Posts

Showing posts from February, 2010

ಕಾರಣ

ಲೆಕ್ಕವಿಲ್ಲದಷ್ಟು ಕನಸುಗಳು ಒಂದೂ ನನಸಾಗಲಿಲ್ಲ.. ಅದಕ್ಕೆಂದೆ ನಿನ್ನ ಪ್ರೀತಿಸುವ ಮನಸ್ಸಾಗಲಿಲ್ಲ..    ---ಸಚಿನ್ ಕುಮಾರ ಬಿ.ಹಿರೇಮಠ

ತಪ್ಪು

ಗೆಳೆಯ, ಶೀಲದ ಬೇಲಿಯೊಳಗೆ ನಿನ್ನ ನಾ ಬಿಟ್ಟುಕೊಂಡೆ ನಿನ್ನ ಹುಚ್ಚು ಕಾಮದೊಳಗೆ ನನ್ನ ನಾ ಸುಟ್ಟುಕೊಂಡೆ     ---ಸಚಿನ್ ಕುಮಾರ ಬಿ.ಹಿರೇಮಠ

ಅವಧಿ

ನಿನ್ನ ಕಣ್ಣುಗಳಲ್ಲೇನು ಹೊಳಪು ಇರುಳ ತಾರೆಗಳ ತೆರದಿ ಎದೆಯ ಒಳಗೆಲ್ಲಾ ನೆನಪು ಸಾಲು ಸಾಲುಗಳ ಸರದಿ ಎಂದು ಮುಗಿವುದೋ ಈ ಮಧುರ ವಿರಹದ ಅವಧಿ...?     ---ಸಚಿನ್ ಕುಮಾರ ಬಿ.ಹಿರೇಮಠ

ನಂದಾದೀಪ

ಎದೆಯ ನಂದಾದೀಪದಂತೆ ಪ್ರೀತಿ ಮನಸುಗಳೇ ಬತ್ತಿ ಭಾವನೆಗಳೇ ತೈಲ ಸ್ನೇಹ ನಂಬಿಕೆಗಳೇ ಇದಕೆ ನಿತ್ಯ ನೇಮ ಬದುಕೇ ಹೊಮ್ಮುವ ಬೆಳಕು ಪ್ರೀತಿಯೊಂದೆ ಎಲ್ಲದಕ್ಕೂ     ---ಸಚಿನ್ ಕುಮಾರ ಬಿ.ಹಿರೇಮಠ

ಗರ್ಭಿಣಿ

ನಿನ್ನ ನೆನಪುಗಳನೇ ಹೊತ್ತ ನನ್ನ ಮನಸು ಚಿರ ಗರ್ಭಿಣಿ     ---ಸಚಿನ್ ಕುಮಾರ ಬಿ.ಹಿರೇಮಠ

ಮಿಡಿತ

ನನ್ನ ಸಮಾಧಿಗೆ ಕಿವಿಯೊತ್ತು ಅಲ್ಲೊಂದು ಹೃದಯ ಇನ್ನೂ ಮಿಡಿಯುತ್ತಿರುತ್ತದೆ ಏಕೆಂದರೆ ನನ್ನ ಪ್ರೀತಿಗೆ ಸಾವಿಲ್ಲ..      ---ಸಚಿನ್ ಕುಮಾರ ಬಿ.ಹಿರೇಮಠ

ಸೂರ್ಯಕಾಂತಿ

ನಿನ್ನ ಒಲವಿಗಾಗಿ ಕಾಯುವ ನನ್ನ ಪ್ರೀತಿ ಸಾವಿಲ್ಲದ ಸೂರ್ಯಕಾಂತಿ    ---ಸಚಿನ್ ಕುಮಾರ ಬಿ.ಹಿರೇಮಠ

ಬಾರೋ ದುಂಬಿ

ಹೃದಯ ಹೂವಿನ ಮಡಿಲಲಿ ನಿನ್ನ ಒಲವಿನ ಪರಿಮಳ ಬಗೆಬಗೆಯ ಕನಸು ಕಣ್ಣಲಿ ಕವಿತೆ ಬರೆಯೋ ಹಂಬಲ ಬಾರೋ ದುಂಬಿ ನನ್ನ ನಂಬಿ ಏಕೆ ನಿನ್ನಲಿ ತಳಮಳ?      ---ಸಚಿನ್ ಕುಮಾರ ಬಿ.ಹಿರೇಮಠ

ನೆನೆನೆನೆದು....

