಹೋಗುತ್ತಿದ್ದರೆ, ಇನ್ನು ಕೆಲವು ಭಾವನೆಗಳು ಸುತಾರಾಂ ಇದಕ್ಕೆ ಒಪ್ಪುತ್ತಿರಲಿಲ್ಲ. ಅವುಗಳಿಗೆ ಅವುಗಳದ್ದೇ ಹೆಚ್ಚು ಎನ್ನುವಂತ್ತಿತ್ತು. ಈ ಎಲ್ಲಾ ಭಾವನೆಗಳೀಗೆ ನಾಯಕನಂತಿತ್ತು ಪ್ರೀತಿ. ಉಳಿದೆಲ್ಲ ಭಾವನೆಗಳಿಗೆ ಪ್ರೀತಿ ಎಂದರೆ ಎಲ್ಲಿಲ್ಲದ ಪ್ರೀತಿ. ಆದ್ದರಿಂದಲೇ ಅಲ್ಲಿ ವೈಮನಸ್ಸು ಎನ್ನುವುದು ಅಷ್ಟಾಗಿ ಇರಲಿಲ್ಲ. ಅದೊಂದು ಕರಾಳ ದಿನ. ದ್ವೀಪ ಆವರಿಸಿಕೊಂಡಿದ್ದ ನದಿಯಲ್ಲಿ ಪ್ರವಾಹ ಉಂಟಾಯಿತು. ನೀರು ಕ್ಷಣ ಕ್ಷಣಕ್ಕೂ ಹೆಚ್ಚಾಗಲಾರಂಭಿಸಿತು. ಅಲೆಗಳು ದ್ವೀಪದ ನೆಲವನ್ನು ಆವರಿಸಿಕೊಳ್ಳಲಾರಂಭಿಸಿದವು. ದ್ವೀಪ ಹಂತ ಹಂತವಾಗಿ ಮುಳುಗತೊಡಗಿತು. ಎಲ್ಲವೂ ಮುಗಿದೇ ಹೋಯಿತು ಎಂದು ಎಲ್ಲರೂ ಅಂದುಕೊಂಡರೆ ಪ್ರೀತಿ ಮಾತ್ರ ಧೃತಿಗ...