Posts

Showing posts from 2009

ಮೊಬೈಲ್ ಬಳಸುವ ಮುನ್ನ....

Image
ನೀವು ಯಾವುದೊ ಟೆನ್ಷೆನ್ನಿನಲ್ಲಿರುತ್ತೀರಿ. ನಿಮ್ಮ ಮೊಬೈಲಿಗೆ ಅಪರಿಚಿತ ನಂಬರ್ನಿಂದ ಮೆಸೇಜೊಂದು ಬರುತ್ತೆ. ನೀವು ಆ ನಂಬರ್ರಿಗೆ 'who s dis?' ಅಂತ ಮೆಸೇಜು ಮಾಡುತ್ತೀರಿ. ಆದರೆ ಆ ನಂಬರ್ರಿನ ವಾರಸುದಾರ ನಿಮ್ಮ ಯಾವ ಪ್ರಶ್ನೆಗಳಿಗೂ ಒಂದಿನಿತೂ ಉತ್ತರಿಸುವುದಿಲ್ಲ. 'guess me' ಅಂತಲೋ ಇಲ್ಲವೇ ಬೇರೆ ಏನಾದರೊಂದು ಸಬೂಬು ಹೇಳುತ್ತ ಹೋಗುತ್ತಾನೆ. ನೀವು ತೀರ confuse ಆಗಿ ಕೋಪಗೊಳ್ಲುತ್ತೀರಿ. ಕಾಲ್ ಮಾಡಿ ಮಾತಲಾಡೆತ್ನಿಸಿದರೆ ಆ ಕಡೆಯಿಮದ ನೋ ಆನ್ಸರ್..! ಹೀಗಾದಾಗ ನನೀವು ಕೋಪದಲ್ಲಿ rubbish ಆಗಿ ಅಥವಾ ಯವುದೋ ಒಂದು ವಿಧಾನದಲ್ಲಿ ಬೈದು ಬಿಡುತ್ತೀರಿ. ಆದರೆ ಇವೆಲ್ಲದಕ್ಕಿಂತ ಮುಂಚೆ ತುಸು ಯೋಚಿಸಿ...    ಆ ಕಡೆಯವರು ನಿಮ್ಮ ಗೆಳೆಯರೋ,ಗೆಳತಿಯರೋ ಅಥವಾ ಆಪ್ತೇಷ್ಟರೊ ಆಗಿರುತ್ತಾರೆ. ಆಕಡೆಯವರು ಒಂದು ವೇಳೆ ನಿಮ್ಮ ಗೆಳತಿಯಾಗಿದ್ದರೆ ನಿಮ್ಮ ಬಗೆಗಿನ ಅವಳ ಭಾವನೆ ಕಮರಿ ಹೋಗುತ್ತದೆ. ನಿಮ್ಮ ಮತ್ತೊಂದು ಮುಖ ಅವಳೆದರು ಅನಾವರಣಗೊಂಡು ಬಿಡುತ್ತದೆ. ನೀವು ತುಂಬಾ ಚೀಪ್ ಎಂದು ಆಕೆ ತಿಳಿದುಕೊಳ್ಳಬಹುದು.ಇಲ್ಲವೆ ನಿಮ್ಮ ಬಗ್ಗೆ ಅವಳು ಇತರರಿಗೆ ಉಸುರಿಬಿಡಬಹುದು."ಏನೋ ಸ್ವಲ್ಪ ಕಿಚಾಯಿಸೋಣ ಅಂತಂದ್ರೆ ಹಾಗಾ ಬೈಯೋದು?" ಅಂತ ಆಡಿಕೊಳ್ಳಬಹುದು. ಒಂದು ಕ್ಷಣದ ಸಿಟ್ಟಿನಿಂದ ನಿಮ್ಮ ತೇಜೋವಧೆಯಾಗಬಹುದು. ಆದ್ದರಿಂದ ಅಪರಿಚಿತ ನಂಬರ್ರುಗಳಿಂದ ಬರುವ ಮೆಸೆಜುಗಳಿಗೆ ಸೌಮ್ಯವಾಗಿ ಉತ್ತರಿಸಿ. ಸೌಜನ್ಯದಿಂದಲೇ ವರ್ತಿಸಿ. ತೀರ ...

ಇದು ನಿರಂತರವಾಗಿ ಪ್ರಕಟಗೊಳ್ಳುತ್ತಿರುವ ಮಾಗ್ ಝೀನ್..

Image
ಜಗತ್ತಿನಲ್ಲಿ ಪ್ರಾರಂಭವಾದಾಗಿನಿಂದಲೂ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ ಅತ್ಯಂತ ಹಳೆಯ ಪತ್ರಿಕೆಯೆಂದರೆ 'ಕ್ವೆಟಿ'. ಇತ್ತೀಚಗೆ ಝೆಕ್ ಗಣರಾಜ್ಯದ ಪ್ರೇಗ್ ನಲ್ಲಿ ನಡೆದ 'ಸನೋಮಾ ಮ್ಯಾಗ್ ಝೀನ್ಸ್ ಪ್ರಹಾ' ಎಂಬ ಗೋಷ್ಠಿಯಲ್ಲಿ ಪ್ರಕಾಶಕ ಫ್ರಾಂಕ್ ಹಿಟ್ ಝರ್ಟ್ ಈ ಐತಿಹಾಸಿಕ ಸಂಗತಿಯನ್ನು ಬಹಿರಂಗಗೊಳಿಸಿದರು.   'ಕ್ವೆಟಿ' ಎಂದರೆ 'ಹೂವು' ಎಂದರ್ಥ. 1834ರಲ್ಲಿ ಜೆ.ಹೆಚ್.ಪಾಸ್ಫಿಸಿಲ್ ಎಂಬ ಪ್ರಕಾಶಕರಿಂದ ಜನ್ಮ ತಾಳಿದ 'ಕ್ವೆಟಿ'ಯ ಮೊದಲ ಸಂಪಾದಕ ಝೆಕ್ ಗಣರಾಜ್ಯದ ರಾಷ್ಟ್ರಗೀತೆಯ ರಚನಕಾರ ಮತ್ತು ಖ್ಯಾತ ನಾಟಕಕಾರನಾದ ಜೋಸೆಫ್ ಕೆಟ್ ಜೇನ್ ಟೈಲ್. 1834ರಿಂದ ಪ್ರಕಟಗೊಳ್ಳುತ್ತಿರುವ ಈ ಪತ್ರಿಕೆಗೆ ಈಗ 175ನೇ ತುಂಬು ಪ್ರಾಯ.       ಇದಕ್ಕೂ ಮುಂಚೆ ಅಮೆರಿಕದ 'ಸೈಂಟಿಫಿಕ್ ಅಮೆರಿಕನ್' ಎಂಬ ಪತ್ರಿಕೆಯೇ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ ಅತ್ಯಂತ ಹಳೆಯ ಪತ್ರಿಕೆಯೆಂದು ನಂಬಲಾಗಿತ್ತು.ಆದರೆ 1845ರಲ್ಲಿ ಪ್ರಕಟಗೊಂಡ ಇದು, 'ಕ್ವೆಟಿ' ಗಿಂತ 11ವರ್ಷ ಕಿರಿಯ ಪತ್ರಿಕೆಯೆಂಬುದು ಮೊನ್ನೆ ನಡೆದ ಗೋಷ್ಠಿಯಲ್ಲಿ ಚರ್ಚಿತವಾಯಿತು.   1834ರಲ್ಲಿ ಪ್ರಕಟಗೊಂಡ 'ಕ್ವೆಟಿ'ಯು ಮೊದಮೊದಲು ನಾಲ್ಕು ತಿಂಗಳಿಗೊಂದರಂತೆ ಪ್ರಕಟಗೊಳ್ಳುತ್ತಿತ್ತು. ಮುಂದೆ ದ್ವೈಮಾಸಿಕವಾಗಿ ಪ್ರಕಟಗೊಳ್ಳಹತ್ತಿತು.ಬರಬರುತ್ತ ದಶಕಗಳಿಂದೀಚೆಗೆ ಸಾಪ್ತಾಹಿಕವಾಗಿ ಓದುಗರ ಕೈ ಸೇರುತ್ತಿದೆ. ಇದರ ಿನ್ನೊಮದ...