ನೀ ನಡೆವ ಹಾದಿಯಲ್ಲಿ ಮುಳ್ಳಿಲ್ಲ ಕಲ್ಲಿಲ್ಲ ನನ್ನುಸಿರು ತುಂಬಿದ ಬಸಿರು ಕನಸಿನ ಹೂ ರಾಶಿಯಿದೆ.. ಮೆಲ್ಲನೇ ನಡೆದು ಬಾ ಈ ನಲ್ಲನ ನೆನೆನೆನೆದು...    ---ಸಚಿನ್ ಕುಮಾರ ಬಿ.ಹಿರೇಮಠ

ಬದಲಿಸು...

ಗೆಳತಿ, ಯಾಕೆ ನನ್ನ ನಿನ್ನಲಿ ವಿರಹ? ಬದಲಿಸು ಹಣೆ ಬರಹ ಹಗಲು ರಾತ್ರಿಯ ಥರಹ..     ---ಸಚಿನ್ ಕುಮಾರ ಬಿ.ಹಿರೇಮಠ

ಅರಿಯೆ

ಹಗುರಾಗಿ ಮುಚ್ಚಲು ಕಣ್ಣ ನಗುವಾಗಿ ಕಾಡುವೆ ನನ್ನ ಎದುರಲ್ಲಿ ಬಂದರೆ ಚಿನ್ನ ಎದೆಯಲ್ಲಿ ಒಲವಿನ ಬಣ್ಣ ಇದ ಏನೆಂದು ನಾನರಿಯೆ ಕನಸಲಿ ಕಾಡುವುದು ಸರಿಯೇ?      ---ಸಚಿನ್ ಕುಮಾರ ಬಿ.ಹಿರೇಮಠ

ಅರುಹು

ಎದೆಯ ಮುಗಿಲನು ಬರಿದು ಮಾಡಿ ಕರಗೊ ಚಂದಿರ ಬೇಡ ಗೆಳತಿ ಸುಧೆಯ ತಿನಿಸನು ಕರೆದು ನೀಡಿ ಮಿರುಗೋ ಮನಸಿನ ಮಧುರ ಪ್ರೀತಿ ಬೇಕು ಸವಿಯು ಅದುವೇ ಸುಂದರ ಸಾಕು ವಿರಹದ ಅಂತರ      ---ಸಚಿನ್ ಕುಮಾರ ಬಿ.ಹಿರೇಮಠ

ಮಾಯೆ

ಕಣ್ಣ ಕಪ್ಪು ಕಾಡಿಗೆ ನನ್ನ ಸೆಳೆದು ದೂಡಿದೆ ಗೊತ್ತೇ ಆಗದಂತೆ ನಿನ್ನ ಪ್ರೀತಿ ಗೂಡಿಗೆ ಚಿನ್ನ ನಿನ್ನ ಮಾತಿಗೆ ಇಲ್ಲ ಯಾವ ವಂತಿಗೆ  ಸತ್ತು ಬದುಕೊ ಮಾಯೆ ಕಂಡೆ ಪ್ರೀತಿಯೊಂದಿಗೆ     ---ಸಚಿನ್ ಕುಮಾರ ಬಿ.ಹಿರೇಮಠ

ಪಶ್ಚಾತಾಪ

ನಿನ್ನ ಒಲವನ್ನು ಹೂವು ಅಂದುಕೊಂಡಿದ್ದೆ ಅದು ಸೂಸುವ ಪರಿಮಳವನ್ನು ಬದುಕು ಅಂದುಕೊಂಡಿದ್ದೆ ಹಗಲು ಕಳೆದು ಇರುಳು ಬರಲು ಬಾಡಿತೇಕೆ ಹೂವು? ತುಂಬಿ ನನ್ನಲ್ಲಿ ಸಹಿಸಲಾರದ ನೋವು...    ---ಸಚಿನ್ ಕುಮಾರ ಬಿ.ಹಿರೇಮಠ

