Posts

Showing posts from October, 2010

ಪ್ರೀತಿಯೊಂದೆ ಕಾರಣ...

ನನ್ನ ನಿನ್ನ ನಡುವಲಿ ಯಾವ ಬಗೆಯ ಸ್ನೇಹವೋ.. ಭಿನ್ನ ಭಿನ್ನ ಮನದಲಿ  ಒಂದೇ ಬಗೆಯ ಮೋಹವೋ ನೋವು ಕರಗಿ ನಲಿವು ಮಿರುಗಿ ಇರಲಿ ಒಲವ ಹೂರಣ ಸಾವಿನಾಚೆಗೂ ಜೀವವಿರುಲು ಪ್ರೀತಿಯೊಂದೆ ಕಾರಣ    ---ಸಚಿನ್ ಕುಮಾರ ಬಿ.ಹಿರೇಮಠ

ಕಾಯುತಿಹೆ ನಿನಗಾಗಿ...

ಸೂರ್ಯ ಮೋಡದ ಮರೆಯಲ್ಲಿ ಅವಿತಿದ್ದ ಇರುಳು ಮೈ ಕೊಡವಿ ಮೇಲೇಳುತ್ತಿತ್ತು ನಿನಗೆಂದೇ ತರಿಸಿದ್ದ ಚಹಾ ಹಬೆಯಾರಿ ತಣ್ಣಗಾಗಿತ್ತು ಕೆಫೆಯಲ್ಲಿದ್ದವರೆಲ್ಲ ಹೋಗಿ ಎಷ್ಟೋ ಹೊತ್ತಾಗಿತ್ತು.. ಆದರೂ ನೀ ಬರಲಿಲ್ಲ ನನಗೇನೂ ಬೇಜಾರಿಲ್ಲ... ನಿನ್ನ ದಾರಿ ಕಾಯುವುದರಲ್ಲಿ.. ನೀ ಬರುವೆ ಎಂದು ನಾ ಕಾಯುವುದು ಇನ್ನು ನಿಲ್ಲಿಸಿಲ್ಲ.. ನಿನಗಾಗಿ ದಿನ ಕಾಯುವೆ ಒಂದು ಕಪ್ ತಣ್ಣಗಾದ ಚಹಾದೊಂದಿಗೆ ಕೆಫೆಯೊಂದರಲ್ಲಿ..     ---ಮಹಾಂತೇಶ ದೊಡ್ಡಮನಿ

ಮಿಲನ

ನಸು ನಾಚಿಕೆಯೇಕೆ ಪಿಸುಮಾತಿಗೆ ಬಿಗಿದಪ್ಪಿ ಮುತ್ತಿಡಲು ಇಲ್ಲ್ಯಾರ ಹೆದರಿಕೆ? ಬೇರಾರು ಇಲ್ಲ, ಹೂ ಮಂಚವಂದನ್ನು ಬಿಟ್ಟು ದೀಪದ ಬೆಳಕಿರಲಿ ನೋಡಬೇಕು ನಿನ್ನ ಮುಖ ನಾಚಿ ಕೆಂಪೇರುವುದ.. ದೀಪವು ಸಹ ನಾಚಿಕೊಳ್ಳಲಿ ನಿನ್ನ ಕೆನ್ನೆ ಕೆಂಪಿನ ಮುಂದೆ ಬಾ ಪ್ರಿಯ ಸಖಿ ಬಿಗಿದಪ್ಪು,ತೆಕ್ಕೆಯೊಳು ಸಂಭವಿಸಲಿ ಅವ್ಯಕ್ತ ಒಲುಮೆ ನರನಾಡಿಗಳಲ್ಲಿ ಹರಿಯಲಿ ಜೀವಕಳೆ..    ---ಮಹಾಂತೇಶ ದೊಡ್ಡಮನಿ

ಒಲುಮೆಯ ಕರೆ

ಚೆಲುವೆಯ ಒಲುಮೆಯ ಕರೆಗೆ ಒಲ್ಲೆ ಎನಲಾದೀತೆ? ಪಿಸು ನುಡಿಗಳ ಬಿಸಿಯುಸಿರು ಬೇಡ ಎನಲಾದೀತೆ? ಬೇಕೆನಿಸುತಿದೆ ಅವಳ ಸಾಂಗತ್ಯ ಜೀವಮಾನದುದ್ದಕ್ಕೂ ಜೇನಸವಿಯಂತೆ     ---ಮಹಾಂತೇಶ ದೊಡ್ಡಮನಿ

