Posts

Showing posts from January, 2012

ಒಂದು ಸಂಜೆಯ ಮಳೆಯ ನಡುವೆ...

ಅ ದೊಂದು ದಿನ ಬಾಟನಿ ಪ್ರ್ಯಾಕ್ಟೀಕಲ್ಸ್ ಮುಗಿಸಿಕೊಂಡು ಮರಳುವ ಹೊತ್ತಿಗೆ ಸರಿಯಾಗಿ ಐದು ಗಂಟೆಯಾಗಿತ್ತು. ಬಸ್ ಸ್ಟಾಪ್ ಗೆ ಹೋಗಬೆಕೆನ್ನುವುಷ್ಟರಲ್ಲಿ ‘ಧೋ’ ಎಂದು ಮಳೆ ಸುರಿಯಲಾರಂಭಿಸಿತು. ಬಳಿಯಿದ್ದ ಮುಚ್ಚಿದ್ದ ಕ್ಯಾಸೆಟ್ ಅಂಗಡಿ ಮುಗ್ಗಟ್ಟಿನ ಕೆಳಗೆ ನೆಲೆ ಕಂಡುಕೊಂಡೆ.ಆ ಸುಂದರ ಮಳೆಯನ್ನು ನಾನು ಈ ಹಿಂದೆ ಎಲ್ಲೂ ನೋಡಿರಲಿಲ್ಲ.ಆ ಮಳೆಹನಿಗಳ ಸೌಂದರ್ಯವನ್ನು ನನ್ನ ಕಣ್ಣುಗಳಲ್ಲಿ ತುಂಬಿಸಿಕೊಳ್ಳುತ್ತಿರುವಾಗಲೇ ಒಬ್ಬ ಸರಿಸುಮಾರು ಇಪ್ಪತ್ತರ ಸನಿಹದ ಹುಡುಗಿಯೊಬ್ಬಳು ನಾನಿದ್ದ ಅಂಗಡಿ ಮುಗ್ಗಟ್ಟಿಗೆ ಬಂದು ನೆಲೆ ಕಂಡಳು.ಗಮನಿಸಲಾಗಿ ಅವಳು ನನ್ನ ಗೆಳೆತಿ ಉಷಾ. ಈ ಹಿಂದೆ ಅವಳಿಗೆ ಒಂದು ಪ್ರೇಮ ಪತ್ರ ಬರೆದು ಅವಾಂತರ ಸೃಷ್ಟಿಸಿದ್ದೆ.ಇಷ್ಟು ದಿನಗಳ ಬಳಿಕ ಸಹಜಕ್ಕಿಂತ ತುಸು ಸಮೀಪದಲ್ಲೆ ನಿಂತಳು. ನಾನು ಈ ಹಿಂದೆ ಹುಡುಗಿ ಬಳಿ ಇಷ್ಟು ಸನಿಹ ನಿಂತವನಲ್ಲ.ಆವತ್ತಿನ ಘಟನೆಯನ್ನು ನೆನಸಿಕೊಂಡು ನಾನು ಸುಮ್ಮನಾದೆ. ನನಗ್ಯಾಕೋ ತುಸು ನಾಚಿಕೆಯಾಯಿತು. ಮತ್ತೆ ಗಂಡಸಿಗೆಂತ ನಾಚಿಕೆ ಅಂತ ಹಾಗೇ ನಿಂತೆ. ಅವಳೂ ಭಾಗಶಃ ತೊಯ್ದು ಹೋಗಿದ್ದಳು. ತನ್ನ ಮೈಯನ್ನೆಲ್ಲಾ ಲಘುವಾಗಿ ನೀವುತ್ತಿದ್ದಳು.ನಾನು ಅವಳ ಮುಖ ನೋಡುವ ಪ್ರಯತ್ನ ಮಾಡಿದೆ. ತೀಡಿ ತಿದ್ದಿದಂಥ ಕರಿಹುಬ್ಬು. ಮೀನಿನಂಥ ನಯನಗಳು, ನುಣುಪಾದ ಕೆನ್ನೆ,ನೀಳ ನಾಸಿಕ, ಹೂವಿನಂಥ ತುಟಿಗಳು, ನೀಳ ಕಾಯದ ದೇಹ, ಹಾಲಿನಂಥ ಬಣ್ಣ..ಹಿಂದೆಂದೂ ಆಗದಂಥ ರೋಮಾಂಚನವಾಯಿತು ನನಗೆ. ಛೇ..! ಇದೆಲ್ಲ ಆಕರ್...