ಒಲುಮೆ

ನಿನ್ನ ನಗುವಿನೊಳಗೇನು ಅಷ್ಟು ಶಕ್ತಿ? ಅವಿತಂತೆ ಭಕ್ತನಲಿ ದೇವರ ಭಕ್ತಿ.. ಬೆಳದಿಂಗಳಾಗುತಿದೆ ತಾ ಸುಡುವ ಬಿಸಿಲು ಭೋರ್ಗೆರೆದು ಹರಿಯುತಿದೆ ಈ ಪ್ರೇಮದಾ ಹೊನಲು    ---ಸಚಿನ್ ಕುಮಾರ ಬಿ.ಹಿರೇಮಠ

ಆಹ್ವಾನ

ಗೆಳತಿ, ನನ್ನದೆಯ ಒಳಗೆ ಜಾರಿ ಬೀಳದೆ ಮೆಲ್ಲನೇ ನಡೆದು ಬಾ    ---ಸಚಿನ್ ಕುಮಾರ ಬಿ.ಹಿರೇಮಠ

ವಂಚನೆ

ಕೆನ್ನೆಗೆ ಮುತ್ತಿಡುವ ನೆಪದಲ್ಲಿ ಕಣ್ಣೀರ ಸೇರಿಕೊಂಡು ಜಾರಿ ಹೋದ ನೀನು ನಿಜಕ್ಕೂ ನಯ ವಂಚಕಿ      ---ಸಚಿನ್ ಕುಮಾರ ಬಿ.ಹಿರೇಮಠ

ಪ್ರಸವ..

ಅವನಿಯ ತುಂಬು ಯೌವ್ವನಕ್ಕೆ ಸೋತ ತರಣಿಯು ಉಷೆಯಿಂದ ಅಪ್ಪಿ ಮುದ್ದಿಸಿದುದಕೆ ಪಚ್ಚೆ ಪೈರಿನ ಭ್ರೂಣವದು ನಾಟಿ ವಸಂತವನು ಪ್ರಸವಿಸಿ ಮತ್ತೊಂದು ಮಿಲನಕೆ ಕಾಯುತಲಿದೆ ಅದೇ ಅವನಿ...      ---ಸಚಿನ್ ಕುಮಾರ ಬಿ.ಹಿರೇಮಠ

ಪ್ರೀತಿ

ಪ್ರೀತಿ ಎಂಬ ಎರಡಕ್ಷರದಲ್ಲಿ ಒಂದಕ್ಷರ ನೀನು ಇನ್ನೊಂದು ನಾನು ಬೇರಾದೆಡೆ ನಾವಿನ್ನು ಪ್ರೀತಿಗೆ ಅರ್ಥವುಂಟೇನು?     ---ಸಚಿನ್ ಕುಮಾರ ಬಿ.ಹಿರೇಮಠ

ಸ್ನೇಹ..

ಕೆನ್ನೆಯ ಜೊತೆಗೆ ಕಂಬನಿ ಸ್ನೇಹ ನೋವಿರುವವರೆಗೆ ನಿನ್ನಯ ಜೊತೆಗೆ ನನ್ನ ಸ್ನೇಹ ಬದುಕಿರುವವರೆಗೆ   ---ಸಚಿನ್ ಕುಮಾರ ಬಿ.ಹಿರೇಮಠ

ಕನಸುಗಳು..