ಬಿಸಿಲ ಬಾಲೆ

Image
ಅ ದೊಂದು ಸುಂದರ ಮಧ್ಯಾಹ್ನ. ನಾವು ತಲುಪಬೇಕಾದ ೂರು 100 ಕಿ.ಮೀ ಆಚೆ ಇತ್ತು. ಬೆಂಬಿಡದ ದಗೆಯಲ್ಲಿ ಮೈ ಕರಗಿ ಹೋಗುತ್ತಿತ್ತು. ಬಸ್ಸಿನಲ್ಲಿ ಅಲುಗಾಡಲನುವಾಗದಷ್ಟು ರಶ್ಶು. ಆ ನೂಕು ನುಗ್ಗಲಿನೊಮದಿಗೆ ಬಸ್ಸು ಚಲಿಸತೊಡಗಿತ್ತು. ಮಗ್ಗಲಿನ ೊಂದು ಸೀಟು ಖಾಲಿ ಆಗುತ್ತಿದ್ದಂತೆಯೇ ಹೊರಗಿನಿಂದ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಕರ್ಚಿಫನ್ನು ಕಿಟಕಿಯಿಂದ ಎಸೆದು ತಮ್ಮ ಮಗಳಿಗೆ ಸೀಟು ಕಾದಿರಿಸಿದರು. ನಮ್ಮಲ್ಲಿ ಬಸ್ಸುಗಳಲ್ಲಿ, ರೈಲುಗಳಲ್ಲಿ, ಸೀಟು ಕಾಯ್ದಿರಿಸುವ ರಿತಿ ಇದು. ಆ ಸೀಟು ಯಾರದ್ದೋ ಎಂದು ನಾವು ನಿರೀಕ್ಷಿಸುತ್ತಿರುವಾಗ ಇಪ್ಪತ್ತರ ಸನಿಹದ ಬಾಲೆಯೊಬ್ಬಳು ಆ ಸೀಟಿಗೆ ಬಂದು ಕುಳಿತಳು. ಅಪ್ರತಿಮ ಸುಂದರಿ ಅಲ್ಲದ್ದಿದ್ದರೂ ಮಾಸದ ಚೆಲುವು. ತುಸು ಕಿಲೋ ಮೀಟರುಗಳನ್ನು ನುಂಗಿ ಬಸ್ಸು ಚಲಿಸುತ್ತಿರುವಾಗ ಾಕೆ ಮ್ಯಾಗಝೀನ್ ನ್ನು ಬಿಡಿಸಿ ಓದತೊಡಗಿದಳು. ನಾವು ಮೂರು ಜನ ಗೆಳೆಯರು, ಸಹಜವಾಗಿ ನಮ್ಮ ದೃಷ್ಟಿ ಅವಳತ್ತ ಹರಿಯಿತು. ಪದೇ ಪದೆ ಅವಳನ್ನೇ ನೋಡುವಷ್ಟು ಚೆಂದವಾಗಿದ್ದಳು ಆಕೆ. ಮನಸ್ಸೊಂದು ಮರ್ಕಟ. ಅ ಕ್ಷಣಗಳಲ್ಲೆಲ್ಲ ನಮ್ಮ ನಮ್ಮಲ್ಲಿ ಸರಿದಾಡಿದ ಭಾವನೆಗಳು, ಆಲೋಚನೆಗಳು ನಿಜಕ್ಕೂ ಹೇಲತೀರದಂತಹವು. ಒಮ್ಮೆ ನಂದಾ ದೀಪದಂತೆ ತೋರುತ್ತಾಳೆ, ಇನ್ನೊಮ್ಮೆ ಮಗುವಂತೆ ತೋರುತ್ತಾಳೆ. ಒಮ್ಮೆ ಹೃದಯ ಕದಿಯುವಂತೆ ಭಾಸವಾಗುತ್ತಾಳೆ. ಮಗದೊಮ್ಮೆ ಮೇಣದ ಬೊಂಬೆಯಂತೆ ತೋರುತ್ತಾಳೆ. ಏತನ್ಮಧ್ಯೆ ನಾವು ಓದುತ್ತಿದ್ದ ಪತ್ರಿಕೆಯೊಂದನ್ನು ಅವಳು ಎರವಲು ಕೇ...

ಕನಸುಗಳು...

Image
ಸಾಲುಗಟ್ಟಿ ಕುಳಿತಿವೆ ಕನಸುಗಳು ಮನದ ಬಾಲ್ಕನಿಯಲ್ಲಿ.. ನನಸಾಗಿ ಹಾರುವ ಹಸಿ ನಿರೀಕ್ಷೆಯಲ್ಲಿ ಇರುಳಿನ ತುಂಬ ಇಣುಕುತ್ತಿವೆ… ಬುದ್ಧ, ಬಸವ, ಗಾಂಧೀ, ನೆಹರು ಹೀಗೆ ನುಸುಳುತ್ತಿವೆ ನೂರಾರು.. ಚುಕ್ಕಿ ಚಂದ್ರಮರೆತ್ತರಕೆ ಚಿಮ್ಮಿದರೂ ಬಲುಗಟ್ಟಿ ಹೃದಯಂತರಾಳದ ಬೇರು… ಹಸಿದವರ ಬವಣೆ ನೀಗಿಸೋ ಕನಸು.. ಜಗದಳುವ ನೀಗಿ ನಗಿಸೋ ಕನಸು.. ಇಂಥ ಸ್ವಚ್ಛಂದಮಯ ಕನಸುಗಳಿಗೆ ಹಾತೊರೆಯುತ್ತಿದೆ ಎನ್ನ ಮನಸು…. —-ಸಚಿನ್ ಕುಮಾರ ಬಿ.ಹಿರೇಮಠ

ಚಿಮ್ಮು ಅರಿವಿನ ನಭಕೆ..

Image
ತೆವಳದಿರು ಓ ಹೆಣ್ಣೆ..! ನಿನ್ನ ನೀ ಅರಿಯದಲೇ ಸೆರದಿರು ಮತ್ತದೇ… ಅಂಧಕಾರ ಚಿಪ್ಪಿನಲೇ…     ಏನು ಸುಖ ಮೃದುತನದಿ? ನಿನ್ನ ಮೆಟ್ಟಿ ನಿಲುವವರೆ ತಾನೂ ಸಖನೆಂದೆನಿಸಿ ಮೈ ಮನ ಕೊಲುವವರೆ.. ನಿನ್ನ ಹೋಲಿಸುವರು ಇಳೆಗೆ ಮೃದು, ಗಟ್ಟಿ ಎರಡೂ ನಿನ್ನಲೇ… ಹಲವು ಮುಖ ಹಲವು ಬಗೆ ಪರಮ ಸುಖ ಒಳಗೊಳಗೆ…. ತೆವಳುವಿಕೆಯ ನೀ ತೊರೆದು ಶಾಂತಿ ದೂತನ ಹಾಗೆ ಚಿಮ್ಮು ಅರಿವಿನ ನಭಕೆ… ಕಾಲ ಕಾಲವಾಗುವವರೆಗೆ.. —ಸಚಿನ್ ಕುಮಾರ ಬಿ.ಹಿರೇಮಠ

ಪ್ರೀತ್ಸೋಕೆ ಏನು ಬೇಕು..?