ಹೊದಿಕೆ

ಚೆಲುವೆ ಮತ್ತೇ ಬಂತು ಚಳಿಗಾಲ ಮೈ ಕೊರೆವ ಚಳಿ ನನಗೆ ಅಪ್ಪಿತಪ್ಪಿಯೂ ನೆನಪಾಗುತ್ತಿಲ್ಲ ಬೆಚ್ಚಗಿನ ಹೊದಿಕೆ ಆದರೆ ಬೆಂಬಿಡದೆ ಕಾಡುತಿವೆ ನಿನ್ನಪ್ಪುಗೆಯಲಿ ಕಳೆದ ಬೆಚ್ಚನೆಯ ಗತರಾತ್ರಿಗಳ ನೆನಕೆ..    ----ಮಹಾಂತೇಶ ದೊಡ್ಡಮನಿ

ಬೇರು(ದಿ.28-09-2008ರಂದು 'ಸಂಯುಕ್ತ ಕರ್ನಾಟಕ' ದಿನಪತ್ರಿಕೆಯ 'ಸಾಪ್ತಾಹಿಕ ಸೌರಭ'ದಲ್ಲಿ ಪ್ರಕಟಗೊಂಡಿದ್ದ ಕತೆ)

Image
ನಾ ನು ಅತ್ತೆಯ ಮನೆಗೆ ಹೋದದ್ದು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ಹೋಗಿದ್ದೆನಾದರೂ ಈ ಸಲ ಹೋದುದರ ವೈಶಿಷ್ಟ್ಯವೇ ಬೇರೆ. ಈ ಸಲ ಬದುಕಿಗೆ ಒಂದು ಭದ್ರ ನೆಲೆಗಟ್ಟನ್ನು ರೂಪಿಸಿಕೊಂಡಿದ್ದೆ. ತೃಪ್ತಿ ತರುವಂಥ ಸರ್ಕಾರಿ ಕೆಲಸ, ನನ್ನ ತಂದೆ ತಾಯಿ, ಮಾವ ಅತ್ತೆ ನನ್ನ ಹರದಯ ಸನ್ನಿಧಿಯಲ್ಲಿದ್ದರು. ನಾನು ಆರಾಧಿಸುತ್ತಿದ್ದ ನನ್ನ ಪ್ರೇಮ ದೇವತೆ 'ದೀಪಾ' ಬಗೆಗಿನ ನೂರಾರು ಕನಸುಗಳು, ಏನನ್ನಾದರೂ ಸಾಧಿಸಬೇಕೆಂಬ ಅದಮ್ಯವಾಧ ಛಲ - ಹೀಗೆ ಎಲ್ಲವನ್ನು ಸಮ್ಮಿಳಿಸಿಕೊಂಡು ನನ್ನ ಅತ್ತೆಯ ಮನೆಗೆ ಹೋಗಿದ್ದೆ. ತಂಗಿಯ ಮಗ ಎಂಬ ಕಾಳಜಿಯಿಂದ ನನ್ನನ್ನು ನನ್ನ ಕಾಲ ಮೇಲೆ ನಿಲ್ಲುವಷ್ಟು ಎರವಾಗಲು ನನಗೆ ಶಕ್ತಿ ಮೀರಿ ಶಿಕ್ಷಣ ಕೊಡಿಸಿ, ತಂದೆ ಇಲ್ಲದ ಕೊರಗು ಕಾಡದಿರಲಿ ಎಂದು ನನ್ನೆಲ್ಲಾ ಬೇಡಿಕೆಗಳನ್ನು ಈಡೇರಿಸಿದ್ದರು ನನ್ನ ಮಾವ.ಬಹುಶಃ ನನ್ನ ತಾಯಿ ಕೂಡ ಕೊಡದಷ್ಟು ಪ್ರಿತಿ ಮಮತೆಯನ್ನು ನನ್ನತ್ತೆ ನೀಡಿ ಏಳೆಂಟು ವರ್ಷ ಸಲುಹಿದವಳು.   ದೀಪಾ ಮತ್ತು ನಾನು ಬಾಲ್ಯದಿಂದಲೇ ಒಂದೇ ಗೂಡಿನ ಹಕ್ಕಿಗಳು. ಒಳ್ಳೆಯ ಮಿತ್ರರು. ಸ್ನೇಹ ತುಸು ಗಟ್ಟಿಗೊಂಡು ಪ್ರೀತಿಗೆ ತಿರುಗಿದ್ದು ನಮಮ್ರಿವಿಗೆ ತಡವಾಗಿ ಬಂದಿತು.   ಸ್ವಾರ್ಥವಿರದ ಅವಳ ಮನಸ್ಸು ಶುಭ್ರವಾಗಿತ್ತು.ಸದಾ ಮುಕ್ತವಾಗಿರುತ್ತಿತ್ತು. ಅವಳನ್ನು ಪ್ರೀತಿಸುವುದರಲ್ಲಿ ತಪ್ಪಿಲ್ಲ ಎಂದೆನಿಸಿತ್ತು. ನಮ್ಮಿಬ್ಬರ ಈ ಪ್ರೀತಿಯ ವಿಷಯ ನನ್ನತ್ತೆ ಮಾವನಿಗೂ ತಿಳಿದಿತ್ತು. ಈ ಸಲದ ಭೇಟಿ ನಮ್ಮ ಈ ಪ್ರೀತ...