ಈ ಕನಸುಗಳೇ ಹೀಗೆ ಇರುಳ ತುಂಬೆಲ್ಲ ಹೊಳಹೊಳೆದು ಆಸೆಗಳ ಬೆಳೆ ಬೆಳೆದು ಮನದ ಮುಗಿಲಲ್ಲಿ ಚುಕ್ಕಿ ಚಂದ್ರಮರಂತೆ ಚಿತ್ತಾರ ಮೂಡಿಸಿ ಅವಸಾನಗೊಳ್ಳುವ ಮಧುರ ಚಿತ್ರಿಕೆಗಳು       ---ಸಚಿನ್ ಕುಮಾರ ಬಿ.ಹಿರೇಮಠ

ಪರಿಶುದ್ಧಿ

ನಮ್ಮೊಳಗೆ 'ನಾನು'  ತುಂಬಿರುವ ಸುದ್ದಿ ಅರಿವಾದೊಡೆ ಬಿಡಬೇಕು ಆ ದುಷ್ಟ ಬುದ್ಧಿ ಜಗದ ಸುಖದೊಳಗೆ ಮನಸನ್ನು ಅದ್ದಿ ಮಾಡಿ ಬಿಡಬೇಕು ಭಾವ ಪರಿಶುದ್ಧಿ   ---ಸಚಿನ್ ಕುಮಾರ ಬಿ.ಹಿರೇಮಠ

ಒಂದು ಸುನೀತ..

ನನ್ನ ನೆನಪು ಅವಳಲ್ಲಿ ಶವವಾಗಿ ಕೊಳೆಯುತ್ತಿದೆ ಅವಳ ಪ್ರತಿ ನೆನಪು ನನ್ನಲ್ಲಿ ಸಸಿಯಾಗಿ ಮೊಳೆಯುತಿದೆ ತೈಲವಿಲ್ಲದ ದೀಪ ಉರಿಯುವುದಾದರೂ ಹೇಗೆ? ಅವಳಿಲ್ಲದ ನನ್ನ ನಾನು ಅರಿಯುವುದಾದರೂ ಹೇಗೆ? ಪುಟ್ಟ ಪೋರಿ ಕಟ್ಟಿಕೊಂಡ ಕಾಲ್ಚೈನು ಕುಣಿವಾಗ ಬಿಚ್ಚಿಕೊಂಡಂತೆ ನನ್ನನ್ನವಳು ಕಳಚಿಕೊಂಡಳೇ ತನಗರಿವಿಲ್ಲದಂತೆ? ಅರವತ್ತು ವೋಲ್ಟಿನ ಬಲ್ಬಿನ ಮುಂದೆ ಹಿಡಿ ಬುಡ್ಡಿ ದೀಪ ಸಾಲದಾಯಿತೇ ಯಾರದೋ ಉಳ್ಳವನ ಮುಂದೆ ನನ್ನ ಈ ರೂಪ? ಒಲ್ಲದ ಗಂಡಸರ ತಣಿಸೋ ಸೂಳೆಯರ ಸುಳ್ಳು ಸುಖ ಅಂತೆಯೇ ಅನ್ನಿಸಿರಬೇಕು ಅವಳಗೆ ನನ್ನೊಂದಿಗಿನ ದುಃಖ ಅವಳ ಮನ ಮುಗಿಲು ಮಸುಕಾದ ಮುಸ್ಸಂಜೆ ಚಿತ್ರ ನನ್ನ ನೆನಪಿನ ಶವದ ಮೈಯಿಂದ ಒಸರುವುದು ಕೀವು ಮಾತ್ರ ಅವಳ ಉತ್ಸಾಹದ ನಾಲಗೆ ಹೊಸದೇನನ್ನೋ ನೆಕ್ಕುತಿದೆ ನನ್ನ ಮನಸ್ಸು ಅವಳಿಲ್ಲದೇ ಹಗಲಿರುಳು ಬಿಕ್ಕುತಿದೆ..              ---ಸಚಿನ್ ಕುಮಾರ ಬಿ.ಹಿರೇಮಠ

ಅಹಂಕಾರದೊಂದಿಗೆ ಪ್ರೀತಿ ಸೇರಿಕೊಂಡಾಗ...(ಮಾನಸ ದಲ್ಲಿ ಪ್ರಕಟಗೊಂಡ ಲೇಖನ)

