ನಿಂಮ ಧರ್ಮ ಆಚರಿಸಿ; ಅನ್ಯ ಧರ್ಮ ಗೌರವಿಸಿ
ನಮಗೆ ವಾಕ್ ಸ್ವಾತಂತ್ರ್ಯ ಇದೆ. ಆದರೆ ಸ್ವೇಚ್ಛಾಚಾರವಿಲ್ಲ. ಅದೂ ಧರ್ಮಗಳ ವಿಷಯದಲ್ಲಿ
ಇದು ಸಲ್ಲ.ಒಂದು ಧರ್ಮದ ಬಗ್ಗೆ ಪರ-ವಿರೋಧ ಸಹಜ.ವಿರೋಧಿಸುವವರು ತಂಮ ಪಾಡಿಗೆ
ತಮಗಿಷ್ಟವಾದ ರೀತಿ ಆ ಧರ್ಮವನ್ನು ಪಾಲಿಸಬೇಕು. ಅನ್ಯ ಧರ್ಮಗಳನ್ನು ಗೌರವಿಸಬೇಕು.
ಹಿಂದೂ ಧರ್ಮದಲ್ಲಿನ ಕೆಲವು ಆಚರಣೆಗಳು ಮೇಲ್ವರ್ಗದವರಿಗಿದ್ದುದರಿಂದಲೇ ಬೇರೆ
ಧರ್ಮಗಳುದಿಸಿದವೆಂದು ಇತಿಹಾಸ ಹೇಳುತ್ತದೆ. ಆದರೆ ಇಂದು ಎಲ್ಲವೂ ಅಂದಿನಂತೆ ಇಲ್ಲ.
ಶೋಷಿತ ವರ್ಗಗಳು ಜಾಗೃತರಾಗಿದ್ದಾರೆ. ಮನುಜ ಮತ ವಿಶ್ವ ಪಥ ಎಂಬುದನ್ನರಿತಿದ್ದಾರೆ.
ಆದರೆ ಈ ಬದಲಾವಣೆ ಆರೋಗ್ಯಕರವಾಗಬೇಕೆ ಹೊರತು ಪ್ರಗತಿಪರರು ಹೀಯಾಳಿಸುತ್ತ ಧರ್ಮಗ್ರಂಥ
ಸುಡುವ ಮಟ್ಟಕ್ಕಿಳಿಯುವುದು ಹುಚ್ಚಾಟ. ಸಾರವಿಲ್ಲದ ಸಂಶೋಧನೆಗಳನ್ನು ನಂಬಿಸುವುದು
ಮೂರ್ಖತನ. ಪುರಾಣ ವ್ಯಕ್ತಿಗಳನ್ನು ಹಂಗಿಸಿ ವಿಕೃತ ಸಂತೋಷ ಪಡುವುದು ತರವಲ್ಲ, ಪುರಾಣ
ಪಾತ್ರಗಳು ಮೌಲ್ಯ ಪ್ರತಿಪಾದನೆಗಾಗಿ ರಚಿತವಾದವುಗಳು.ಅವುಗಳ ಅಸ್ತಿತ್ವ ಮುಖ್ಯವಲ್ಲ,
ನಿಂಮ ಧರ್ಮವನ್ನ ನಿಂಮ ರೀತಿಯಲ್ಲಿ ಆಚರಿಸಿ.ಬೇರೆ ಧರ್ಮಗಳನ್ನು ಅದರ ನಂಬಿಕೆಗಳನ್ನು
ಹೀಯಾಳಿಸುತ್ತ ಒದರುವುದು ಪ್ರಗತಿಪರತೆ ಅಲ್ಲ.