Image
ಪ್ರೀ ತಿ.. ಈ ಎರಡಕ್ಷರ ಕಿವಿಗೆ ಬಿದ್ದಾಗ, ಕಣ್ಣಿಗೆ ಕಂಡಾಗ ಎದೆ ಝಲ್ಲೆನ್ನುತ್ತದೆ. ಪ್ರೀತಿಯ ಬಗ್ಗೆ ನಮ್ಮಲ್ಲಿ ಪದಗಳಿಂಗ ಭಾವನೆಗಳೇ ಜಾಸ್ತಿ. ನಮ್ಮ ಅರಿವಿನಂತರಾಳಕ್ಕೆ ಪ್ರೀತಿ ಅನುರಣಿಸುವುದು ಒಂದು ಕ್ರಮಬದ್ಧವಾದ ವಯಸ್ಸಿನಲ್ಲೇ. ಸ್ಕೂಲುಗಳಲ್ಲಿ, ನಮ್ಮ ನಮ್ಮ ಮನೆಗಳಲ್ಲಿ ನಮ್ಮವರು ಎನಿಸಿಕೊಂಡವರು ನಮ್ಮನ್ನು ಪ್ರೀತಿಸಿರುತ್ತಾರೆ. ಆದರೆ ಅದು ಅಪ್ರಕ್ಷುಬ್ಧ ಪ್ರೀತಿ. ಅದು ಒಂದು ಅನಿವಾರ್ಯತೆಗೆ ಒಳಪಟ್ಟು ಸಂಬಂಧಗಳಲ್ಲಿ ನುಸುಳಿ ಗಟ್ಟಿಗೊಳ್ಳಲು ಪ್ರಯತ್ನಿಸಿ, ಕೊನೆಗೆ ಗಟ್ಟಿಗೊಂಡಿರುತ್ತದೆ. ಅಲ್ಲಿ ಮೊದಲು ಸಂಬಂಧಗಳು ಬೇರೂರಿ ಬಳಿಕ ಕ್ರಮೇಣ ಪ್ರೀತಿಯ ಹೂವರಳಿಸಲಾರಂಭಿಸುತ್ತದೆ. ಅಲ್ಲಿ ಪ್ರೀತಿ ಅನ್ನೋದು ‘ಮಾಡಲೇಬೇಕಾದ’ ಅನಿವಾರ್ಯತೆ. ಈ ಅನಿವಾರ್ಯತೆ ಕೆಲವೊಮ್ಮೆ optional ಅಂತನ್ನಿಸಿದರೆ ಅಲ್ಲಿನ ಸಂಬಂಧಗಳು ಬಿರುಕು ಬಿಡಲಾರಂಭಿಸುತ್ತವೆ. So ಈ ಪ್ರೀತಿ ನಮಗೆ ಕೆಲವೊಮ್ಮೆ ಹೊಸತು ಎನ್ನಿಸುತ್ತಾದರೂ ಅದು ಅತೀ ಮುಖ್ಯವಾದುದು ಎಂಬುದು ಮಾತ್ರ ನಿಜ. ಈಗ ನಾನು ಹೇಳ ಹೊರಟಿರುವುದು ಈ ತರಹದ ಪ್ರೀತಿಯ ಬಗ್ಗೆ ಅಲ್ಲ. ಹೃದಯವನ್ನು ಹೂವಾಗಿಸುವ, ಹದಿವಯಸುಗಳ ಮನಸ್ಸನ್ನು ಹೊಕ್ಕು ಕಚಗುಳಿಯಿಡುವ, ಮೈ ನವಿರೇಳಿಸುವ ಮದುರ ಅನುಭೂತಿ ನೀಡುವಂಥ ಪ್ರೀತಿ ಬಗ್ಗೆ. ‘ಪ್ರೀತ್ಸೋಕೆ ಏನುಬೇಕು’ ಅಂತ ಮೊನ್ನೆ ಗೆಳೆಯನೊಬ್ಬ ಕೇಳಿದ. ಏನೊಂದು ತೋಚದೇ ಮೊಬೈಲನ್ನು ಆಚೆಗಿಟ್ಟು ಕುಳಿತುಬಿಟ್ಟೆ. ಮನಸ್ಸು ಒಂಟಿಯಾಗುವುದನ್ನೇ ಕಾಯುತ್ತಿದ್ದ ಈ ಪ್ರಶ್ನೆ ಮತ...

ಕುಣಿದಳಾ ಶಾಂತಲೆ.....

ಸಂಜೆ ಅವಸರದಲ್ಲಿ ಕೆಲಸ ಮುಗಿಸಿ ಆಫೀಸಿನಿಂದ ಹೊರಟ ರವೀಂದ್ರ. ಆಪ್ತ ಗೆಳತಿ ಶಾಂತಲೆಯನ್ನು ಭೇಟಿ ಮಾಡಲೆಂದು ಸೂರ್ಯಾಸ್ತದೆಡೆ ಮುಖ ಮಾಡಿ ಊರ ಪಕ್ಕದ ಗುಡ್ಡ ಒಂದರಲ್ಲಿನ ದೇವಸ್ಥಾನದೆಡೆಗೆ ನಡೆದ. ಅದು ಅವರಿಬ್ಬರ favourite ತಾಣ. ದಾರಿಯಲ್ಲಿ ಅವನ ಆಲೋಚನೆಗಳು ಒಂದೊಂದಾಗಿ ಗರಿ ಬಿಚ್ಚಿದವು. ಶಾಂತಲೆ ಈಗ ಹೇಗಿರಬಹುದು? ಮೊದಲಿನಷ್ಟೇ ಸಲುಗೆಯಿಂದಲೇ ನನ್ನನ್ನು ಮಾತನಾಡಿಸುವಳಾ? ಅವಳ ಎರಡು ವರ್ಷದ ಇಂಗ್ಲೆಂಡ್ ಜೀವನ ಅವಳಲ್ಲಿ ಏನಾದರೂ ಬದಲಾವಣೆ ತಂದಿರಬಹುದಾ? ಅವಳನ್ನು ಹೇಗೆ propose ಮಾಡಲಿ?ಒಪ್ಪುವಳಾ? ಒಪ್ಪಿದರದು ತನ್ನ ಪುಣ್ಯ, ಇಲ್ಲದಿದ್ದರೆ ಅವಳೊ0ಂದಿಗಿನ ತನ್ನ  ಸ್ನೇಹ ಬಾಂಧವ್ಯಕ್ಕೆ ಎಲ್ಲಿ ಚ್ಯುತಿ ಬರುವುದೋ! ಆದರೂ ಅವಳ ಬಗೆಗಿನ ತನ್ನ ಭಾವನೆಗಳನ್ನು ಮುಚ್ಚಿಡುವುದು ಸಾದ್ಯವಿಲ್ಲ, ಹಾಗಂತ ಹೇಳಿಕೊಳ್ಳಲು ಇದು ಸುಸಮಯವೂ ಅಲ್ಲ. ಈ ಸಂಗತಿಯು ಅವನಿಗೆ ಬಿಸಿ ತುಪ್ಪದಂತೆ ಭಾಸವಾಯಿತು.&n ಈಗ ಬೇಡ, ಸುಸಮಯ ನೋಡಿ ಹೇಳಿದರಾಯಿತು ಎಂದುಕೊಳ್ಳುತ್ತಲೇ ಪ್ರೀತಿ ಮತ್ತು ಚಿಂತೆ ತುಂಬಿದ ಭಾರವಾದ ಹೃದಯ ಹೊತ್ತು ದೇವಸ್ಥಾನದ ವ್ಯಾಪ್ತಿ ಪ್ರವೇಸಿಸಿದ. ಈತನಿಗಾಗಿ ಕಾಯುತ್ತ ಕುಳಿತಿದ್ದ ಶಾಂತಲೆ ಉಲ್ಲಾಸದಿಂದ ಹತ್ತಿರ ಬಂದು "ಏನೋ ರವಿ, ಇಷ್ಟೊಂದು ಕರಗ್ಹೋಗಿ ಬಿಟ್ಟಿದ್ದೀಯಾ? ಏನೋ ಚಿಂತೆ ಮಾಡೋ ಥರಾ ಸಪ್ಪಗಿದ್ದೀಯಾ?" ಎಂದಳು. "ಹಾಗೇನಿಲ್ಲ, ಆಫೀಸಲ್ಲಿ ಕೆಲಸ ಜಾಸ್ತಿಯಲ್ವಾ? ಹಾಗಾಗಿ ಸುಸ್ತಾಗಿದೆ ಅಷ್ಟೇ" ಎನ್ನುತ್ತಾ ತಮ್...