ಮಿಠಾಯಿ ಗಾಡಿ (22-03-2009 ರಲ್ಲಿ ವಿಜಯ ಕರ್ನಾಟಕ ದಿನಪತ್ರಕೆಯ ಪುಟಾಣಿ ವಿಜಯದಲ್ಲಿ ಪ್ರಕಟಗೊಂಡ ಮಕ್ಕಳ ಕವಿತೆ)

ಮಿಠಾಯಿ ಗಾಡಿ ಬಂದಿದೆ ಅಮ್ಮ ಬೇಗನೆ ಬಾರಮ್ಮ ಸಕ್ಕರೆ ಕಡ್ಡಿ ಕೊಳ್ಳುವೆನಮ್ಮ ಕಾಸನು ತಾರಮ್ಮ.. ಹಸಿರು ಬಣ್ಣದ ಜಾಡಿಯೊಳಗೆ ಜಿಲೇಬಿ ಪೇಡಗಳು ನೀಲಿ ಬಣ್ಣದ ಜಾಡಿಯೊಳಗೆ ಹಲವು ಬರ್ಫಿಗಳು ಬಗೆ ಬಗೆ ಬಣ್ಣದ ಸಕ್ಕರೆ ಕಡ್ಡಿ ರುಚಿ ರುಚಿ ಬಿಸ್ಕತ್ತು ಹೆಚ್ಚಿಗ ತಿಂದರ ಸೋಹನ್ ಪಪ್ಪಡಿ ತಪ್ಪದು ಆಪತ್ತು ವಿದ್ಯೆಯ ಕಲಿತು ದಏಶವ ಮಾಳ್ಪ ಸಿಪಾಯಿ ಆಗುವೆನು ಅಲ್ಲಿಯವರೆಗೆ ಸ್ವಲ್ಪೇ ಸ್ವಲ್ಪ ಮಿಠಾಯಿ ತಿನ್ನುವೆನು      ---ಸಚಿನ್ ಕುಮಾರ ಬಿ.ಹಿರೇಮಠ

ಕೆಸರಿನ ಕಮಲ...