ಗರ್ಲ್ ಫ್ರೆಂಡ್ ಹುಡುಗರಿಗೇಕೆ ಅನಿವಾರ್ಯ..?

ಸ ದ್ಯದ ಪರಿಸ್ಥಿತಿಯಲ್ಲಿ ‘ಗರ್ಲ್ ಫ್ರೆಂಡ್ ‘ ಪದದ ವ್ಯುತ್ಪತ್ತಿ ನಮಗೆ ಅವಶ್ಯವಿಲ್ಲ. ಈ ಪದ ಹೊಮ್ಮಿಸುವ ಅರ್ಥವನ್ನು ತಿಳಿದುಕೊಳ್ಳುವುದು ಅತ್ಯವಶ್ಯ. ಗರ್ಲ್ ಫ್ರೆಂಡ್ ಎಂಬುದರ ಅರ್ಥ ಸ್ನೇಹಿತೆ, ಗೆಳತಿ, ಸಖಿ ಎಂದೆಲ್ಲ ಆಗುತ್ತದಾದರೂ ಇತ್ತೀಚಗೆ ಈ ಪದ ಅರ್ಥ ತುಸು ಅಪಭ್ರಂಶವಾಗುತ್ತಿದೆ. ಗರ್ಲ್ ಫ್ರೆಂಡ್ ಎಂದರೆ ಗೆಳತಿಗಿಂತ ಹೆಚ್ಚು, ಪ್ರೇಯಸಿಗಿಂತ ಕಡಮೆ ಎನ್ನುವ ಭಾವದಲ್ಲಿ ಈ ಪದವನ್ನು ಬಳಸಲಾಗುತ್ತಿದೆ. ಈ ಮೊದಲು ಇಂಗ್ಲಿಷಿನಲ್ಲಿಇ ಪದ ಬಳಕೆಯಲ್ಲಿರಲಿಲ್ವೇನೋ..! ಫ್ರೆಂಡ್ ಅಂಬ ಪದವನ್ನಷ್ಟೇ ಗೆಳೆಯ ಅಥವಾ ಗೆಳತಿಯನ್ನು ಸೂಚಿಸುವುದಕ್ಕಾಗಿ ಬಳಸಲಾಗುತ್ತಿದ್ದಿರಬೇಕು. ಆದರೆ ತೀರಾ ಇತ್ತೀಚಗೆ ಗರ್ಲ್ ಫ್ರೆಂಡ್ ಮತ್ತು ಬಾಯ್ ಫ್ರೆಂಡ್ ಪದಗಳನ್ನು ಬಳಸಲಾಗುತ್ತಿದೆ. ಆದರೆ ನೆನಪಿರಲಿ, ಈ ಪದಗಳ ಬಳಕೆಗೆ ಕೆಲವು ಅಪವಾದಗಳಿವೆ. ನೀವು ಪುರುಷರಾಗಿದ್ದಲ್ಲಿ ನೀವು ನಿಮ್ಮ ಗೆಳೆಯನನ್ನು ಬಾಯ್ ಫ್ರೆಂಡ್ ಎಂದು ಕರೆಯುವಂತಿಲ್ಲ..ಆದರೆ ನಿಮ್ಮ ಗೆಳತಿಯನ್ನು ಗರ್ಲ್  ಫ್ರೆಂಡ್ ಎಂದು ಕರೆಯಬಹುದು. ಒಮದು ವೇಳೆ ನೀವು ಮಹಿಳೆಯಾಗಿದ್ದಲ್ಲಿ ನೀವು ನಿಮ್ಮ ಗೆಳೆತಿಯನ್ನು ಗರ್ಲ್ ಪ್ರೆಂಡ್ ಎಂದು ಕರೆಯುವಂತಿಲ್ಲ..ಆದರೆ ನೀವು  ನಿಮ್ಮಗೆಳೆಯನನ್ನು ಬಾಯ್ ಫ್ರೆಂಡ್ ಎಂದು ಕರೆಯಬಹುದು.  ಈಗ ವಿಷಯಕ್ಕೆ ಬರೋಣ..   ಹುಡುಗರದು ಹುಡುಗು ಬುದ್ದಿ:     ಎಲ್ಲ ಹುಡುಗರದ್ದು ಒಮದು ವೀಕ್ ನೆಸ್...

ನಾವೇಕೆ ಬುದ್ಧರಾಗುತ್ತಿಲ್ಲ...?