ಚಿಂತನ ಸೌರಭ : ದೇವರು

Image
ಮ ನುಷ್ಯನ ನಿರಂತರ ಜೀವನದಲ್ಲಿ ಕೆಲುವು ವಿಚಾರಗಳು ಮಾನಸಿಕ ಸ್ಥಿರತೆಯನ್ನು ಕದಡುತ್ತವೆ. ದೇವರು, ಧರ್ಮ,ಪರದೈವ ಇಂಥ ವಿಚಾರಗಳಲ್ಲಿ ನಮ್ಮ ವಿವೆಕವನ್ನು ಓರೆಗಲ್ಲಿಗೆ ಹಚ್ಚಬೇಕಾಗಿದೆ. ಇವೆಲ್ಲ ಸ್ಥಾವರ ಭಾವಗಳು. ಹಾಗಾದರೆ ಕಲ್ಪನೆಗಳೆನ್ನಬಹುದು. ಅಂಟಿಕೊಂಡರೆ ಆಸ್ತಿಕನೆನ್ನಬಹುದು. ಅಟ್ಟಿದರೆ ನಾಸ್ತಿಕನೆನ್ನಬಹುದು.     ದೇವರ ಅಸ್ತಿತ್ವ ಎಲ್ಲಿದೆ?ಹೇಗಿದೆ? ಅವನ ರೂಪ, ಬಣ್ಣ, ವಾಸನೆ, ವ್ಯಕ್ತಿತ್ವದ ಬಗ್ಗೆ ನಾನಾ ಚಿಂತಕರು, ದಾರ್ಶನಿಕರು ವಿವಿಧ ಸಿದ್ಧಾಂತಗಳನ್ನು ನಿರೂಪಿಸಿದ್ದಾರೆ. ಅವರವರ ಭಕುತಿಗೆ ಅವರವರ ಬಾವಕ್ಕೆ ಅವರಂತಿಹನು ಶಿವನು.             ಸಿದ್ದಯ್ಯ ಪುರಾಣಿಕರ ಪ್ರಕಾರ ದೇವರ ಅಸ್ತಿತ್ವವೆಂದರೆ ಮೂಡದ ಹೂವಿನ ಕಂಪು. ನವಿಲಿನ ಹೊಟ್ಟೆಯೊಳಗಿನ ಮೊಟ್ಟೆ. ಗರಿಗಳ ಕಣ್ಣಿನ ಬಣ್ಣ.ಬೀಜದ ಮೊಳಕೆ. ಮಗುವಿನ ಮಂದಹಾಸ.ಬಂಜೆಯ ಸ್ವಪ್ನ, ಕರೆಯದ ಹಾಲು. ಕಡೆಯದ ಬೆಣ್ಣೆಯ ಸವಿಯಂತಿರುವನು. ಅಂದರೆ ದೇವರು ಅಮೂರ್ತವಾಗಿದ್ದಾನೆ.ಮೂರ್ತನಾದರೆ ಫಲಪ್ರದ ಚೇತೋಹಾರಿಯಾದುದು.            ಸ್ವರ್ಗ ನರಕಗಳ ಕಲ್ಪನೆಯೂ ಕೂಡಾ ದೇವರ ಜೊತೆಗೆ ತಳುಕು ಹಾಕಿಕೊಂಡಿದೆ. ಸತ್ಕರ್ಮ ಸನ್ಮಾರ್ಗಕ್ಕೆ ಸ್ವರ್ಗ ಪ್ರಾಪ್ತಿಯಾದರೆ, ದುರಿತ್ಕರ್ಮಮಾಮಮಾರ್ಗಕ್ಕೆ ಹಾಕಿಕೊಂಡ ಸೋಪಾನಗಳೇ ಸ್ವರ್ಗ ಮತ್ತು ನರಕ. ನರಕದ ಭಯದಿಂದ ಸ್ವರ್ಗದ ಆಸೆಯಿಂದ ...

ಐದು ಹನಿಗತೆಗಳು : ಪರಿಣಾಮ

ಇವನು ಅಪರಾದಗಳನ್ನೆಸಗುತ್ತಿದ್ದ. ಅಲ್ಲಿ ಯಾರೋ ಶಿಕ್ಷೆಯನ್ನನುಭವಿಸುತ್ತಿದ್ದರು.

ವ್ಯರ್ಥ

ಅವಳಿಗೆಂದು ಇರುಳಲ್ಲಿ ಕಿತ್ತು ತಂದಿದ್ದ ನಕ್ಷತ್ರಗಳೆಲ್ಲಾ ಹಗಲಲ್ಲಿ ಬೂದಿ ಮುಚ್ಚಿದ ಕೆಂಡಗಳಾಗಿದ್ದವು.

ಮತ್ಸರ

ಹುಣ್ಣಿಮೆಯ ನೆಪ ಹೂಡಿ ಚಂದ್ರ ಭೂಮಿಯನ್ನು ಸಮೀಪಿಸಿದ್ದಕ್ಕೆ ಸೂರ್ಯ ಕೆಂಡವಾಗುತ್ತಲೇ ಹೋದ..

ಅವ್ವ..

ಬಡತನದ ಬೇಗುದಿಯಲ್ಲಿ ಬಸವಳಿದಿದ್ದ ಹೆಣ್ಣು ಮಗಳೊಬ್ಬಳು ಆಗ ತಾನೇ  ಎರಡು ಅವಳಿಗಳಿಗೆ ಜನ್ಮ ನೀಡಿದ್ದಳು.ಕಂದಮ್ಮಗಳನ್ನು ಮಲಗಿಸಲು ತಾನುಟ್ಟ ಸೀರೆಯನ್ನೇ ಬಿಚ್ಚಿ ಹಾಸಿ ಕಂದಮ್ಮಗಳನ್ನು ಮಲಗಿಸಿದಳು..ಮತ್ತಷ್ಟು ಜಾಗ ಸೀರೆಯಲ್ಲಿ ಉಳಿಯಿತು.ಆಗ ಆ ತಾಯಿ ದೇವರಲ್ಲಿ ಕೇಳಿಕೊಂಡಳು.."ದೇವರೇ..ಇನ್ನೊಂದು ಮಗುವನ್ನು ಕೊಡಬಾರದೇ..? ಆ ಸೀರೆಯ ಅದಷ್ಟು ಜಾಗ ಹಾಗೇ ಉಳಿಯಿತಲ್ಲ..!"

ಹೆದರಿಕೆ

ಇಬ್ಬರೂ ಮಾತನಾಡಿಕೊಳ್ಳುತ್ತಿದ್ದರು. "ನೀವಬು ಯಾರಿಗೆ ಹೆದರುತ್ತೀರಿ?" ಇವನೆಂದ, "ದೇವರಿಗೆ.." "ಯಾಕೆ..?" ಅವನ ಪ್ರಶ್ನೆ. "ಏಕೆಂದರೆ ನಾವು ಮಾಡುವ ಪ್ರತೀ ಕೆಲಸಗಳನ್ನೆಲ್ಲ ಅವನೊಬ್ಬನೇ ನೋಡುವುದು.." ಇವನುತ್ತರ.. "ಓಹೋ.ಹಾಗೋ..?" ಇವನೆಂದ,"ನೀವು ಯಾರಿಗೆ ತುಂಬಾ ಹೆದರುತ್ತೀರಿ?" "ನನ್ನ ಮನಸ್ಸಿಗೆ..ಯಾಕೆಂದರೆ ಎಂಥ ಕೆಲಸಗಳನ್ನೆಲ್ಲ ಮಾಡಬೇಕಾಗಿ ಬರುವುದೋ ಎಂದು" ಅವನೆಂದ.. ---ಸಚಿನ್ ಕುಮಾರ ಬಿ.ಹಿರೇಮಠ

ಆಳ

ಹೃದಯದೊಳಗಿಳಿದು ಬರೀ ಭಾವನೆಗಳ ಆಳ ನೋಡಬೇಡ.. ಧುಮುಕಿ ಬಿಡು ಒಮ್ಮೆಲೇ.. ತಡವಾದರೆ ಆಳ ಹೆಚ್ಚಾದೀತು.. ---ಸಚಿನ್ ಕುಮಾರ ಬಿ.ಹಿರೇಮಠ

