Posts

Showing posts from 2015

ನಾವೇಕೆ ಹೀಗೆ?

ಮೆಟ್ಟಿದ ಮಣ್ಣು ಹೆಜ್ಜಗಳ ಹಳಿದಿಲ್ಲ ನಾವೇಕೆ ಹೀಗೆ?ತಿಳಿದಿಲ್ಲ! **** ಏಟು ತಿಂದ ಮರ ನೋವು ಎಂದಿಲ್ಲ ನಾವೇಕೆ ಹೀಗೆ?ತಿಳಿದಿಲ್ಲ! **** ಬೆಂಕಿ ತುಂಬಿದ ಭೂಮಿಯ ಎದೆಯ ಬಗೆದರೂ ಸುಟ್ಟಿಲ್ಲ ನಾವೇಕೆ ಹೀಗೆ?ತಿಳಿದಿಲ್ಲ! **** ಕಿತ್ತ ಹೂವು ಮತ್ತೇ ನಕ್ಕು ಗಂಧ ಬೀರದೆ ಇರಲಿಲ್ಲ ನಾವೇಕೆ ಹೀಗೆ?ತಿಳಿದಿಲ್ಲ! **** ಪ್ರಕೃತಿ ಗುರುವಾಗಿ ಬಂದು ಎಲ್ಲ ಕಲಿಸದೇ ಉಳಿದಿಲ್ಲ ಆದರೂ ನಾವೇನೂ ಕಲಿತಿಲ್ಲ! ---ರನ್ನ ಕಂದ

ಸಂಕಟ

ಮೋಡಕ್ಕೆ ಸಾಕಾಗಿತ್ತು, 'ಎಷ್ಟಂತ ಸುರಿಯಲಿ? ಇನ್ನೂ ಎಷ್ಟು ಜನರನ್ನು ನುಂಗಲಿ? ಸಾಕು ಮಾಡುತ್ತೇನೆ ನೋಡಲಾಗುತ್ತಿಲ್ಲ ಪಾಪದ ಜನರ ಗೋಳು' ಭುವಿಯತ್ತ ಬೇಸರದ ಕಣ್ಣಾಡಿಸಿತು ಮೋಡ ಭುವಿ 'ನನ್ನ ಮೈಯನ್ನೊಮ್ಮೆ ನೋಡು, ಪೊರೆದ ಮಡಿಲಿನ ತುಂಬ ಕೊರೆದ ಅಡಿಗಳವರೆಗೆ ಅವಶೇಷ ಕಾಪಿಟ್ಟ ಬೊಗಸೆಗೆಲ್ಲ ಕಿಚ್ಚಿಟ್ಟ ಬೊಬ್ಬೆಗಳು ನಿನ್ನ ಕಾಡಿ ಕುಡಿಗಳಿಗೆ ಕುಡಿಸಿದ ಜೀವಜಲದ ತುಂಬೆಲ್ಲ ಇವರದೇ ಹೊಲಸು ರಾಡಿ ಏನು ಫಲ ಇವರ ನಾ ಕಾಪಾಡಿ? ನೆಟ್ಟ ಹಸಿರನ್ನೆಲ್ಲ ಕಡಿದು ಬೆಟ್ಟಗಳ ಬರಿದು ಮಾಡಿ ಕೊಟ್ಟ ಪ್ರೇಮಕೆ ಬದಲು ನೋವ ಇಟ್ಟು ನಡೆಯುತಿಹರು ಅದಕ್ಕೆ ಸುರಿ, ಕೊಚ್ಚಿ ಹೋಗಲಿ ಅವರೆದೆಯ ಅಹಮ್ಮಿನ ಪರಿ, ಮುಳುಗುವುದು ಬರಿ ನಿಂತ ನೆಲವಷ್ಟೇ ಅಲ್ಲ, ಕಟ್ಟಿಕೊಂಡ ಬದುಕೂ ಎಂದು. ---ರನ್ಧ ಕಂದ

ಪಡೆಯೋಣ ತರಬೇತಿ ; ಕಲಿಯೋಣ ಸಂಸ್ಕೃತಿ

--- ಸಚಿನ್ ಕುಮಾರ ಬ.ಹಿರೇಮಠ ಒಂದು ದೇಶದ ಸಂಪನ್ಮೂಲಗಳಲ್ಲಿ ಆ ದೇಶದ ಕಲೆ ಮತ್ತು ಸಂಸ್ಕೃತಿಯೂ ಒಂದು. ನಮ್ಮ ದೇಶದಲ್ಲಿ ವಿಭಿನ್ನ ಪ್ರದೇಶಕ್ಕನುಗುಣವಾಗಿ ವಿಭಿನ್ನ ಹಾಗೂ ಅಪರೂಪವೆನಿಸುವ ಕಲೆ ಮತ್ತು ಸಂಸ್ಕೃತಿಗಳು ನಮಗೆ ಸಿಗುತ್ತವೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ನಮ್ಮ ದೇಶ ತನ್ನೆಲ್ಲ ಕಲೆ ಮತ್ತು ಸಂಸ್ಕೃತಿಗಳನ್ನು ಹೆತ್ತ ತಾಯಿಯಂತೆ ಒಂದೇ ಸಮನಾಗಿ ಕಾಣುತ್ತದೆ. ವಿಶಾಲವಾಗಿರುವ ತನ್ನೆಲ್ಲ ಪ್ರದೇಶಗಳನ್ನು, ಆ ಭಾಗದ ವಿವಿಧ ಕಲೆಗಳನ್ನು ಹಾಗೂ ಅಲ್ಲಿನ ಮನೋಜ್ಞ ಸಂಸ್ಕೃತಿಯನ್ನು ಶಿಕ್ಷಣದೊಂದಿಗೆ ಮೇಳೈಸಿ ಪರಸ್ಪರ ಪರಿಚಯಿಸಲು ಕೇಂದ್ರ ಸರ್ಕಾರದ ಸಾಂಸ್ಕೃತಿಕ ಮಂತ್ರಾಲಯದ ಅಂಗ ಸಂಸ್ಥೆಯಾಗಿ 1979ರಿಂದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ(Centre For Cultural Resource and Training) ನವದೆಹಲಿ ಎಂಬ ಸಂಸ್ಥೆ ಅಹರ್ನಿಶಿ ಶ್ರಮಿಸುತ್ತಿದೆ. ಈ ಮೂಲಕ ಶಿಕ್ಷಣದೊಂದಿಗೆ ಸಂಸ್ಕೃತಿಯನ್ನು ಬೆರೆಸಿ ಭಾರತದ ಬಗೆಗಿನ ಸಾಂಸ್ಕೃತಿಕ ವೈಭವವನ್ನು ಪ್ರಶಂಸಿಸಲು ನೆರವಾಗುತ್ತಿದೆ. ಆ ದೇಶದ ಸಂಸ್ಕೃತಿಯನ್ನು ತಿಳಿದುಕೊಂಡು ಅದನ್ನು ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಚ್ಚುಕಟ್ಟಾಗಿ ಅರಿತುಕೊಂಡಾಗ ಮಾತ್ರ ನಮ್ಮ ದೇಶದ ಸಂಸ್ಕೃತಿಯ ಸಂರಕ್ಷಣೆ ಸಾಧ್ಯ ಎಂಬುದು ಈ ಸಿಸಿಆರ್ಟಿ ಆಶಯ. ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದ ಉದ್ದೇಶಗಳು : - ಶಾಲಾ ಕಾಲೇಜು ವಿದ್ಯ...