Image
ಅ ದೊಂದು ಸುಂದರವಾದ ದ್ವೀಪ. ಅದು ನೋಡಲಿಕ್ಕೆ ತುಂಬಾ ಚಿಕ್ಕದೇ. ಆದರೆ ಅದರ ಮನಸ್ಸು ವಿಶಾಲವಾದದ್ದು. ಅಲ್ಲಿ ಏನಿತ್ತು? ಏನಿಲ್ಲ ಎಂದೆಲ್ಲ. ಎಲ್ಲವೂ ಇತ್ತು. ಆದ್ದರಿಂದಲೇ ಆ ದ್ವೀಪ ಸಮೃದ್ಧವಾಗಿತ್ತು. ಅಲ್ಲಿ ಒಂದಿಷ್ಟು ಭಾವನೆಗಳು ನೆಲೆಸಿದ್ದವು. ಅದೂ ಅವೆಲ್ಲವೂ ಸುಮಧುರವಾದ ಭಾವನೆಗಳು. ಪ್ರೀತಿ, ಪ್ರೇಮ, ವಾತ್ಸಲ್ಯ, ಮಮತೆ, ಕರುಣೆ, ಸಹಾನುಭೂತಿ, ಸ್ನೇಹ, ಅಹಂಕಾರ..ಹೀಗೆ ಅನೇಕ ಭಾವನೆಗಳು ಆ ದ್ವೀಪದಲ್ಲಿ ಬದುಕುತ್ತಿದ್ದವು. ಎಲ್ಲಾ ಭಾವನೆಗಳಿಗೂ ಅವುಗಳದ್ದೇ ಬದುಕು. ಅವುಗಳದ್ದೇ ಖದರ್ರು.ಕೆಲವು ಭಾವನೆಗಳು ಬೇರೆ ಭಾವನೆಗಳೊಂದಿಗೆ ಹೊಂದಿಕೊಂಡು ಹೋಗುತ್ತಿದ್ದರೆ, ಇನ್ನು ಕೆಲವು ಭಾವನೆಗಳು ಸುತಾರಾಂ ಇದಕ್ಕೆ ಒಪ್ಪುತ್ತಿರಲಿಲ್ಲ. ಅವುಗಳಿಗೆ ಅವುಗಳದ್ದೇ ಹೆಚ್ಚು ಎನ್ನುವಂತ್ತಿತ್ತು.           ಈ ಎಲ್ಲಾ ಭಾವನೆಗಳೀಗೆ ನಾಯಕನಂತಿತ್ತು ಪ್ರೀತಿ. ಉಳಿದೆಲ್ಲ ಭಾವನೆಗಳಿಗೆ ಪ್ರೀತಿ ಎಂದರೆ ಎಲ್ಲಿಲ್ಲದ ಪ್ರೀತಿ. ಆದ್ದರಿಂದಲೇ ಅಲ್ಲಿ ವೈಮನಸ್ಸು ಎನ್ನುವುದು ಅಷ್ಟಾಗಿ ಇರಲಿಲ್ಲ. ಅದೊಂದು ಕರಾಳ ದಿನ. ದ್ವೀಪ ಆವರಿಸಿಕೊಂಡಿದ್ದ ನದಿಯಲ್ಲಿ ಪ್ರವಾಹ ಉಂಟಾಯಿತು. ನೀರು ಕ್ಷಣ ಕ್ಷಣಕ್ಕೂ ಹೆಚ್ಚಾಗಲಾರಂಭಿಸಿತು. ಅಲೆಗಳು ದ್ವೀಪದ ನೆಲವನ್ನು ಆವರಿಸಿಕೊಳ್ಳಲಾರಂಭಿಸಿದವು. ದ್ವೀಪ ಹಂತ ಹಂತವಾಗಿ ಮುಳುಗತೊಡಗಿತು. ಎಲ್ಲವೂ ಮುಗಿದೇ ಹೋಯಿತು ಎಂದು ಎಲ್ಲರೂ ಅಂದುಕೊಂಡರೆ ಪ್ರೀತಿ ಮಾತ್ರ ಧೃತಿಗ...