ಸಮರ್ಥನೆ

ಹುಡುಗೀ, ನಾ ನಿನಗಾಗಿ ನಿನ್ನ ಪ್ರೀತಿಸುತ್ತಿಲ್ಲ.. ನಿನ್ನೊಳಗಿರುವ ನನಗಾಗಿ ನಾ ನಿನ್ನ ಪ್ರೀತಿಸಲೇಬೇಕಾಗಿದೆ.. ನೀನೂ ನನ್ನೊಳಗಿರುವೆ.. ನನ್ನೊಳಗಿರುವ ನಿನಗಾಗಿ ನೀನು ನನ್ನ ಪ್ರೀತಿಸಬಹುದು... ---ಸಚಿನ್ ಕುಮಾರ ಬಿ.ಹಿರೇಮಠ

ಹೈಕುಗಳು

ಕಣ್ಣಲ್ಲಿ ಕಣ್ಣು ಒಲವಿನಿಂದಲ್ಲ.. ಒಲವಿನ ಹುಡುಕಾಟದಿಂದ..    *** ರೆಪ್ಪೆ ಮೇಲೆ ರೆಪ್ಪೆ ನಿದಿರೆಯಿಂದಲ್ಲ.. ನಿನ್ನ ಅಗಲಿಕೆಯಿಂದ..     *** ಉಸಿರಲ್ಲಿ ಉಸಿರು ನಿನ್ನ ಒಲವಿಂದ.. ಅದುವೇ ಆನಂದ.. ---ಸಚಿನ್ ಕುಮಾರ ಬಿ.ಹಿರೇಮಠ

ಹರಾಜು

ಕನಸುಗಳು ಹರಾಜಿಗಿವೆ ಬೇಕಾದವರು ಕೊಂಡುಕೊಳ್ಳಬಹುದು ಒಲವಿನ, ಗೆಲುವಿನ, ನೋವಿನ,ನಲಿವಿನ, ಭೂತದ, ಭವಿಷ್ಯದ, ಕನಸುಗಳು ಹರಾಜಿಗಿವೆ.. ನಾನು ಕಳೆದುಕೊಂಡ ರಾತ್ರಿಗಳ ಮೇಲಾಣೆ.. ನನ್ನ ಕನಸುಗಳು ಹರಾಜಿಗಿವೆ.. ---ಸಚಿನ್ ಕುಮಾರ ಬಿ.ಹಿರೇಮಠ

ವೀಣೆ

ನನ್ನೆದಯ ಮೀಟು ಬರೀ ಪ್ರೇಮ ಸ್ವರಗಳೇ.. ಕೆಲವು ಹೃಸ್ವ. ಕೆಲವು ದೀರ್ಘ.. ಕೆಲವು ಕ್ಷೀಣ.. ಕೆಲವು ಮೌನ.. ---ಸಚಿನ್ ಕುಮಾರ ಬಿ.ಹಿರೇಮಠ

ಅಚಲ

ಹಗಲಲ್ಲಿ ಕನಸುಗಳೆಲ್ಲ ನಿದ್ರಸುತ್ತವೆ ಎದೆಯಲ್ಲಿ ಇರುಳಲ್ಲಿ ಏಳುತ ಮೆಲ್ಲ. ನಕ್ಷತ್ರಗಳಾಗುತ್ತವೆ ಅಲ್ಲಿ ಆದರೆ ನೀನೆಂದೂ ಬದಲಾಗುವುದಿಲ್ಲ.. ಹಗಲೆಂದರೆ ಸೂರ್ಯ.. ಇರುಳೆಂದರೆ ಚಂದ್ರ.. ---ಸಚಿನ್ ಕುಮಾರ ಬಿ.ಹಿರೇಮಠ

ಬಯಕೆ

ಕೆನ್ನೆಗೆ ಬಿಸಿಯುನ್ನುವ ಬಯಕೆ ಕಣ್ಣೀರಿಗೆ ಕೆನ್ನೆಗೆ ಜಾರುವ ಬಯಕೆ ಕನಸಿಗೆ ಕಣ್ಣೀರಲಿ ಕರಗುವ ಬಯಕೆ ಮನಸಿಗೆ ಕನಸ ಕಾಣುವ ಬಯಕೆ ನನಗೆ ಮನಸಾಗುವ ಬಯಕೆ ಮನಸೇ ನಾನಾಗುವ ಬಯಕೆ.. ---ಸಚಿನ್ ಕುಮಾರ ಬಿ.ಹಿರೇಮಠ

ಪರಿವರ್ತನೆ

ಹೃದಯವೆ ಬೇಡೆಂದು ಕೈ ಹಾಕಿ ಕೀಳ ಹೊರಟರೆ ಅದು ಹೂವಾಗತೊಡಗಿತ್ತು.. ಕೀಳದೆ ಬಿಟ್ಟಿದ್ದು ತಪ್ಪಾಯಿತೆನ್ನಿಸುತ್ತಿದೆ ಈಹ ಮೈಯೆಲ್ಲಾ ಚುಚ್ಚುತ್ತಿದೆ.. ---ಸಚಿನ್ ಕುಮಾರ ಬಿ.ಹಿರೇಮಠ

ಮರಣ

ಹಸಿದ ತುಟಿಗಳಿಗೆ ಬಿಸಿ ಮುತ್ತನ್ನೀಯುವೆ ಎಂದು ಕಣ್ಣು ಮುಚ್ಚಿದರೆ ಕೊಡವಿಕೊಂಡು ಬಿತ್ತು ಕಣ್ಣ ಹನಿ ಉಪ್ಪುಪ್ಪಾದ ಅನುಭವದಲ್ಲಿ ರೆಪ್ಪೆಗಳ ಅಪ್ಪುಗೆಯಲಿ ಸತ್ತು ಹೋಗಿತ್ತು ನಿನ್ನ ಪ್ರತಿಬಿಂಬ   ---ಸಚಿನ್ ಕುಮಾರ ಬಿ.ಹಿರೇಮಠ

ಮಳೆಬಿಲ್ಲು

ಮಳೆ ಬಿಲ್ಲಿಗೆ ಬಳಿದ ಬಣ್ಣಗಳೆಲ್ಲ ಕರಗಿ ನೀರಾದಾಗ ನೀನೂ ಇಲ್ಲವಾಗಿದ್ದೆ.. ಆಗನ್ನಿಸಿತು ನೀನೂ ಸಹ ಕ್ಷಣಿಕ,ಅಪರೂಪ ಎದೆಯ ಮಳೆಬಿಲ್ಲನ್ನೇರಿ ಕುಳಿತಾಗಲೇ ಅನ್ನಿಸಿತ್ತು, ನೀನೂ ಜಾರುವವಳೇ, ಕರಗುವವಳೇ..   ---ಸಚಿನ್ ಕುಮಾರ ಬಿ.ಹಿರೇಮಠ

ಹೂವು

ರಸ್ತೆ ಬದಿಗೆ ಅರಳಿದ ಹೂವಗಳನು ಯಾರೋ ಕಿತ್ತರು ಕೆಲವನ್ನು ನೀರೆಯರ ಮುಡಿಗೆ ಕೆಲವನ್ನು ದೇವರ ಗುಡಿಗೆ ಇಟ್ಟರು ಕೆಲವನ್ನು ಹೆಣದ ಅಡಿಗೆ ಕೆಲವನ್ನು ರಾಜ ಬೀದಿಯ ಬದಿಗೆ ಬಿಟ್ಟರು ಹಗುರವಾದರೂ ಹೂವು ಮನಸ್ಸಿನಾಳಕ್ಕಿಳಿಯುವ ಭಾರವಾದ ವಸ್ತು ---ಸಚಿನ್ ಕುಮಾರ ಬಿ.ಹಿರೇಮಠ

