Posts

Showing posts from August, 2012

ಜ್ಞಾನದ ಸಂದೇಶ ಹರಡುವ ಶಿಕ್ಷಕ ಬೆಳ್ಳುಬ್ಬಿ..

Image
ಶ್ರೀ ಸೋಮಶೇಖರ  ಬೆಳ್ಳುಬ್ಬಿ ವಿಜ್ಞಾನ ಮತ್ತು ತಂತ್ರಜ್ಞಾನದ ಕಬಂಧಬಾಹುಗಳಲ್ಲಿ ಜಗತ್ತು ಚಿಕ್ಕದಾಗುತ್ತಿದೆ. ಸತ್ಯ ಮತ್ತು ಸಂಶೋಧನೆ ನಿರಂತರವಾಗಿ ಈ ಯುಗದ ಪರಿಪಾಟವಾಗಿಬಿಟ್ಟಿದೆ. ಜ್ಞಾನ ಪ್ರಸಾರದ ಹಾದಿ ಹಿಂದಿಗಿಂತಲೂ ಸುಗಮವಾಗುತ್ತಲಿದೆ. ಹಿಂದೊಮ್ಮೆ ಬೇಕಾದ ಮಾಹಿತಿಯನ್ನು ಪಡೆಯಲು ಕೆಲದಿನಗಳೇ ಬೇಕಾಗುತ್ತಿದ್ದವು. ಆದರೆ ಇಂದು ಒಂದು ಬೆರಳ ತುದಿಯಂಚಿಗೆ ಬೇಕಾದ ಮಾಹಿತಿ ಲಭ್ಯವಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲ ಧ್ಯೇಯವೆಂದರೆ ಸಮಾಜಕ್ಕೆ ಒಳಿತಾಗಬೇಕೆಂಬುದು. ಇಂಥ ವಿಜ್ಞಾನ ಮತ್ತು ತಂತ್ರಜ್ಞಾನದ ಸುಗಮ ಆವಿಷ್ಕಾರವೆಂದರೆ ಮೊಬೈಲ್ ಪೋನ್. ಸ್ಮಾರ್ಟ್ ಫೋನ್,ಐಪಾಡ್,ಐಪೊನ್ ಟ್ಯಬ್ಲೆಟ್ ಕಂಪ್ಯುಟರ್ ನಂತಹ ಚತುರ್ವಾಣಿಗಳನ್ನು ಸಾಮಾನ್ಯರಿಗೆ ಬಳಸಲು ಎಲ್ಲೋ ಅಲ್ಪ ಸ್ವಲ್ಪ ತೊಂದರೆ. ಆದರೆ ಸಾಮಾನ್ಯ ಜಂಗಮವಾಣಿಯನ್ನು ಎಲ್ಲರೂ ಬಳಸುತ್ತಾರೆ. ಆದರೆ ಜಮಗಮವಾಣಿಗಳನ್ನು ಬರೀ ಸಂಭಾಷಿಸಲು ಅವರಿವರಿಗೆ ಬರೀ ಕಿಚಾಯಿಸಲು ಬಳಸುವವರೆ ಹೆಚ್ಚು. ಆದರೆ ಕೇವಲ ಒಂದು ಮೊಬೈಲ್ ಫೋನಿನಿಂದ ಒಂದು ಸ್ಪರ್ಧಾತ್ಮಕ ಸಮುದಾಯದ ಅಭಿಲಾಷೆಗಳನ್ನು ಈಡೇರಿಸುವಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ 'ಬನಹಟ್ಟಿ' ಪಟ್ಟಣದ ೊಬ್ಬ ಪ್ರಾಥಮಿಕ ಶಾಲಾ ಶಿಕ್ಷಕರಾದ ಶ್ರೀ ಸೋಮಶೇಖರ ಮಲ್ಲಪ್ಪ ಬೆಳ್ಳುಬ್ಬಿ ಅವರು ಯಶಸ್ವಿಯಾಗಿದ್ದಾರೆ. ಅವರು ಮೊಬೈಲ್ ಫೋನ್ ನ್ನು ಬಳಸಿಕೊಂಡ ರೀತಿಯೇ ವಿಭಿನ್ನ ಮತ್ತು ಶ್ಲಾಘನೀಯ. ಮೊಬೈಲ್ ಫೋನಿನಲ್ಲಿ ಇರುವ