ಕವಿತೆ

ಕಾನನದ ನಡುವೆ ಸುಳಿವ ಮೌನವೇ ಈ ಕವಿತೆ ಚಂದ್ರನ ಬಿಂಬದಿ ಸುರಿವ ಬೆಳದಿಂಗಳೇ ಈ ಕವಿತೆ ಮರುಭೂಮಿಯ ಒಳಗೆ ನೀರ ನೆಲೆಯಂತೆ ಅರಿಯದ ದ್ವೀಪದಲಿ ಸಿಕ್ಕ ಜೀವಸೆಲೆಯಂತೆ ಕಾರುಣ್ಯದಾ ಕಡಲೊಳಗೆ ಅದ್ದಿ ತೆಗೆದಿರಿಸಿ ಆತ್ಮಕ್ಕೆ ಸವರಿ ಕಾಪಿಟ್ಟ ಸವಿಗವಿತೆ ಪದಗಳಿಲ್ಲದಿದ್ದರೂ ತಾ ಭಾವಸೆಲೆಯೊಡೆದು ಒಲವ ಕಂಪ ಬೀರೋ ಹೂವು ಈ ಕವಿತೆ --- ರನ್ನ ಕಂದ

ಪ್ರೀತಿಯ ಚಂಪಾಗೊಂದು ಪತ್ರ

ಪ್ರಿಯ ಚಂಪಾ ಅವರೇ. ನನ್ನ ಚಿಕ್ಕಪ್ಪ ಪಿಎಚ್ಡಿ ಮಾಡಿದ್ದು ನಿಂಮ ಸಂಕ್ರಮಣದ ಮೇಲೆ. 'ಸಾಹಿತ್ಯ ಪತ್ರಿಕೆಯಾಗಿ ಸಂಕ್ರಮಣ' ಎಂಬ ತಲೆಬರಹದ ಪಿಎಚ್ಡಿ ಮಹಾ ಪ್ರಬಂಧವದು. ಅದನ್ನು ಓದುತ್ತಾ ತಂಮ ವ್ಯಕ್ತಿತ್ವ ಒಂದು ಮಾದರಿಯಾಗಿ ಬೆಳೆಯಿತು. ಹಳೆಯ ಪತ್ರಿಕೆಗಳನ್ನು ಓದಿದೆ. ನಿಂಮ 'ಬಾನುಲಿ' ಎಂಬ ಕವನ ಸಂಕಲನವಂತೂ ನನ್ನ ಕವಿತೆಗಳಿಗೂ ಸ್ಭೂರ್ತಿಯಾದದ್ದು ಸುಳ್ಳಲ್ಲ. ತಾವು ನಿರಪೇಕ್ಷ, ಯಾರನ್ನೂ ನೋಯಿಸದ ಓಲೈಸದ ಸಾಹಿತಿಯೆಂದು ಹಂಚಿದೆ. ಆದರೆ ಮೊನ್ನೆ ತಾವು ನೀಡಿದ ಹೇಳಿಕೆ ಕೇಳಿ ಆಶ್ಚರ್ಯವಾಯಿತು. ದಬ್ಬಾಳಿಕೆ ವಿರುದ್ಧ ದನಿಯೆತ್ತಿ ಜೈಲಿಗೆ ಹೋಗಿಬಂದ ತಾವು, ಇಂದು ಅದೇ ವರ್ಗದ ಪ್ರಭಾವಕ್ಕೊಳಗಾಗಿಯೋ ಅಥವಾ ಇನ್ನಾವುದೋ ಕಾರಣದಿಂದ ತಪ್ಪಾದ ಹೇಳಿಕೆ ನೀಡಿದ್ದೀರಿ. ಬ್ರಾಹ್ಮಣರು ಅಂದು ಶೋಷಣೆ ಮಾಡಿದ್ದಾರೆ. ಒಪ್ಪೋಣ. ಆದರೆ ಈಗ ಅದರ ಪ್ರತೀಕಾರ ತೆಗೆದುಕೊಳ್ಳುವುದು ತಪ್ಪು. ಒಂದು ವರ್ಗವನ್ನು ಬಹಿಷ್ಕರಿಸುವ ನೈತಿಕತೆ ನಿಮಗಿದೆಯೇ? ಇಂತಹ ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಕೆಡಿಸುವುದು ತರವೇ? ಬರೆಹಗಳ ಮೂಲಕ ಜನರೆದೆಯಲ್ಲಿ ಶಾಂತಿಯನ್ಧು ಬಿತ್ತಿ. ಸುಡುವ ದ್ವೇಷವನ್ನಲ್ಲ. -- ಇಂತಿ ನಿಂಮ ಸಾಹಿತ್ಯಾಭಿಮಾನಿ

ಪ್ರತಿಯೊಬ್ಬರೂ ನೋಡಲೇ ಬೇಕಾದ ಚಿತ್ರ -- ಪ್ರಸೆಂಟ್ ಸಾರ್ --ಡಿ.ಎಂ.ಪ್ರಶಾಂತ ಕುರ್ಕೆ

ವಿದ್ಯಾರ್ಥಿಗಳ ಹಾಜರಾತಿ ಕೊರತೆಯ ಕಾರಣದಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿಯನ್ನು ಕಟ್ಟಿಕೊಡುವ ಕಿರುಚಿತ್ರ ಆಕರ್ಷ ಕಮಲ ನಿರ್ದೇಶನದ 'ಪ್ರಸೆಂಟ್ ಸಾರ್'. ಗಡಿನಾಡಿನ ಕನ್ನಡ ಶಾಲೆಗಳ ಪರಿಸ್ಥಿತಿ ಅವಲೋಕಿಸುತ್ತಲೇ ಈ ಭಾಗದಲ್ಲಿ ಕನ್ನಡ ಭಾಷೆಯ ದುಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಗಡಿಭಾಗದಲ್ಲಿ ಕನ್ನಡ ಅರೆಜೀವವಾಗುತ್ತಿದೆ. ಈ ಭಾಗದಲ್ಲಿ ಶಾಲೆಯಲ್ಲಿ ಕಲಿತರಷ್ಟೆ ಕನ್ನಡ. ಇಲ್ಲವಾದರೆ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳ ಭಾಷೆಯೇ ಮಾತೃಭಾಷೆಯಾಗುತ್ತದೆ. 'ಪ್ರಸೆಂಟ್ ಸಾರ್' ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ವಾಟದ ಹೊಸಹಳ್ಳಿ ಶಾಲೆಯ ಪರಿಸರದ ಕಥೆ. ಈಗಡಿನಾಡಿನ ಶಾಲೆ ಒಂದು ಪ್ರಾತಿನಿಧಿಕ ಅಷ್ಟೇ. ರಾಜ್ಯದ ಬೇರೆ ಬೇರೆ ಭಾಗಗಳಲ್ಲೂ ಹಾಜರಾತಿ ಕೊರತೆಯಿಂದ ಶಾಲೆಗಳನ್ನು ಮುಚ್ಚುವ ಸ್ಥಿತಿಯನ್ನು ಇದು ಅಭಿವ್ಯಕ್ತಿಸುತ್ತದೆ. ಎರಡನೇ ಮಹಾಯುದ್ಧದ ವೇಳೆ ಶಾಲೆಯೊಂದರ ಮೇಲೆ ಆಗುವ ಪರಿಣಾಮ ಹಾಗೂ ಅಲ್ಲಿಯ ಒಬ್ಬ ಹುಡುಗನ ಸುತ್ತ ಫ್ರೆಂಚ್ ಲೇಖಕ ಆಲ್ಫೋನ್ಸ್ ದೋದೆ ಹೆಣೆದಿರುವ 'ಲಾಸ್ಟ್ ಲೆಸೆನ್' ಸಣ್ಣ ಕಥೆಯನ್ನು ಆಧರಿಸಿದ್ದು 'ಪ್ರಸೆಂಟ್ ಸಾರ್'. ಮೂಲಕಥೆಯನ್ನು ಕಥೆಗಾರ ಕೇಶವ ಮಳಗಿ 'ಕೊನೆಯ ಪಾಠ' ಹೆಸರಿನಲ್ಲಿ ಕನ್ನಡಕ್ಕೆ ರೂಪಾಂತರಿಸಿದ್ದರು. ಬೊಂಬೆಗಳ ಬಗ್ಗೆ ಆಸಕ್ತನಾಗಿರುವ ಸಿದ್ದು ಎನ್ನುವ ಹುಡುಗನ ಪಾತ್ರದ ಮೂಲಕ ಕಿರುಚಿತ್...