ಮುತ್ತು

ಗೆಳೆಯ, ನಿನ್ನ ಮುತ್ತಿಲ್ಲದೇ ತುಟಿಗಳು ಬತ್ತಿ ಹೋಗಿವೆ ಒಂದಿನಿತು ನಗೆ ಚೆಲ್ಲದೆ ಮಾತುಗಳೂ ಸತ್ತು ಹೋಗಿವೆ.. --- ಸಚಿನ್ ಕುಮಾರ ಬಿ.ಹಿರೇಮಠ

ಪ್ರೀತಿ

ನೀನಿರುವಾ ಎದೆಯಲ್ಲಿ  ಈ ಒಲವದು ಚಿಮ್ಮುತಿದೆ.. ಕಾರಿರುಳ ಕನಸಲ್ಲಿ  ಆ ಬೆಳಕದು ಹೊಮ್ಮುತಿದೆ.. ಈ ನಿರ್ಮಲ ಮನಸಿನ ಪ್ರೀತಿಯಲಿ ಬರಿ ನಿನ್ನದೇ ಪಾಲು ಇದೆ.. ಸವಿ ಕೋಮಲ ಕನಸಿನ ರೀತಿಯಲಿ ಹಗಲೆನ್ನದೇ ಕಾಡುತಿದೆ.. ---ಸಚಿನ್ ಕುಮಾರ ಬಿ.ಹಿರೇಮಠ

ನಯನಗಳು

ನಯನಗಳು ತಾರೆಗಳ ಹೊಳಪನು ಒಪ್ಪುತಿವೆ.. ಹೂ ನಗೆಯು ಹಿತವಾಗಿ ತುಟಿಗಳು ಅಪ್ಪುತಿವೆ ಮನಸಿನ ಕೊಳದಲಿ ಜಾರೋ ಎಳೆಯ ಮೀನಿನ ತೆರದಿ ತೋರೋ ಎರಡು ಪದಗಳು.. ಒಲವ ಸುಮಗಳು.. ---ಸಚಿನ್ ಕುಮಾರ ಬಿ.ಹಿರೇಮಠ

ಮೊದಲ ಪ್ರೀತಿ..

ಮೊದಲ ಸಲ ನಿನ್ನ ನೋಡಿದಾಗಲೇ ತಗುಲಿತೆನಗೆ ಪ್ರೀತಿ ಎಂಬ ಖಾಯಿಲೆ ನನಗೆ ನೀನು ಹೂವಿನಂತೆ ಕೋಮಲೆ ದುಂಬಿಯಂತೆ ಇನ್ನು ನಾನು ನಿನ್ನಲೇ ತುಂಬಿಕೊಳ್ಳೆ ನನ್ನ ನಿನ್ನ ಕಣ್ಣಲೇ...   ---ಸಚಿನ್ ಕುಮಾರ ಬಿ.ಹಿರೇಮಠ

ಕೋರಿಕೆ

ಪ್ರೀತಿಯ ಹೂವಿಗೆ ವಿರಹದ ಮುಳ್ಳು ಪ್ರೀತಿಯ ಬಾಳಿಗೆ ಸರಿಗಮ ಸೊಲ್ಲು ಒಲವಲಿ ನೀನಿದಾ ಮೆಲ್ಲು ಚೆಲುವಲಿ ಈ ಮನ ಗೆಲ್ಲು ..                ---ಸಚಿನ್ ಕುಮಾರ ಬಿ.ಹಿರೇಮಠ

ಪ್ರೀತ್ಸೋಕೆ ಏನು ಬೇಕು....?

Image
ಈ ಎರಡಕ್ಷರ ಕಿವಿಗೆ ಬಿದ್ದಾಗ, ಕಣ್ಣಿಗೆ ಕಂಡಾಗ ಎದೆ ಝಲ್ಲೆನ್ನುತ್ತದೆ. ಪ್ರೀತಿಯ ಬಗ್ಗೆ ನಮ್ಮಲ್ಲಿ ಪದಗಳಿಂಗ ಭಾವನೆಗಳೇ ಜಾಸ್ತಿ.ನಮ್ಮ ಅರಿವಿನಂತರಾಳಕ್ಕೆ ಪ್ರೀತಿ ಅನುರಣಿಸುವುದು ಒಂದು ಕ್ರಮಬದ್ಧವಾದ ವಯಸ್ಸಿನಲ್ಲೇ. ಸ್ಕೂಲುಗಳಲ್ಲಿ, ನಮ್ಮ ನಮ್ಮ ಮನೆಗಳಲ್ಲಿ ನಮ್ಮವರು ಎನಿಸಿಕೊಂಡವರು ನಮ್ಮನ್ನು ಪ್ರೀತಿಸಿರುತ್ತಾರೆ. ಆದರೆ ಅದು ಅಪ್ರಕ್ಷುಬ್ಧ ಪ್ರೀತಿ. ಅದು ಒಂದು ಅನಿವಾರ್ಯತೆಗೆ ಒಳಪಟ್ಟು ಸಂಬಂಧಗಳಲ್ಲಿ ನುಸುಳಿ ಗಟ್ಟಿಗೊಳ್ಳಲು ಪ್ರಯತ್ನಿಸಿ, ಕೊನೆಗೆ ಗಟ್ಟಿಗೊಂಡಿರುತ್ತದೆ. ಅಲ್ಲಿ ಮೊದಲು ಸಂಬಂಧಗಳು ಬೇರೂರಿ ಬಳಿಕ ಕ್ರಮೇಣ ಪ್ರೀತಿಯ ಹೂವರಳಿಸಲಾರಂಭಿಸುತ್ತದೆ. ಅಲ್ಲಿ ಪ್ರೀತಿ ಅನ್ನೋದು 'ಮಾಡಲೇಬೇಕಾದ' ಅನಿವಾರ್ಯತೆ. ಈ ಅನಿವಾರ್ಯತೆ ಕೆಲವೊಮ್ಮೆ optional ಅಂತನ್ನಿಸಿದರೆ ಅಲ್ಲಿನ ಸಂಬಂಧಗಳು ಬಿರುಕು ಬಿಡಲಾರಂಭಿಸುತ್ತವೆ. So ಈ ಪ್ರೀತಿ ನಮಗೆ ಕೆಲವೊಮ್ಮೆ ಹೊಸತು ಎನ್ನಿಸುತ್ತಾದರೂ ಅದು ಅತೀ ಮುಖ್ಯವಾದುದು ಎಂಬುದು ಮಾತ್ರ ನಿಜ. ಈಗ ನಾನು ಹೇಳ ಹೊರಟಿರುವುದು ಈ ತರಹದ ಪ್ರೀತಿಯ ಬಗ್ಗೆ ಅಲ್ಲ. ಹೃದಯವನ್ನು ಹೂವಾಗಿಸುವ, ಹದಿವಯಸುಗಳ ಮನಸ್ಸನ್ನು ಹೊಕ್ಕು ಕಚಗುಳಿಯಿಡುವ, ಮೈ ನವಿರೇಳಿಸುವ ಮದುರ ಅನುಭೂತಿ ನೀಡುವಂಥ ಪ್ರೀತಿ ಬಗ್ಗೆ. 'ಪ್ರೀತ್ಸೋಕೆ ಏನುಬೇಕು' ಅಂತ ಮೊನ್ನೆ ಗೆಳೆಯನೊಬ್ಬ ಕೇಳಿದ. ಏನೊಂದು ತೋಚದೇ ಮೊಬೈಲನ್ನು ಆಚೆಗಿಟ್ಟು ಕುಳಿತುಬಿಟ್ಟೆ. ಮನಸ್ಸು ಒಂಟಿಯಾಗುವುದನ್ನೇ ಕಾಯುತ್ತಿದ್ದ ಈ ಪ್ರಶ್ನೆ ಮತ್ತ...

ಬದುಕ ದಾರಿಯಲಿ ಕಳೆದು ಹೋದವಳೇ....