ಪಾಪ..!ಕರ್ನಾಟಕದ ಸ್ಥಿತಿ ಹೆಂಗಾಯ್ತಲ್ಲ..?ನಿಮ್ಗೆ ಆ ಕತೆ ನೆನಪಿರಬಹುದು. ಅದೆ ಎಲ್ಡು ಬೆಕ್ಕುಗಳಿಗೆ ಒಂದು ಮಂಗ ನ್ಯಾಯ ಹೇಳಿದ್ದು. ಇಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲೇ ತೃಪ್ತ ಮತ್ತು ಅತೃಪ್ತ ಬಣಗಳ ನಡುವಿನ ಜಟಾಪಟಿಯ ನಡುವೆ ಜೆಡಿಎಸ್ ಮತ್ತು ಕೈ ಪಕ್ಸದವ್ರು ಲಾಬ ಎಣಿಸ್ತಿದಾರೆ.ಸರ್ಕಾರ ಉಳಿಯುತ್ತೋ ಬೂಳುತ್ತೋ ಗೊತ್ತಿಲ್ಲಾ..ಅಲ್ರೀ, ಮಂತ್ರಿಗಿರಿ ಸಿಗ್ಲಿಲ್ಲಾ ಅಂತಾ ಪಕ್ಸಕ್ಕೆ ಹಿಂಗ್ ದ್ರೋಹಾ ಬಗ್ಯೋದಾ? ನಮ್ ಯಡ್ಯೂರಪ್ಪಂಗೂ ಬುದ್ಧಿ ಇಲ್ಲಾ.. ಕಣ್ಣೋರ್ಸೋಕೆ ಸೆರಗೆ ಬೇಕಿತ್ತಾ? ಕರ್ಚೀಫ ನಡೀತಿರ್ಲಿಲ್ವಾ? ಮುಖ್ಯಮಂತ್ರಿಯೋರ್ರೇ.. ಏನ್ ನಡೀತಿದೆ ಇಲ್ಲಿ..? ಆಡ್ಕೊಂಡ್ ನಗೋರ್ ಮುಂದೆ ಎಡ್ವಿ ಬೀಳ್ತಿದ್ದೀರಲ್ರೀ...! ರೇಣುಕಾಚಾರ್ಯರೇ... ನಿಮ್ಗೆ ನಿಯತ್ತು ಅನ್ನೋದು ಇದೆಯಾ? ರಾಜ್ಯದ ಜನತೆಯ ಉದ್ಧಾರ ನೋಡ್ತೀರಾ ಅತ್ವಾ ಬರೀ ನಿಮ್ ಸುಖಾನೇ ನೋಡ್ತೀರಾ.. ಥೂ..!ಓಡಿ ಹೋಗಿರೋ ಸಾಸಕರೇ.. ಜನರಿಗೆ ನೀಡಿದ್ದ ಭರವಸೆಗಳನ್ನಾ ಮೊದ್ಲು ಈಡೆರ್ಸಿ.. ಆಮ್ಯಾಕೆ ಸುಡಗಾಡಿಗೆ ಹೋಗ್ರಿ.. ನಿಮ್ನಾ ಆರಿಸಿ ತಂದಿರೋ ನಮಗೆ ಬುದ್ಧಿ ಇಲ್ಲಾ.. ಕೈ ಪಕ್ಸದೋರೇ...60 ವರ್ಷ ನೀವ್ ಮಾಡಿದ ಶೂನ್ಯ ಸಂಪಾದನೆ ಜನ್ರಿಗೆ ಗೊತ್ತಿದೆ. ಒಸಿ ಅವ್ರಿಗೆ ಸುಧಾರಣೆ ಮಾಡೋಕೆ ಅವ್ಕಾಸಾ ಮಾಡಿಕೊಡಿ.. ನಿಮ್ಗೆಲ್ಲಾ ವಯಸ್ಸಾಗಿದೆ. ಒಸಿ ರೆಸ್ಟ್ ಮಾಡಿ. ಇಂತಿ ನಿಮ್ ...

ಸ್ಥಿತಿ

ಗೆಳತಿ, ನಿನ್ನ ಕಣ್ಣುಗಳಲ್ಲಿ ಕರಗಿದ್ದೇನೆ ನಿನ್ನ ಸನಿಹವಿಲ್ಲದೆ ಸೊರಗಿದ್ದೇನೆ ---ಸಚಿನ್ ಕುಮಾರ ಬಿ.ಹಿರೇಮಠ

ನಯನಗಳು

ನಿನ್ನ ಮೊಗ ಕಂಡಾಗ ಅನ್ನಿಸಿತ್ತು ಕಮಲದಲ್ಲಿ ಕಮಲದಂತೆ ವದನದಲ್ಲಿ ನಯನದ್ವಯಗಳು ---ಸಚಿನ್ ಕುಮಾರ ಬಿ.ಹಿರೇಮಠ