ಸುಟ್ಟರೂ ಬೆಲೆ ಕಟ್ಟಲಾಗದ ನಗು

Image
ಸುಡುವ ಬೆಂಕಿಯ ನಗು-ಗೆಳೆಯ ಸುರೇಶ್ ಎಲ್.ರಾಜಮಾನೆ ಅವರ ಚೊಚ್ಚಲ ಕವನ ಸಂಕಲನ. ರನ್ನನೂರಾದ ಮುಧೋಳ ತಾಲೂಕಿನ ರನ್ನ ಬೆಳಗಲಿಯ ಈ ಕವಿ ಕಾವ್ಯ ಪ್ರೌಢಿಮೆಯಲಿ ಗಂಡುಗಲಿ. ಪ್ರಸ್ತುತ ಕವನ ಸಂಕಲನದಲಿ ಅವರ ಕವಿತೆಗಳು ಸಮಾಜ ಮುಖಿಯಾಗಿ ಜೀವ ಪಡೆದುಕೊಳ್ಳುತ್ತವೆ. ಪ್ರತಿ ಕವಿತೆಯ ಸಾಲುಗಳು ನೆನ್ನೆ ಮೊನ್ನೆ ನಂಮ ಬದುಕಿನಲಿ ಘಟಿಸಿ ಹೋದಂತೆ ತೋರುತ್ತವೆ. ಇವರ ಕವಿತೆಗಳು ಜ್ವಲಂತ ಸಮಾಜವನ್ನು ತೆರೆದಿಡುತ್ತವೆ. ಬಡತನ,ಭಗ್ನಪ್ರೇಮ,ರಾಷ್ಟ್ರಪ್ರೇಮ, ಪರಿಸರ ಕಾಳಜಿ ಹಾಗೂ ಮಾನವೀಯ ನೆಲೆಗಳು ಆಳವಾಗಿ ಬೇರೂರಿ ಕವಿತೆಗಳು ಹೃದಯಸ್ಪರ್ಶೀಯವೆನಿಸುತ್ತವೆ. ಕವಿಯ ತುಮುಲಗಳು, ಪರಿಹಾರಗಳು,ಸದ್ಯದ ಅನಿವಾರ್ಯತೆಗಳು ಕವಿತೆಯ ಮತ್ತೊಂದು ಮಗ್ಗಲನಲ್ಲಿವೆ. ಸುಡುವ ಬೆಂಕಿಯ ನಗುವಿನ ಜತೆ ಅಂತಸ್ಥ ಅಳು ಅನಾವರಣಗೊಳ್ಳುತ್ತದೆ. ಕವಿತೆಗಳು ದೀರ್ಘವೆನಿಸಿದರು ಸರಳವಾಗಿ ಓದಿಸಿಕೊಂಡು ಹೋಗುತ್ತ ಆಪ್ತವಾಗುತ್ತವೆ. ಬೆಂಕಿ ಸುಟ್ಟರೂ ಅದರ ನಗು ಇಷ್ಟವಾಗುತ್ತದೆ. -- ರನ್ನ ಕಂದ

ಹಿಂದೂ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ಸತ್ಯಗಳು :

ಹಿಂದೂ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ಸತ್ಯಗಳು : ಭಾರತೀಯ ಸಂಸ್ಕೃತಿ ಜಗತ್ತಿನ ಎಲ್ಲ ಸಂಸ್ಕೃತಿಗಳಿಗಿಂತಲೂ ಮಿಗಿಲು ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಹಿಂದೂ ಧರ್ಮದ ಕೆಲವು ಸಂಪ್ರದಾಯಗಳು ಅಕಾರಣ ನಂಬಿಕೆಗಳಂತೆ ತೋರುತ್ತವಾದರೂ ಅವು ನೈಜವಾಗಿ ಅಕಾರಣ ನಂಬಿಕೆಗಳಲ್ಲ. ಅವುಗಳಲ್ಲಿ ವೈಜ್ಞಾನಿಕ ಸತ್ಯ ಅಡಗಿದೆ ಎಂಬುದನ್ನು ಮಾತ್ರ ಮರೆಯುವಂತಿಲ್ಲ. ಅಂತಹ ಕೆಲವು ಸಂಪ್ರದಾಯಗಳನ್ನು ಈ ಕೆಳಗೆ ನೋಡೋಣ. * ನಾವೇಕೆ ಕೈ ಮುಗಿಯುತ್ತೇವೆ? ನಾವು ಆಪ್ತರನ್ನು ಕಂಡಾಗ ಅಥವಾ ಹಿರಿಯರನ್ನು ಕಂಡಾಗ ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸುತ್ತೇವೆ. ಇದು ಕೇವಲ ಎದುರಿದ್ದವರನ್ನು ಪ್ರಸನ್ನಗೊಳಿಸುವ ತಂತ್ರವಲ್ಲ. ಇದರ ಹಿಂದಿರುವ ವೈಜ್ಞಾನಿಕ ಸತ್ಯ ಹೀಗಿದೆ. ನಾವು ಎರಡೂ ಕೈಗಳನ್ನು ಜೋಡಿಸಿ ಕೈ ಮುಗಿಯುವಾಗ ಎರಡೂ ಕೈಗಳ ಹಸ್ತಗಳು ಒಂದುಗೂಡುತ್ತವೆ. ಎರಡೂ ಕೈಗಳ ಬೆರಳ ತುದಿಗಳು ಒತ್ತಲ್ಪಡುತ್ತವೆ. ಈ ಹತ್ತೂ ಬೆರಳ ತುದಿಗಳಲ್ಲಿ ಒತ್ತಡ ಬಿಂದುಗಳಿವೆ. ನಮಸ್ಕರಿಸುವಾಗ ಇವು ಒತ್ತಲ್ಪಡುವುದರಿಂದ ಕಣ್ಣು, ಕವಿ ಹಾಗೂ ಮನಸ್ಸು ಸಕ್ರಿಯವಾಗುತ್ತವೆ. ಇದರಿಂದ ನಾವು ನಮಸ್ಕರಿಸುವ ವ್ಯಕ್ತಿಯ ಚಿತ್ರ ನಮ್ಮ ಮನಃಪಟಲದಲ್ಲಿ ಮೂಡಿ ಅವರು ನಮ್ಮ ನೆನಪಿನಲ್ಲಿ ಉಳಿಯುತ್ತಾರಂತೆ. * ಕಾಲುಂಗುರ ಏಕೆ? ಮುದುವೆಯಲ್ಲಿ ವಧುವಿನ ಕಾಲಿಗೆ ಬೆಳ್ಳಿ ಕಾಲುಂಗುರ ತೊಡಿಸುತ್ತಾರೆ. ಬೆಳ್ಳಿ ಕಾಲುಂಗುರ ಹೆಣ್ಣು ಮಕ್ಕಳಿಗೇ ಏಕೆ? ಅದು ಎ...