ಸುದೀರ್ಘವಾಗಿ ಸರಿ ಸುಮಾರು 20 ನಿಮಿಷ ಸಿದ್ಧಾರ್ಥನ ಜೀವನದಲ್ಲಿ  ಬಂದು ಹೋದ ರೋಗಿ, ವೃದ್ಧ, ಶವ, ಸಂನ್ಯಾಸಿಗಳು – ಆತನು ಬುದ್ಧನಾಗಲು ಹೇಗೆ ಕಾರಣೀಭೂತರಾದರೆಂಬುದನು ನನ್ನ ಏಳನೆಯ ತರಗತಿಯ ವಿದ್ಯಾರ್ಥಿಗಳಿಗೆವಿವರಿಸಿ ಹೇಳಿದ್ದೆ. ಸ್ತಂಭೀಭೂತರಾಗಿ ಕಣ್ಣು ಪಿಳುಕಿಸದೇ, ತುಟಿ ಪಿಟಿಕ್ಕೆನ್ನದೇ ನನ್ನನ್ನೇ ಆಲಿಸುತ್ತಿದ್ದ ವಿದ್ಯಾರ್ಥಿಗಳ ಕುತೂಹಲವನ್ನು ಕಂಡು ನನ್ನ ಬಗ್ಗೆ ನಾನೇ ಹೆಮ್ಮೆ ಪಟ್ಟುಕೊಂಡೆ. ಎಂದಿನಂತಹ ಕಿರಿ ಕಿರಿ, ಕೆಳಗಿನ ತರಗತಿಯ ವಿದ್ಯಾರ್ಥಗಳ ಗದ್ದಲ ಯಾವುದರ ತೊಂದರೆಯಿಲ್ಲದೇ ನೀತಿ ಪಾಠವನ್ನು ಯಶಸ್ವಿಯಾಗಿ ಮುಗಿಸಿದೆ ಎಂದೆನ್ನುವಷ್ಟರಲ್ಲಿ ಒಬ್ಬ ವಿದ್ಯಾರ್ಥಿಯ ಕುತೂಹಲ ಸೀಳಿಕೊಂಡು ಬಂದ ಸಂಶಯ  ಪ್ರಶ್ನೆಯ ರೂಪದಲ್ಲಿ ಅನಿರ್ಭವಿಸಿತು.      “ಸರ್..ಸಿದ್ಧಾರ್ಥನ ಜೀವನದಲ್ಲಿ ಕೇವಲ ಒಂದೇ ಒಂದು ಸಲ ಕಾಣಿಸಿಕೊಂಡ ರೋಗಿ, ವೃದ್ಧ, ಶವ, ಸಂನ್ಯಾಸಿಗಳು ನಮ್ಮ ಮುಂದೆ ಅದೆಷ್ಟೋ ಸಲ ಕಾಣಿಸಿಕೊಳ್ಳುತ್ತಾರೆ. ಆದರೆ ನಾವೇಕೆ ಬುದ್ಧರಾಗುತ್ತಿಲ್ಲ..?” ಈ ಪ್ರಶ್ನೆ ನಿಜಕ್ಕೂ ನನ್ನನ್ನು ಕಾಡತೊಡಗಿತು.     “ನಾವೂ ಬುದ್ಧರಾಗಬಹುದು..ಆದರೆ ನಾವು ಮೊದಲು ಆತನಂತೆ ಆಸೆಯನ್ನು ತ್ಯಜಿಸಬೇಕು. ಅಷ್ಟಾಂಗ ಮಾರ್ಗವನ್ನು ಅನುಸರಿಸಬೇಕು.” ಎಂಬುದಷ್ಟೇ ನನ್ನ ಉತ್ತೆರವಾಗಿತ್ತು.  ”ಸರ್.. ಸಿದ್ಧಾರ್ಥನಿಗೆ ಆತನ ಪಟ್ಟಾಭಿಷೇಕವಾದ ಬಳಿಕ ಈ ರೋಗಿ, ವೃದ್...

ಮನಸ್ಸಿನ ಭಾವನೆಗಳನ್ನು ಸಮಾಧಿ ಮಾಡುವ ಅಭ್ಯಾಸ ಮರೆತು ಹೋಗಿದೆ?

