ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?
ನವೆಂಬರ್ 26, 2008 ಭಾರತದ ಇತಿಹಾಸದಲ್ಲಿ ಕಪ್ಪು ಅಕ್ಷರಗಳಲ್ಲಿ ಬರೆದಿಡಬೇಕಾದಂಥ ದಿನ. ಮುಂಬಯಿ ಮಹಾನಗರದಲ್ಲಿನ ಹೋಡೆಲ್ಲುಗಳ ಮೇಲಿನ ಉಗ್ರರ ಅಟ್ಟಹಾಸವನ್ನು ಕಂಡರಿತ ದಿನ. ನೂರಾ ಐದು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದ ಸ್ಮಾರಕವೊಂದು ಮೈ ಸುಟ್ಟುಕೊಂಡ ದಿನ. ಭಾರತಿಯರ ಮೃದು ಧೋರಣೆಗೆ ಕೊಡಲಿ ಪೆಟ್ಟು ಬಿದ್ದ ದಿನ.ಹೀಗೆ ಬೆಳೆಯುತ್ತಾ ಹೋಗುತ್ತದೆ ದಿನ ದಿನಗಳ ಪಟ್ಟಿ. 2004ರಲ್ಲಿ ನಾವು ಮುಂಬಯಿಗೆ ಪ್ರವಾಸಕ್ಕೆ ಹೋದಾಗ ಗೇಟ್ ವೇ ಆಫ್ ಇಂಡಿಯಾದ ಎದುರು ನಿಂತು ಚಿತ್ತಾರ್ಷವಾಗಿ ಕಾಣುತ್ತಿದ್ದ ತಾಜ್ ಹೋಟೆಲನ್ನು ಕಣ್ಣಾರೆ ಸವಿದು ವಾಹ್..! ತಾಜ್ ಎಂದು ಕಣ್ತುಣಬಿಕೊಂಡು ಬಂದಿದ್ದೆವು. ಮುಂದೆ ನೌಕರಿ ಸಿಕ್ಕಾಗ ಒಮ್ಮೆಯಾದರೂ ಈ ಪಂಚತಾರಾ ಹೋಟೆಲ್ಲಿಗೆ ಗೆಳತಿಯೊಡನೆ ಹೋಗಿ ಬಂದರೆ ಸಾಕು ಎಂದು ನನ್ನೊಳಗೆ ಯೋಜನೆ ಹಾಕಿಕೊಂಡಿದ್ದೆ. ತಾಜ್ ಹೊತ್ತಿ ಉರುಯುತ್ತಿರುವಾಗ ಎಲ್ಲಿಲ್ಲದ ನೋವು, ತಳಮಳ ಜೊತೆಗೆ ನನ್ನಾಸೆಯೂ ಭಾಗಶಃ ಹೊತ್ತಿ ಉರಿದು ಹೋಗುತ್ತಿತ್ತು. ರೋಷ ಉಕ್ಕುತ್ತಿತ್ತು. ನಮ್ಮ ಮನೆಗೆ ಯಾರೋ ಬೆಂಕಿ ಇಟ್ಟಂತೆ ಭಾಸವಾಗುತ್ತಿತ್ತು. ನವೆಂಬರ್ 27, 2008 ರಂದು ಶಾಲೆಗೆ ಹೋಗಲು ಮನಸ್ಸೇ ಇರಲಿಲ್ಲ. ಆದರೂ ಬೇರೆ ವಿಧಿ ಇರಲಿಲ್ಲ. ಮನಸ್ಸಿಲ್ಲದೆ ಪಾಠ ಮಾಡುವುದೆಂತು? ಒಬ್ಬ ವಿದ್ಯಾರ್ಥಿ ಕೇಳಿದ : "ಸರ್, ಮುಂಬಯಿಯಲ್ಲಿ ಭಯೋತ್ಪಾದಕರು ತಾಜ್ ಹೋಟೆಲ್ ಮೇಲೆ ಬಾಂಬ್ ದಾಳಿ ನಡೆಸಿದ್ದಾರಂತೆ? ನಿನ್ನೆ ಟಿವಿಯಲ್ಲಿ ನೋಡಿದ್ವಿ. ಸರ್ ಇವತ್ತು ಬೆಳಿ...