ಹಳೆಯ ಪ್ರೇಮ ಪತ್ರವೇ,

ಹಳೆಯ ಪ್ರೇಮ ಪತ್ರಗಳನ್ನು ಜೋಪಾನವಾಗಿಟ್ಟಿದ್ದೇನೆ. ಆಗಾಗ ನಾನು ಹಾಗೂ ನನ್ನ ಪ್ರೇಯಸಿ(ಈಗ ಹೆಂಡತಿ ಎಂಬ ಹೆಚ್ಚುವರಿ ಹುದ್ದೆಯಲ್ಲಿದ್ದಾಳೆ) ಸೇರಿ ಓದುತ್ತ ಹಳೆಯ ನೆನಪುಗಳನ್ನ ಮೆಲುಕು ಹಾಕುತ್ತಿರುತ್ತೇವೆ. ಅದರಂತೆ ಆಗ ಹಾಗಿದ್ದು ಈಗ ಬದಲಾದ ನನಗೆ ಈಕೆ ಬಯ್ಯುತ್ತಿರುತ್ತಾಳೆ. ಆಗ ನಾವಿದ್ದ ರೀತಿ, ಒಬ್ಬರಿಗೊಬ್ಬರು ಸಂತೈಸುತ್ತಿದ್ದ ರೀತಿ,ಪ್ರೀತಿಯ ತೀಕ್ಷ್ಣತೆ ಎಲ್ಲವನ್ನೂ ಈಗಿನ ಬದಲಾವಣೆಯೊಂದಿಗೆ ಮೌಲ್ಯಮಾಪನ ಮಾಡುತ್ತೇವೆ. ಆಕೆ ಆಗ ನನ್ನಿಂದ ದೂರವಿದ್ದಾಗ ತಾನು ವಿರಹ, ನಾನು ಅವಳಿಲ್ಲದೇ ಪಟ್ಟ ಒಂಟಿತನ ಮುಂತಾದವುಗಳು ನಂಮ ಈಗಿನಪ್ರೀತಿಯನ್ನ ಇನ್ನಷ್ಟು ಗಟ್ಟಿಗೊಳಿಸುತ್ತವೆ. ಆದ್ದರಿಂದ ನೀವು ಆಗಾಗ ಪ್ರೇಮ ಪತ್ರಗಳನ್ನು ಓದಲು ಶುರುಮಾಡಿ. ಬೇರೆ ಹುಡುಗಿ ಬರೆದ ಪತ್ರ ಓದೀರಾ ಜೋಕೆ!

ಹಾಯ್ಕುಗಳು

1 ಇರುಳ ಸೆರಗಲ್ಲಿ ತಾರೆಗಳು ಎದೆಯ ಗೂಡಲ್ಲಿ ಸುಡುವ ಕೆಂಡಗಳ ರೀತಿ 2 ಉಳ್ಳವರು ಇಲ್ಲದವರ ಆಳುತಿಹರು ಕೂಡಲ ಸಂಗಮ ದೇವ ಎಲ್ಲಿ ಬಸವಣ್ಣ? 3 ತೀರಕ್ಕೆ ಮುತ್ತಿಡುವ ತೊರೆ ಹೊದ್ದ ಬೇಗುದಿಯೆಷ್ಟೋ? ಸಾಗರದ ಎದೆಯೊಳಗೆ 4 ಅವಳ ಕಮಲದಂತ ನಯನದ್ವಯಗಳಿಗೆ ನನ್ನ ಮನದುಂಬಿ ಬಿಡದೇ ಎಡತಾಕಿದೆ ಜೀವನ ಮಧುಪಾನಕ್ಕಾಗಿ --- ರನ್ನ ಕಂದ

ಹಾಲಾ ಸಕ್ರಿ

ಅಕಿ ನಕ್ರ ಎದ್ಯಾಗ ಪ್ರೀತಿ ಹಳ್ಳ ಹರಿತೈತಿ ಎದ್ರಿಗ್ ಸಿಕ್ರ ಖುಷೀಲೆ ಖುಷಿ ಕೊಳ್ಳ ಹರಿತೈತಿ ಹೆಂಗ್ ವರ್ಣನಾ ಮಾಡ್ಲಿ ಅಕಿನ ಏನs ಹೇಳ್ರಿ ಅಕಿನ ನೋಡೂದಂದ್ರ ಹಸsದ ಹೊಟ್ಟ್ಯಾಗ ಹಾಲಾ ಸಕ್ರಿ ಸುರದ್ಹಂಗಾಕ್ಕೈತಿ --- ರನ್ನ ಕಂದ

ಗಜಲ್ :

ಭಾವಗಳು ಕಡೆದ ಮನಸಿನ ನವನೀತ ಕರಗಬಹುದು ನಿನ್ನ ನೆದರಿನ ಕಾವು ವಿಪರೀತ ತುಟಿಗೆ ಅಂಟಿದ ನಗೆಯ ಮಾತಿನ ಪ್ರವರ ಮೌನಕೆ ನಾನೀಗ ತೆರುವ ಬೆಲೆ ನಿಖರ ಕನಸುಗಳ ಬುತ್ತಿಯೊಳಗೆ ರುಚಿಗಿಷ್ಟು ಹುಡುಕಾಟ ನನಸಾಗದೇ ಉಳಿದ ನೆನಪುಗಳ ತಡಕಾಟ ಎದೆಯ ಚಂದಿರನಿಗೆ ದಿನವೂ ಹುಣ್ಣಿಮೆಯಾಗುವಾಸೆ ಮನಸು ಮನಸುಗಳು ನಡುವೇ ನೋಟವೇ ಹಿತವಾದ ಭಾಷೆ ಬಾಳ ಪಯಣದ ಕೊನೆಗೆ ಸಿಕ್ಕ ಉತ್ತರಗಳು ಅಸ್ಪಷ್ಟ ತಿದ್ದಬಹುದಾದ ತಪ್ಪುಗಳು ಈಗೀಗ ನಿಕೃಷ್ಟ --- ರನ್ನ ಕಂದ

ಹೆಂಡತಿ ತವರಿಗೆ ಹೊರಡುವೆನೆಂದರೆ...

"ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಹುಣ್ಣಿಮೆ ಹೋಳಿಗೆ ದೀಪ ಹೆಂಡತಿ ತವರಿಗೆ ಹೊರಡುವೆನೆಂದರೆ ನನಗಿನ್ನಿಲ್ಲದ ಕೋಪ" -- ಕೆ ಎಸ್ ನ ನಿಜ ರೀ, ಹೆಂಡತಿ ತವರಿಗೆ ಹೋದರೆ ಬಾಳು ಬರೀ ಅಮವಾಸ್ಯೆ,ಅದೇ ಚಿತ್ರಾನ್ನ,ಕತ್ತಲು ಮತ್ತು ಕೋಪ(ಕೇವಲ ಹೆಂಡತಿಯನ್ನು ಮಾತ್ರ ಸಿನ್ಸಿಯರ್ ಆಗಿ ಪ್ರೀತಿಸುವವರಿಗೆ). ಆಫೀಸಿಂದ ಮನೆಗೆ ಬಂದ ತಕ್ಷಣ ಆಕೆ ಕೊಡೋ ಕಾಫಿ ದಿನದ ಎಲ್ಲ ಆಯಾಸವನ್ನ ಕಡಮೆ ಮಾಡುತ್ತದೆ. ಅದೇ ನಾನೇ ಮಾಡಿಕೊಂಡ ಟೀ ಕಾಫೀ ಕಲಗಚ್ಚು ಇದ್ದಂಗಿರುತ್ತದೆ. ಬೆಳಿಗ್ಗೆ ಸಿಹಿ ಮುತ್ತು ನೀಡಿ ಅಲಾರಾಂನಂತೆ ಎಬ್ಬಿಸಿ,ಸ್ನಾನಕ್ಕೆ ನೀರಿಟ್ಟು ನಂ ಬಟ್ಟೆಗಳನ್ನ ಇಟ್ಟು ನಮ್ಗೆ ಟಿಫಿನ್ ರೆಡಿ ಮಾಡ್ತಾಳೆ. ನಗುನಗುತಾ ಬೀಳ್ಕೊಡ್ತಾಳೆ. ಮನೇನಾ ಅಂದವಾಗಿ ಇಟ್ಕೊಳ್ಳೋದು ಹೆಂಡತಿಗೆ ಸುಲಭವಾಗಿ ಒಲಿದ ಕಲೆ.ಅದೇ ನಾನೊಬ್ನೆ ಇದ್ದಾಗ ಎಲ್ಲಿ ಏನ್ ಬಿದ್ದಿರುತ್ತೋ ಅದ್ ಅಲ್ಲೇ ಇರುತ್ವೆ. ನೀಟಾಗಿ ಬಟ್ಟೆ ಒಗೆದು ಇಸ್ತ್ರಿ ಮಾಡೋ ಹೆಂಡ್ತಿ ಊರಿಗೆ ಹೋದಾಗ ನಾವ್ ಬಟ್ಟೆ ತೊಳೆಯೋ ಪಾಡು ಹೇಳತೀರದು. ಸ್ವಚ್ಛವೇನೋ ಆಗ್ತವೆ ಆದ್ರೆ ಹೆಂಡ್ತಿ ಒಗೆದಂಗಾಗಲ್ಲ. ಅಡುಗೆ ಬರದ ನನ್ನಂಥವರ ಪಾಡು ಬೇಡವೇ ಬೇಡ. ಉಪ್ಪೋ ಹುಳಿಯೋ ಖಾರಾನೋ ಹೆಚ್ಛಾಗಿ ನಾನೇ ತಿನ್ನದಷ್ಟು ಕೆಟ್ಟದಾಗಿರುತ್ತೆ ಅಡುಗೆ. ಪ್ರತಿ ಕ್ಷಣವೂ ಹೆಂಡ್ತಿ ಬೇಕು ಹೆಂಡ್ತಿ ಎನಿಸುತ್ತೆ. ತವರಿಗೆ ಹೋದಾಗ ಖುಷಿ ಪಡೋ ಗಂಡಸರೂ ಇದ್ದಾರೆ ಅದ್ಬಿಡಿ. ಆದರೆ ನಮಗಾಗೇ ಬದುಕೋ ಮುದ್ದು ಜೀವ ಅದು. ...