ಅ ವಳು ಈಗಲೂ ನೆನಪಾಗುತ್ತಿದ್ದಾಳೆ. ಸ್ನಿಗ್ಧ ಸೌಂದರ್ಯ, ಏನ್ನನೋ ಹೇಳ ಬಯಸುವ ಕಂಗಳು, ಇರುಳನ್ನೇ ನಾಚಿಸುವಂಥ ಮುಂಗುರುಳು, ಚೆಂದುಟಿಯ ಮೇಲೆ ನಳನಳಿಸುವ ಹೂ ನಗೆ, ನಿತಂಬದವರೆಗಿನ ಜಡೆ - ಎಲ್ಲವೂ ಮನಸ್ಸನ್ನು ಕಲಕಿ ಮಧುರ ಭಾವದಲೆಗಳ್ನು ಎಬ್ಬಿಸಿತ್ತು. ಅವಳು ಯಾಕಾದರೂ ನನಗೆ ಪರಿಚಯವಾದಳೋ...?ಅವಳಿಲ್ಲದ ಈ ಕ್ಷಣಗಳನ್ನು ಯಾಂತ್ರಿಕವಾಗಿ ಕಳೆಯುತ್ತ ಹೋದಲ್ಲಿ ಬದುಕಿಗಿರುವ ಮಹತ್ವವಾದರೂ ಏನು..? ಅವಳು ಮತ್ತೇ ನನನ್ ಹೃದಯಂತರಾಳದೊಳಕ್ಕೆ ಬಂದು ಸೇರುತ್ತಾಳೋ, ಬದುಕಿನ ನೀರವತೆಯನ್ನು ಕಳೆದು ಕಲರವವಾಗುತ್ತಾಳೋ ಒಂದು ಗೊತ್ತಿಲ್ಲ.. ನಮ್ಮ ನಮ್ಮ ನಡುವೆ ಹುಟ್ಟಿಕೊಂಡ ಸ್ನೇಹಲತೆಗೆ ನೀರೆರೆದಿದ್ದೆ ಈ ನನ್ನ ವೃತ್ತಿ. ವೃತ್ತಿಯನ್ನು ಪ್ರೀತಿಸಿಕೊಂಡಷ್ಟೆ ಅವಳ ಈ ಸ್ನೇಹವನ್ನು ಪ್ರೀತಿಸಿಕೊಂಡೆ. ಅವಳು ಬದುಕಿನುದ್ದಕ್ಕೂ ಕಾಣುತ್ತಿದ್ದ ಕನಸುಗಳು, ನನ್ನ ಭವಿಷ್ಯವ್ನನು ನನಗೆ ಚಿತ್ರಿಸಿಕೊಡುತ್ತಿದ್ದ ಬಗೆ, ಅವಳ ಆ ಒಂದು ಮನೋ ಇಂಗಿತ ಎಲ್ಲವನ್ನು ಅರಿತುಕೊಂಡೆ.ಅವಳ ಸ್ನೇಹದ ಸೋನೆ ಮಳೆಯಲ್ಲಿ ನನ್ನ ನೋವು ದುಗುಡಗಳೆಲ್ಲ ತುಸು ಕರಗಿ ಹೋದವೆನ್ನಿ. ಅವಳ ನಗುವಿನಾಳದಲ್ಲಿ ಪುಟಿದೆದ್ದು ಖುಷಿಯ ಸಂಗತಿಗಳನ್ನು ನಾನು ಲೆಖ್ಖವಿಟ್ಟಿಲ್ಲ. ಅವಳಾಡುತ್ತಿದ್ದ ಮಾತುಗಳಿಲ್ಲ.. ಹಾಡಿದ ಹಾಡುಗಳು, ಅದೆಷ್ಟೋ ಮನಸುಗಳಿಗೆ ಜೀವ ಲಾಲಿಯಂತೆ.. ನಿನ್ನ ಸಾಂಗತ್ಯ ಆದರೆ ನೀನು ಹೇಳ ಹೆಸರಿಲ್ಲದಂತೆ ದೂರವಾದದ್ದೇಕೆ..?ಬದುಕಿನ ಮುಗಿಲಲಿ ಮಿಂಚಿ ಮಾಯವಾದ ಮಿಂಚಂತೆ.. ಸ್ನೇಹವೆಂಬ ಸೆಲೆ...

ಕನಸುಗಳು...

Image
ಸಾಲುಗಟ್ಟಿ ಕುಳಿತಿವೆ ಕನಸುಗಳು ಮನದ ಬಾಲ್ಕನಿಯಲ್ಲಿ.. ನೆನಪಾಗಿ ಹಾರುವ ಹಸಿ ನಿರೀಕ್ಷೆಯಲ್ಲಿ ಇರುಳಿನ ತುಂಬ ಇಣುಕುತ್ತಿವೆ... ಬುದ್ಧ, ಬಸವ, ಗಾಂಧೀ, ನೆಹರು ಹೀಗೆ ನೂರಾರು.. ಚುಕ್ಕಿ ಚಂದ್ರಮರೆತ್ತರಕೆ ಚಿಮ್ಮಿದರೂಬಲುಗಟ್ಟಿ ಹೃದಯಂತರಾಳದ ಬೇರು... ಹಸಿದವರ ಬವಣೆ ನೀಗಿಸೋ ಕನಸು..ಜಗದಳುವ ನೀಗಿ ನಗಿಸೋ ಕನಸು..ಇಂಥ ಸ್ವಚ್ಛಂದಮಯ ಕನಸುಗಳಿಗೆ ಹಾತೊರೆಯುತ್ತಿದೆ ಎನ್ನ ಮನಸು.... --- ಸಚಿನ್ ಕುಮಾರ ಬಿ.ಹಿರೇಮಠ

ಗಣೇಶ ಬಂದ..

Image
ಮತ್ತೊಮ್ಮೆ ಗಣೇಶ ಬರುತ್ತಿದ್ದಾನೆ. ಮಳೆಯಿಲ್ಲದೆ ಪತರಗುಟ್ಟುತ್ತಿರುವ ರೈತಾಪಿ ಜನ ತುಸು ಸಾವರಿಸಿಕೊಂಡಿದ್ದಾರೆ. ಕಳೆದೆರೆಡು ವಾರಗಳಿಂದ ಸುರಿದ ಮಳೆಗೆ ಹೃನ್ಮನಗಳು ನಲಿದಿವೆ. ಕೈ ಮೀರಿ ಹೋಗುತ್ತಿದ್ದ ಬೆಳೆಗಳಿಗೆ ನವ ಜೀವ ಕಳೆ ಬಂದಿದೆ. ಮುಗಿಲಿನ ೊಡಲಿನ ಭ್ರೂಣಗಳ ತೇಲುವಿಕೆ ಶುರುವಾಗಿದೆ. ಮುಂಗಾರು ಮಳೆಯ ಲೀಲೆ ಇನಿತು ಇನಿತಾಗಿ ಶುರುವಾಗಿದೆ. ವಿದ್ಯುದಭಾವದ ಸಮಸ್ಯೆ ತುಸು ನಿರಾಳವಾಗಿದೆ. ಸರ್ಕಾರದ ಹುಸಿ ಭರವಸೆಗಳು ಇನ್ನೂ ಭರವಸೆಗಳಾಗಿಯೆ ಉಳಿದಿವೆ. ಈ ನಡುವೆ ಚುನಾವಣೆ ಮತ್ತೊಮ್ಮೆ ಇಣುಕಿ ನಿಚ್ಚಳವಾಗಿದೆ. ದೇಶದ ಭದ್ರತೆಗೆ ದಕ್ಕೆ ಬರುವಂತ ಸೂಚನೆಗಳ ನಡುವೆಯೂ ದೇಶದ ಜನತೆ ನಿರುಮ್ಮಳವಾಗಿದೆ. ಎಲ್ಲಿಂದಲೋ ಇಲ್ಲಿಗೆ ವಕ್ಕರಿಸಿಕೊಂಡ 'ಹಂದಿ ಜ್ವರ' ತುಸು ಆತಂಕವನ್ನು ಸೃಷ್ಟಿಸಿದೆ. ಒಂದು ದೇಶದ ಭದ್ರತೆ ಆ ದೇಶದ ಆರೋಗ್ಯ ಸಮಪನ್ಮೂಲದ ಮೇಲೆ ನಿರ್ಭರವಾಗಿದೆ. ಅದಕ್ಕೆಂದೇ ನಾನಾ ಕಡೆ H1N1 ದ ಲಕ್ಷಣಗಳು , ಮುನ್ನೆಚ್ಚರಿಕೆಯ ಕ್ರಮಗಳು, ಚಿಕಿತ್ಸಾ ವಿಧಾನಗಳ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇಷ್ಟೆಲ್ಲ ಗೀಳು ಗೋಳಗಳ ಮಧ್ಯೆ ಗಣೇಶ ಮತ್ತೇ ಬರುತ್ತಿದ್ದಾನೆ. ಪ್ರತಿ ಸಲ ಗಣೇಶ ಬರುವಾಗ ಎಲ್ಲಿಲ್ಲದ ಸಂಭ್ರಮ ನಮ್ಮ ದೇಶದ ಜನತೆಯಲ್ಲಿ.. ಆದರೆ ಈ ಸಲ ನಾನಾ ಸಂಕಷ್ಟಗಳೊಂದಿಗೆ ವಿಘ್ನ ನಿವಾರಕ ಆಗಮಿಸುತ್ತಿದ್ದಾನೆ. ಆದರೆ ಈಗ ೊದಗಿರುವ ವಿಘ್ನಗಳಿಗೆ ಗಣೇಶನಾಗಲೀ, ಅಥವಾ ಯಾವ ದೇವರಾಗಲೀ ಕಾರಣರಲ್ಲ.. ಪರಿಸರದ ಬಗ್ಗೆ ನಮ್ಮ ನಿಷ್ಕಾಳಜಿ,...