ಪ್ರಶಸ್ತಿ ವಾಪಸಾತಿ ಮತ್ತು ಸಹಿಷ್ಣುತೆ

ಪ್ರಶಸ್ತಿ ವ್ಯಕ್ತಿತ್ವಕ್ಕೆ ದೊರೆತಿರುವಂತಹದ್ದು. ಅದನ್ನು ವಾಪಸು ಪಡೆದರೆ ಅಥವಾ ವಾಪಸಾತಿ ಮಾಡಿದರೆ ಅಂತಹ ವ್ಯಕ್ತಿತ್ವ ನಂಮದಲ್ಲ ಎಂದು ಒಪ್ಪಿಕೊಂಡಂತಾಗುತ್ತದೆ. ಸಾಹಿತಿಗಳು ಪ್ರಶಸ್ತಿ ವಾಪಸಾತಿಯನ್ನು ಪ್ರತಿಭಟನೆಯ ವಿಧ ಎಂದು ತಿಳಿದು ವಾಪಸಾತಿ ಮಾಡುತ್ತಿರುವುದು ಒಂದು ಬಗೆಯ ಸಮೂಹ ಸನ್ನಿ. ಯಾವುದೇ ಸರ್ಕಾರ ಏಕ ವ್ಯಕ್ತಿಯಲ್ಲ. ಎಲ್ಲವೂ ಸರ್ಕಾರದಿಂದಲೇ ಸಂಭವಿಸುವುದಿಲ್ಲ. ನಂಮದೇ ಸರ್ಕಾರ ಇದೆ ಎಂದು ಯಾರೂ ದುಷ್ಕೃತ್ಯ ಎಸಗುವುದಿಲ್ಲ. ಅದು ವ್ಯಕ್ತಿನಿಷ್ಠವೇ ಹೊರತು ಸರ್ಕಾರ ಪ್ರೇರಿತವಲ್ಲ. ಪ್ರಶಸ್ತಿಗಳನ್ನು ವಾಪಸು ಮಾಡಿದ ಮಾತ್ರಕ್ಕೆ ಎಲ್ಲವೂ ಸರಿಯಾಗಿಬಿಡುತ್ತದೆ ಎಂಬುದು ತಪ್ಪು. ಸಾಹಿತಿಗಳಲ್ಲಿ ಸಾಕಷ್ಟು ವಿಚಾರಗಳಿವೆ. ಬರೆಹಗಳ ಮೂಲಕ ಜನರಲ್ಲಿ ಸಾಮರಸ್ಯ ಬಿತ್ತುವಂತ ಕೆಲಸ ಆಗಬೇಕೇ ಹೊರತು ಸುದ್ದಿಯಾಗುವುದರಿಂದ ಸಹಿಷ್ಣುತೆ ಸಾಧ್ಯವಿಲ್ಲ. --- ಸಚಿನ್ ಕುಮಾರ ಬಿ. ಹಿರೇಮಠ,ರನ್ನ ಮುಧೋಳ

ನನ್ನ ಕವಿತೆ

ನನ್ನ ಕವಿತೆ ಸಮಾಜ ಮುಖಿ ಎಲ್ಲ ಸ್ತರಗಳಲ್ಲೂ ಪರಮ ಸುಖಿ ನನ್ನ ಕವಿತೆಯ ಆಯಾಮಗಳು ಹಲವು ನೋವು, ನಲಿವು, ಒಲವು ಗೆಲುವು ಹೀಗೆ.ಸಾಗುತ್ತದೆ ನನ್ನ ಕವಿತೆ.. ಹಸಿದ ಉದರದ ಬೆಂದ ಬಿಸಿ ಅಸ್ಪೃಶ್ಯರೆಂಬ ಹಣೆಪಟ್ಟಿಯ ಕರಾರು ಅಲ್ಪರೆಂಬ ಏಕಾಕಿ ಭಾವದೊಳಗಿನ ಹುನ್ನಾರ ಜನಿವಾರ, ವಿಭೂತಿ ಜುಟ್ಟು ನಮಾಜು ಎಂಬ ವಿಧಿ ವಿಧಾನಗಳ ಅಡಿಯಲ್ಲಿ ಸಿಕ್ಕ ಧರ್ಮ ಎಲ್ಲ. ಮರ್ಮಗಳ ಕರ್ಮ ಸಿದ್ಧಾಂತ ನನ್ನ ಕವಿತೆ.. ಲಂಚಾವತಾರಗಳ ಪ್ರಭಾವಳಿಯಲ್ಲಿ ಬದುಕುವ ಉಪಾಯ ದುರಿತ ಕಾರ್ಯಕೆ ಅರಿತವರಿಂದಲೇ ಮಸ್ತಾಭಿಷೇಕ ಶರಣ-ಶರಣೆಯರ ಲಿಂಗಾಂಗ ಷಟ್ ಸ್ಥಲ ಸೋಪಾನ ವಚನ ಗದ್ಯ ಪದ್ಯಗಳಲಿ ಅತ್ಯಂತ ಜೋಪಾನ ಮಾತಿನ ಲಯಕ್ಕೆ ಸಿಗದ ನಡೆವಳಿ ನಡೆವಳಿ ಇಲ್ಲದೇ ಬರಿಮಾತಿನ ಬಳುವಳಿ ಎಲ್ಲದರ ಸಮ ಸಮನಾದ ಸಮಷ್ಠಿ ಔಈತಿಯಿಂದಾವರಿಸಿರುವ ಮನಗಳಲಿ ಕಾಣುವುದೇ ಪ್ರೀತಿ? ಮೇಲೆ ತುಂಬಿರುವ ಮನಸುಗಳು ಇರುಳ ತಾರೆಗಳ ರೀತಿ ಇರುಳ ಸೆರಗಿನಲಿ ಕೋಟಿ ರಂಧ್ರಗಳಂತೆ ತಾರೆ ಮಿನುಗುತ್ತಲೇ ಮಾಯವಾಗುತಿದೆ ಪ್ರೀತಿ ಸಂತೃಪ್ತಿಯೆಂಬುದು ಕತ್ತಲೆಯಲಿ ಹುಡುಕುವ ಕರಿಮಣಿಯ ಮಾಲೆಯಂತೆ ತೋರಿದರೂ ಹುಡುಕಲೆತ್ನಿಸುತಿದೆ ನನ್ನ ಕವಿತೆ ಬದುಕೆಂಬ ಭಾರಿ ಜೂಜಾಟದಲಿ ಗೆದ್ದವರು ವಿರಳ ಗೆಲುವಲ್ಲೇ ಬೆರೆತಿವೆ ಸೋಲುಗಳ ಹೆರಳ ನಾನು ನೀನು ಆನು ತಾನು ಭಾಗ್ಯವಾಗುತಿದೆ ಒಳಗಣ್ಣ ತೆರಸಿ ಒಳದನಿಯ ನುಡಿಸಿ ಹಾಡಲೆತ್ನಿಸುತಿದೆ ಈ ನನ್ನ ಕವಿತೆ.. --- ಸಚಿನ್ ಕುಮಾರ ಬಿ.ಹಿರೇಮತಠ

ಬೆಳಕು

ಬೆಳಕನೂಡುವ ಹಣತೆ ತಮವ ತಿರಿಯಿತು ತನ್ನ ಕೆಳಗೊಂಡಿಷ್ಟು ಬಿಟ್ಟಿತೇಕೋ ನಾನರಿಯೆ ಕತ್ತಲೆಂದರೇ ಬೆಳಕಿಗೆ ಹಿರಿ ಹಿರಿ ಹಿಗ್ಗು ನುಗ್ಗಿ ಎಲ್ಲ ನುಂಗಿ ಹಾಕಬಹುದಲ್ಲ! ಕತ್ತಲೆಗೂ ಅಷ್ಟೇ ಬೆಳಕಿನಲ್ಲಡಗಿ ಹೋಗುವ ತವಕ ಹ್ಯಾಗೋ ಒಂದು ರೀತಿ ಆದರೆ ಸಾಕು ಪುನೀತ ಬೆಳಕೆಂದರೆ ಬೆಂಕಿ ಶಾಖ ಎನ್ನುವುದು ವಿಜ್ಞಾನ ಒಳಿತು ಅರಿವು ಎನ್ನುತ್ತದೆ ಬರೀ ಜ್ಝಾನ ಬೆಳಕೆಂದರೆ ಎದೆಯ ನಗು ಕಣ್ಣ ಹೊಳಪು, ಆತ್ಮಜ್ಞಾನ ಎಂದಷ್ಟೇ ನನ್ನ ಮಾತು -- ರನ್ನ ಕಂದ

ನಿರೀಕ್ಷೆ

ನಗುವೊಂದು ನಿಂತಿದೆ ತುಟಿಯ ಅಂಚಲ್ಲೆ ಎದೆಯ ದುಗುಡವ ತಡವಿಕೊಂಡು ಮಂದಹಾಸವಾಗಿ ನಡೆದಷ್ಟು ಕಲ್ಲುಮುಳ್ಳಿನ ಹಾದಿ ಬದಿಗೆಲ್ಲ ನೋಡಿ ನಗುವವರದೇ ಬೀದಿ ಕಾರುಣ್ಯ ರಸ ಹಳಸಿದೆ ಎಲ್ಲರಲಿ ಕಲ್ಲರಳುವ ಸಮಯವಿಲ್ಲ ಇಲ್ಲಿ ಅಗುಳ ಕಂಡರೇ ಕರೆವ ಕಾಗೆಯಂತಿಲ್ಲ ಮನುಜ ಕಂಡರೂ ಕಾಣದಂತಿದ್ದರೆ ಎಲ್ಲವೂ ಸಹಜ ಮನ-ಮನದ ನಡುವಿನ ಸೋಪಾನ ಸಡಿಲ ಬದುಕು ಬಾಳುವುದಿಲ್ಲಿ ಇನ್ನೂ ಜಟಿಲ ನಗು ತಾ ಹುಟ್ಟಬೇಕಿದೆ ದಿನವೂ ಮನದ ಕದ ತಟ್ಟಬೇಕಿದೆ ನಗುವು ಮನಕೆ ಮನದ ಮುದವಾಗಲೇಬೇಕು ಆಗ ಮಾತ್ರ ಹಸನು ನಂಮ ಬದುಕು -- ರನ್ನ ಕಂದ

ನಿಂಮ ಧರ್ಮ ಆಚರಿಸಿ; ಅನ್ಯ ಧರ್ಮ ಗೌರವಿಸಿ

ನಮಗೆ ವಾಕ್ ಸ್ವಾತಂತ್ರ್ಯ ಇದೆ. ಆದರೆ ಸ್ವೇಚ್ಛಾಚಾರವಿಲ್ಲ. ಅದೂ ಧರ್ಮಗಳ ವಿಷಯದಲ್ಲಿ ಇದು ಸಲ್ಲ.ಒಂದು ಧರ್ಮದ ಬಗ್ಗೆ ಪರ-ವಿರೋಧ ಸಹಜ.ವಿರೋಧಿಸುವವರು ತಂಮ ಪಾಡಿಗೆ ತಮಗಿಷ್ಟವಾದ ರೀತಿ ಆ ಧರ್ಮವನ್ನು ಪಾಲಿಸಬೇಕು. ಅನ್ಯ ಧರ್ಮಗಳನ್ನು ಗೌರವಿಸಬೇಕು. ಹಿಂದೂ ಧರ್ಮದಲ್ಲಿನ ಕೆಲವು ಆಚರಣೆಗಳು ಮೇಲ್ವರ್ಗದವರಿಗಿದ್ದುದರಿಂದಲೇ ಬೇರೆ ಧರ್ಮಗಳುದಿಸಿದವೆಂದು ಇತಿಹಾಸ ಹೇಳುತ್ತದೆ. ಆದರೆ ಇಂದು ಎಲ್ಲವೂ ಅಂದಿನಂತೆ ಇಲ್ಲ. ಶೋಷಿತ ವರ್ಗಗಳು ಜಾಗೃತರಾಗಿದ್ದಾರೆ. ಮನುಜ ಮತ ವಿಶ್ವ ಪಥ ಎಂಬುದನ್ನರಿತಿದ್ದಾರೆ. ಆದರೆ ಈ ಬದಲಾವಣೆ ಆರೋಗ್ಯಕರವಾಗಬೇಕೆ ಹೊರತು ಪ್ರಗತಿಪರರು ಹೀಯಾಳಿಸುತ್ತ ಧರ್ಮಗ್ರಂಥ ಸುಡುವ ಮಟ್ಟಕ್ಕಿಳಿಯುವುದು ಹುಚ್ಚಾಟ. ಸಾರವಿಲ್ಲದ ಸಂಶೋಧನೆಗಳನ್ನು ನಂಬಿಸುವುದು ಮೂರ್ಖತನ. ಪುರಾಣ ವ್ಯಕ್ತಿಗಳನ್ನು ಹಂಗಿಸಿ ವಿಕೃತ ಸಂತೋಷ ಪಡುವುದು ತರವಲ್ಲ, ಪುರಾಣ ಪಾತ್ರಗಳು ಮೌಲ್ಯ ಪ್ರತಿಪಾದನೆಗಾಗಿ ರಚಿತವಾದವುಗಳು.ಅವುಗಳ ಅಸ್ತಿತ್ವ ಮುಖ್ಯವಲ್ಲ, ನಿಂಮ ಧರ್ಮವನ್ನ ನಿಂಮ ರೀತಿಯಲ್ಲಿ ಆಚರಿಸಿ.ಬೇರೆ ಧರ್ಮಗಳನ್ನು ಅದರ ನಂಬಿಕೆಗಳನ್ನು ಹೀಯಾಳಿಸುತ್ತ ಒದರುವುದು ಪ್ರಗತಿಪರತೆ ಅಲ್ಲ.