ತೀರದ ನಂಟು..

ದೂರವಾಗುತ್ತಲೇ ಮತ್ತೇ ಸಮೀಪಿಸಿ ಮುತ್ತಿಕ್ಕಿ ಹೋಗುತಿವೆ ತೊರೆಗಳು ತೊರೆಯದೇ ತೀರದ ಬಂಡೆಗಳ... ಕರಗುತಿವೆ ಬಂಡೆಗಳು ಯಾವ ಸಂಭ್ರಮಕ್ಕೋ ಸೋತು ಸಣ್ಣವಾಗುತಿವೆ ಅರೆಘಳಿಗೆ ನಿಲ್ಲದೆಯೇ ಓಡುತಿವೆ ತೊರೆಗಳು... ಏನು ಹೆಸರೋ..? ಈ ಹೆಸರಿಲ್ಲದ ನಂಟಿಗೆ ಅಂಟಿಸುವವರು ಯಾರೋ ನಂಟಿನ ಹೆಸರು..? ಗಟ್ಟಿತನದ ಹೆಸರು... ಬಂಡೆಗಳ ನಂಬುಗೆ ತುಂಬು ಪ್ರೀತಿಯಲಿ ಬಲಿತು ಬೀಜವಾಗುತಲಿದೆ ಬೇರೂರಿ ತೀರದಲಿ ತೊರೆಯದ ತೊರೆಗಳಿಗೆ ಕಾಯುತ್ತ ನಿಂತಿವೆ... ಶತ ಶತಮಾನಗಳಿಂದಲೂ ಪ್ರೀತಿಯಿಂದಲೇ ಅಪ್ಪುತಿವೆ ಒಂದನ್ನೊಂದು ಧೇನಿಸುತ್ತ... ---ಸಚಿನ್ ಕುಮಾರ ಬಿ.ಹಿರೇಮಠ

ಗರ್ಲ್ ಫ್ರೆಂಡ್ ; ಹುಡುಗರಿಗೇಕೆ ಅನಿವಾರ್ಯ..?

ಪರಿಸ್ಥಿತಿಯಲ್ಲಿ 'ಗರ್ಲ್ ಫ್ರೆಂಡ್ ' ಪದದ ವ್ಯುತ್ಪತ್ತಿ ನಮಗೆ ಅವಶ್ಯವಿಲ್ಲ. ಈ ಪದ ಹೊಮ್ಮಿಸುವ ಅರ್ಥವನ್ನು ತಿಳಿದುಕೊಳ್ಳುವುದು ಅತ್ಯವಶ್ಯ. ಗರ್ಲ್ ಫ್ರೆಂಡ್ ಎಂಬುದರ ಅರ್ಥ ಸ್ನೇಹಿತೆ, ಗೆಳತಿ, ಸಖಿ ಎಂದೆಲ್ಲ ಆಗುತ್ತದಾದರೂ ಇತ್ತೀಚಗೆ ಈ ಪದ ಅರ್ಥ ತುಸು ಅಪಭ್ರಂಶವಾಗುತ್ತಿದೆ. ಗರ್ಲ್ ಫ್ರೆಂಡ್ ಎಂದರೆ ಗೆಳತಿಗಿಂತ ಹೆಚ್ಚು, ಪ್ರೇಯಸಿಗಿಂತ ಕಡಮೆ ಎನ್ನುವ ಭಾವದಲ್ಲಿ ಈ ಪದವನ್ನು ಬಳಸಲಾಗುತ್ತಿದೆ. ಈ ಮೊದಲು ಇಂಗ್ಲಿಷಿನಲ್ಲಿಇ ಪದ ಬಳಕೆಯಲ್ಲಿರಲಿಲ್ವೇನೋ..! ಫ್ರೆಂಡ್ ಅಂಬ ಪದವನ್ನಷ್ಟೇ ಗೆಳೆಯ ಅಥವಾ ಗೆಳತಿಯನ್ನು ಸೂಚಿಸುವುದಕ್ಕಾಗಿ ಬಳಸಲಾಗುತ್ತಿದ್ದಿರಬೇಕು. ಆದರೆ ತೀರಾ ಇತ್ತೀಚಗೆ ಗರ್ಲ್ ಫ್ರೆಂಡ್ ಮತ್ತು ಬಾಯ್ ಫ್ರೆಂಡ್ ಪದಗಳನ್ನು ಬಳಸಲಾಗುತ್ತಿದೆ. ಆದರೆ ನೆನಪಿರಲಿ, ಈ ಪದಗಳ ಬಳಕೆಗೆ ಕೆಲವು ಅಪವಾದಗಳಿವೆ. ನೀವು ಪುರುಷರಾಗಿದ್ದಲ್ಲಿ ನೀವು ನಿಮ್ಮ ಗೆಳೆಯನನ್ನು ಬಾಯ್ ಫ್ರೆಂಡ್ ಎಂದು ಕರೆಯುವಂತಿಲ್ಲ..ಆದರೆ ನಿಮ್ಮ ಗೆಳತಿಯನ್ನು ಗರ್ಲ್ ಫ್ರೆಂಡ್ ಎಂದು ಕರೆಯಬಹುದು. ಒಮದು ವೇಳೆ ನೀವು ಮಹಿಳೆಯಾಗಿದ್ದಲ್ಲಿ ನೀವು ನಿಮ್ಮ ಗೆಳೆತಿಯನ್ನು ಗರ್ಲ್ ಪ್ರೆಂಡ್ ಎಂದು ಕರೆಯುವಂತಿಲ್ಲ..ಆದರೆ ನೀವು ನಿಮ್ಮಗೆಳೆಯನನ್ನು ಬಾಯ್ ಫ್ರೆಂಡ್ ಎಂದು ಕರೆಯಬಹುದು. ಈಗ ವಿಷಯಕ್ಕೆ ಬರೋಣ.. ಹುಡುಗರದು ಹುಡುಗು ಬುದ್ದಿ:- ಹುಡುಗರದು ಎಲ್ಲ ಹುಡುಗರದ್ದು ಒಮದು ವೀಕ್ ನೆಸ್ ಏನೆಂದರೆ, ಕೌಮಾರ್ಯ ದಾಟುತ್ತಿದ್ದಂತೆಯೆ ಅವರು ಕೆಲವು ವಿಷಯಗಳಿಗೆ ...