ಬೆಳಕಿಂಡಿ

ಕತ್ತಲ ಕೋಣೆ ಸಾಗಿದಂತೆ ಸಿಗುತಿಲ್ಲ ಯಾವುದೇ ಗೋಡೆ,ಕಿಟಕಿ,ಬಾಗಿಲು ಎದೆಯಲೇನೋ ದಿಗಿಲು ದನ ತಿಂದು ಹಸಿವು ನೀಗಿಸಿದವರು ಯಾರದೋ ಭಯಕ್ಕೆ ನಲುಗಿ ಅಸ್ತಿತ್ವ ಕಳೆದುಕೊಂಡವರು ಕಣ್ಣೀರಲೇ ನೆನೆದು ಒಡಲ ಹೊರೆದವರು ಮುಗಿಲು ನೋಡುತ್ತ ಪಾತಾಳ ಕಂಡವರು ಅನಿಷ್ಟಕ್ಕೆಲ್ಲ ಶನಿಯೇ ಕಾರಣನಲ್ಲ ನಿಂಮ ತುಳಿದವರು ಇಂತವರೇ ಅಲ್ಲ ಕಂತೆ ಪುರಾಣಗಳನು ನಂಬಿ ನಂಬದಿರಿ ಅಂತೆಯೇ ಎಂದೂ ಬಾಳದಿರಿ ಬೆಳಕಿಗಾಗಿ ನಂಮ ಬದುಕು ಮಾನವತೆಯಲ್ಲಿ ಅದನು ಹುಡುಕು ತಿಂದು ತೊಡುವ ಗೊಡೆವೆ ಬೇಡ ನಮಗೆ ಉಳಿಯುವುದು ಸತ್ಕರ್ಮಗಳು ಮಾತ್ರ ಕೊನೆಗೆ ಕತ್ತಲು ಕೋಣೆಗೆ ಹುಡುಕೋಣ ಎಲ್ಲರೂ ಸೇರಿ ಬೆಳಕಿಂಡಿ ಸಾಗಲಿ ಸಾಂಗತ್ಯ ನಲಿವಿಂದ ಬದುಕು ಜಟಕಾ ಬಂಡಿ -- ರನ್ನ ಕಂದ

ನಡುರಾತ್ರಿ

ನಿದ್ದೆ ಜೋರು ಸತ್ತ ಹೆಣದಂತೆ ಮೈ ಮೈಕೆಳಗೆ ಮೆತ್ತನೆಯ ಹಾಸು ಮನದೊಳಗೆ ಕೊಳಕು ಕಾಠಿಣ್ಯದ ರೇಸು ಸೋಂಪಾದ ಸುಖ ನಿದ್ರೆ ಹಲವು ಸುಖವಿರುವ ಕನಸುಗಳ ಪರುವ ಬಡವ ಬಲ್ಲಿದರ ಏಕಮಾನ ನಡುರಾತ್ರಿಯ ತುಂಬ ಒಂದೇ ತೆರ ಮೌನ ಹೊಕ್ಕ ಇರುಳು ನೆಮ್ಮದಿ ತುಂಬಿದ ಕೊರಳು ಬಾಳದಿನದಲ್ಲೀಗ ನಡುರಾತ್ರಿ ಮುಂದೆ ಬೆಳಗು ಬೈಗು ಇರಲೀ ಸದಾ ತಂಪೆರೆವ ನಡುರಾತ್ರಿ ನೋವಿನೊಳಗಿಂದು ಅಡಗಿದೆ ನಲಿವು ತುಂಬಿದ ಮೈತ್ರಿ --- ರನ್ನ ಕಂದ

ಬೆಂಕಿ

ಬೆಂಕಿ ನಗುತ್ತಿದೆ ದಲಿತರ ಕಪ್ಪು ಚರ್ಮವ ನೋಡಿ ತನ್ನ ಧಗೆಯೊಳಗೆ ಅವಿತ ಕಪ್ಪಿನೊಂದಿಗೆ ಹೋಲಿಸಿಕೊಂಡು ಬೆಂಕಿ ನಗುತ್ತಿದೆ ಬಿಳಿಯ ಹೂವುಗಳು ಮಾತ್ರ ಅರಳುತ್ತಿವೆ ದಿನವಿಡೀ ಬದುಕಿ ಅರಳಿಸದೇ ಉಳಿದವುಗಳ ನೆರಳಿಗಷ್ಟೇ ನೂಕಿ ಸತ್ತ ಸಾವಿಗೂ ಸುದ್ದಿಯಿಲ್ಲದಂತೆ ಬೆಂಕಿ ಸದ್ದಡಗಿಸುತಿದೆ ತನ್ನ ತಾನರಿಯದ ಕಪ್ಪು ಬೆಪ್ಪಾಗುತಲಿದೆ ಬೆಂಕಿಯ ಅಪ್ಪಿ ಮುಪ್ಪಾಗುತಿದೆ ಮೈ ಬೆವರು ರಕ್ತ ತಿಂದು ತೇಗುವುದೆಲ್ಲ ಒಂದೇ ಇರಲು ಎಲ್ಲಿಯದು ಈ ದಲಿತ ಪಟ್ಟ ಕಟ್ಟಬೇಕಿದೆ ಈ ಬಗೆಯ ಶೋಷಣೆಗೆ ಚಟ್ಟ ಬೆಂಕಿಯ ನಗುವಳಿಸಿ ಸುಟ್ಟ ಗಾಯದನುಭವವ ಮಾಡಿಸಬೇಕಿದೆ ಈ ಹಾಳು ಬೆಂಕಿಗೆ., --- ರನ್ನ ಕಂದ

Email Sent from Mobile

??? ? ??????? ??????? ?????????? ? ????? ??? ? ???? ??????? ??????? ??????????? ? ????? ??????? ??? ?????? ???????? ??????? ????????? ??????? ???????? ???????? ???????? ???????? ????????? ??????? ????? ???????? ??????? -- ???? ???

ಭೂತಾಯಿಯ ಅಳಲು

ಜಲ ಕೊಟ್ಟೆ ನೆಲ ಕೊಟ್ಟೆ ಉಸಿರಾಡಲು ಬಲ ಕೊಟ್ಟೆ ಸಿರಿ ಕೊಟ್ಯೆ ಸುಖ ಕೊಟ್ಟೆ ಹೆಸರಾಗೋ ಛಲ ಕೊಟ್ಟೆ ಬಲಿತು ನರ ನೀನು ಮಗುವೆಂದೇ ಮುದವಿಟ್ಟೆ ಅದಕೆ ನೀ ಪ್ರತಿಯಾಗಿ ನನ್ನೆದೆಗೆ ನೋವಿಟ್ಟೆ ಹಿಂದೆಂದೂ ಕಂಡಿರದ ಕಷ್ಟಗಳ ತಂದಿಟ್ಟೆ ಅರಿಯದಿರೇ ನೀನಿದನು ಒಡೆವುದು ಸಹನೆ ಕಟ್ಟೆ -- ರನ್ನ ಕಂದ

ಮಳೆ ಬಿಲ್ಲು

ಬಿಸಿಲ ಎದೆಗೆ ಸುರಿದ ಮಳೆ ನೆಲದಿ ಘಮದ ಸೊಲ್ಲು ಗಗನದಂಚು ಸೇರಿ ಇಳೆ ನಡುವೆ ಮಳೆಯ ಬಿಲ್ಲು --- ರನ್ನ ಕಂದ

ವಾಸ್ತವ

ಸದ್ಯಕ್ಕೆ ಇಲ್ಲೇ ಇದ್ದೇನೆ ಅಸಹನೀಯ ಸನ್ನಿವೇಶದಲಿ ಆಗಾಗ ಉಸಿರಾಡುತ್ತ ಚೀರಾಡುತ್ತ ಸತ್ಯವನು ಕತ್ತಲೆಯಿಂದ ತೊಳೆಯುತ್ತ ಇಲ್ಲೇ ಇದ್ದೇನೆ ಬುದ್ಧನ ನಗು ಕೇಳಿಸಿದರೂ ನಗಲಾರದ ಸ್ಥಿತಿ ನಂದು ಎಲ್ಲ ವೇದಾಂತ ಕಟ್ಟಿದ್ದೇನೆ ಅವುಗಳ ಮೇಲೆ ನಿಂತಿದ್ದೇನೆ ಇಲ್ಲೇ ಇದ್ದೇನೆ ಸಾವಿನ ಹೆಗಲಿಗೆ ಏಣಿ ಬರುವ ತನಕ ಬದುಕಿಗಾಗಿ ಬಡಿದಾಡುತ್ತ ಇಲ್ಲಿಯೇ ಇದ್ದೇನೆ --- ರನ್ನ ಕಂದ

ಪರಿಣಾಮ

ಹೂವೇನೋ ಅರಳುತ್ತವೆ ಜತೆಗೆ ಪುಂಡ ದುಂಬಿಗಳು ಕೆರಳುತ್ತವೆ ಎಲ್ಲ ಮುಗಿದಾಗ ಮನಸುಗಳು ನರಳುತ್ತವೆ -- ರನ್ನ ಕಂದ

ಈಗ

ಕಣ್ಣ ಕೂಡಿ ಮಾತುಗಳನು ಆಡಲಾರೆ ನಾ ನೆದರು ನೇರ ದಿಟ್ಟಿಸುತಲಿ ನೋಡಲಾರೆ ನಾ ಎದೆಯ ಹಾದಿ ತುಂಬ ಸಾಲು ಸಾಲು ದೀಪದಂತೆ ಹೆಜ್ಜೆ ನಡೆಯ ರೀತಿ ತುಂಬ ಹಾಗೇ ಹಾಗೇ ಕುಣಿದ ಗೆಜ್ಜೆ ಮನದ ಮುಗಿಲ ಅಂಚಿಗೆಲ್ಲ ನೋವು ತುಂಬಿದ ಮೋಡ ಹರೆಯ ವನದ ಕೊರಳಿನಲ್ಲಿ ಬರಿಯ ವಿರಹ ಹಾಡ -- ರನ್ನಕಂದ

ಪ್ರತಿಫಲ

ಬಡವನಾಗಿ ಹುಟ್ಟಿ ಗಳಿಸಿದ್ದು ಬರೀ ಹೃದಯ ಶ್ರೀಮಂತಿಗೆ ಹಸಿದ ಹೊಟ್ಟೆಯನದು ತುಂಬಲಿಲ್ಲ ಬಡವನಿಗೆ ಸಿಟ್ಟಿನ ಹೊರತು ದವಡೆಗೆ ಏನೂ ದಕ್ಕಲಿಲ್ಲ -- ರನ್ನ ಕಂದ

ಹೋರಾಟ

ಅಳಿದುಳಿದ ಕನಸುಗಳ ಹೊತ್ತು ನಿಂತಿದ್ದೇನೆ ಕನಸ ಕೊಲ್ಲುವವರ ನಡುವೆ ಮನಸು ಮಾಡಿ ನನಸಾಗಿಸಲು ಮೈ ತುಂಬ ಗಾಯ ಮಾಗಬಹುದು ಛಲವಿಲ್ಲದ ಕಾರ್ಯ ಗೆಲ್ಲಬಹುದೇ? ಒಂದು ಕೈಯಲ್ಲಿ ಪ್ರಯೋಗ ಇನ್ನೊಂದರಲ್ಲಿ ಹೋರಾಟ ಅಸ್ತ್ರಗಳೆರಡನ್ನು ಹಿಡಿದು ಸನ್ನದ್ಧನಾಗಿದ್ದೇನೆ -- ರನ್ನ ಕಂದ

ಇಂದಿನ ರೈತ

ನೇಗಿಲು ಸಹ ಈಗೀಗ ಶೂಲದಂತೆ ತೋರಿ ಇರಿದಂತೆ ಹೆದರಿಸುತ್ತಿದೆ ಕ್ಯಾಲೆಂಡರ್ ನ ದಿನಗಳು ಸಾವಿಗೆ ನೇರ ಸೋಪಾನದ ಹಿಡಿಕೆ ಬರದ ಮಳೆ ಎದೆಯ ಕನಸುಗಳನು ಅಣಕಿಸುತಿದೆ ಬ್ಯಾಂಕಿನ ಸಾಲದ ಅಂಕಿಗಳು ಎದೆಯ ನಡುಗಿಸುತಿವೆ ನೇಗಿಲ ಯೋಗಿಯ ಧರ್ಮ ಅನಾಥ ಎಲ್ಲ ಜಂಜಾಟಗಳ ಉರುಳು ಬಿಟ್ಟೀತೇ ಇವನ ಕೊರಳು ಸಾವೇ ಸದ್ಯ ಅವನ ಬಂಧು ಶರಣಾಗುತಿಹ ತನ್ನ ಸ್ವಾಭಿಮಾನವ ಕೊಂದು. -- ರನ್ನ ಕಂದ

ಹೋಲಿಕೆ

ಮನುಜನೆದೆಯ ಮಾತ್ಸರ್ಯದ ಬೆಂಕಿಯ ಮುಂದೆ ಸೂರ್ಯನೆದೆಯ ಬೆಂಕಿ ತುಸು ಡಲ್ಲು -- ರನ್ನ ಕಂದ

ಅಸಲು-ಬಡ್ಡಿ

ನಿನ್ನ ಸ್ನೇಹದ ಸಾಲಕ್ಕೆ ಅನುದಿನವೂ ಪ್ರೇಮದ ಬಡ್ಡಿ ಕಟ್ಟುತ್ತಿರುವೆ -- ರನ್ನ ಕಂದ

ಪ್ರಶಸ್ತಿ ವಾಪಸಾತಿ ಪ್ರಹಸನ

ಅಂದು ಪಡೆದೆವು ಪದವಿ ಗೌರವ ಸಾರಸ್ವತದ ಪ್ರಶಸ್ತಿಯ ಇಂದು ಉರಿಯಿತು ಮನದಿ ರೌರವ ಮರಳಿಸುತಲಿ ಪ್ರಶಸ್ತಿಯ ರೈತನೊಡಲಿನ ಬರಿಯ ಬಾನಲ ನಮ್ಮ ಕಣ್ಣಿಗೆ ಕಾಣದು ಚೈತ್ರಹೆಣ್ಣಿನ ಜೀವಹರಣವು ನೆಮ್ಮಿ ಎಂದು ತೋರದು ಮಡಿದು ಹೋದ ದಕ್ಷ ರಕ್ಷಕ ನಮ್ಮ ನೆನಪಿಗೆ ಬಾರನು ಗೋವುಹಂದಿಯ ತಿನ್ನಲೆಸಗುತ ಮರೆವೆವಿನ್ನು ನಮ್ಮನು ನೆರೆಯ ಮನೆಯ ದುಃಖ ನೋಡುತ ನಿಂತ ನಮ್ಮಯ ಪಾಡನು ಹಾಡತೊಡಗಿವೆ ಒಂದೇ ಗೂಡಿನ ಒಂದೇ ಚೊಲ್ಲಿನ ಹಾಡನು ಒಂದು ಬೀಳಲು ಎಲ್ಲ ಬಿದ್ದವು ಎಂತ ಸುಂದರ ನಾಟಕ ಎಲ್ಲ ಮನದಿ ಲೆಕ್ಕ ತಪ್ಪಿದ ಪೂರ್ಣವಲ್ಲದ ಕೋಷ್ಠಕ

20 Amazing Scientific Reasons Behind Hindu Traditions

Image
source : Desinema.com 1.   Joining Both Palms Together To Greet In Hindu culture, people greet each other by joining their palms – termed as “Namaskar.” The general reason behind this tradition is that greeting by joining both the palms means respect. However, scientifically speaking, joining both hands ensures joining the tips of all the fingers together; which are denoted to the pressure points of eyes, ears, and mind. Pressing them together is said to activate the pressure points which helps us remember that person for a long time. And, no germs since we don’t make any physical contact! 2.  Why Do Indian Women Wear Toe Ring image  courtesy Wearing toe rings is not just the significance of married women but there is science behind it. Normally toe rings are worn on the second toe. A particular nerve from the second toe connects the uterus and passes to heart. Wearing toe ring on this finger strengthens the uterus. It will keep it healthy by regu...