ಗೆಳತಿ,     ಇದು ಅಂದೇ ಬರೆಯಬೇಕಿದ್ದ ಪತ್ರವೆಂದು ನಿನಗನ್ನಿಸಬಹುದು. ನನ್ನ ಅಭಿಪ್ರಾಯದಲ್ಲಿ ಇದು ಪತ್ರವಲ್ಲ. ನಿನ್ನ ಬಗೆಗಿನ ಭಾವನೆಗಳ ಚಂದದ ಮೆರವಣಿಗೆ ಇರುವ ಒಕ್ಕಣೆ. ನಿನ್ನೊಂದಿನ ಸವಿ ಸ್ನೇಹದ ಹೂವು ಪ್ರೀತಿಯ ಪರಿಮಳ ಬೀರಿದ ಪರಿಯನ್ನು ನೆನೆದಾಗೆಲ್ಲ ಮನಸ್ಸು ಉಲ್ಲಸಿತವಾಗುತ್ತದೆ.  ಆ ನಿನ್ನ ಸಿಹಿಮಾತು, ಬೆಳದಿಂಗಳಂತಹ ಹೂ ನಗೆ, ನಕ್ಷತ್ರಗಳೇನೋ ಎಂಬಂಥ ನೀಲಿ ನಯನಗಳು, ಆ ಹುಸಿ ಮುನಿಸು, ಎಲ್ಲವೂ ಈ ಎದೆಯ ಕೊಳದಲ್ಲಿ ಒಂದು ಬಗೆಯ ಕ್ಷೋಭೆಯನ್ನುಂಟುಮಾಡಿದ್ದು ಸುಳ್ಳಲ್ಲವೆಂಬುದು ಮಾತ್ರ ಸತ್ಯ. ಮೊದಮೊದಲು ಇದೆಲ್ಲ ವಯಸ್ಸಿನ ಆಕರ್ಷಣೆ ಎಂದೆನ್ನಿಸಿ ಬಂದ ಭಾವನೆಗಳನ್ನೆಲ್ಲ ಕೊಂದು ಹಾಕುತ್ತಿದ್ದೆ. ಆದರೆ ಬರಬರುತ್ತ ಆ ಭಾವನೆಗಳು ಮನಸ್ಸಿನಾಳದಲ್ಲಿ ಬೇರೂರು ಟಿಸಿಲೊಡೆದು ಹೆಮ್ಮರವಾದಾಗ ನಾನದನ್ನು ಸೈರಿಸಲಾರದವನಾದೆ. ಈ ಮನಸ್ಸೇ ಹಾಗೆ. ನಿನ್ನ ಮಾತುಗಳಿಗೆ ಕಿವಿಯಾಗಬೇಕು, ನಿನ್ನ ಸನಿಹ ಸವಿಯಬೇಕೆಂಬ ಮನಸ್ಸಿನ ಹಪಹಪಿಯನ್ನಿ ಮೀರಿ ನಡೆದೆ. ಹೀಗಾಗಿ ನನಗೆ ಮನಸ್ಸಿನ ಭಾವೆಗಳನ್ನು ಸಮಾಧಿನಮಾಡುವ ಅಭ್ಯಾಸ ಮೆರತು ಹೋಗಿತ್ತು. ಅದೊಂದು ದಿನ ನಿನ್ನ ಮುಂದೆಲ್ಲವನು ಹೇಳಿಕೊಂಡೆ. ಒಬ್ಬ ಸಾದಾ ಹುಡುಗನಾಗಿ, ನಿನ್ನನ್ನು ಬದುಕಿಗೆ ಕಟ್ಟಿಕೊಳ್ಳುವ ಸಾಹಸವನ್ನು ತುಂಬಾ ಬುದ್ಧಿವಂತೆಯಾದ ನೀನು ಹೇಗೆ ಒಪ್ಪಿಕೊಂಡೆ ಎಂಬುದನ್ನು ಕಂಡು ಈಗಲೂ ನನಗೆ ನಿನ್ನ ಮೇಲೆ ಆಶ್ಚರ್ಯವುಂಟಾಗುತ್ತಿದೆ.  ...

ಅವಳೆಂದುಕೊಂಡು ನೀಡಿದ ಅಂತರಂಗದೊಳಗೆ...

ಹಗಲು ಮಲಗಿತೆಂದರೆ ಸಾಕು ಮಬ್ಬಿದಿರಿಸಿನಲಿ ಕುಣಿಯತೊಡಗುತವೆ ಕನಸುಗಳು ಯಾರ ಒತ್ತಾಯಕ್ಕೊ ಸಿಕ್ಕು ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..ಆಚಮನಕ್ಕೆ ತೆಗೆದಿರಿಸಿದ ಉದಕ ಅಂಗೈಗೆ ಜಾರಿದೊದೆ ಆವಿಯಾದುದಕೆ ಆಶ್ಚರ್ಯವಿಲ್ಲ ನಾನು ಮಾತ್ರ ಕಾಣಬಲ್ಲೆ ವಡಬಾನಲ ಅವಳೆಂದು ಕೊಂಡು ನೀಡಿದ ಅಂತರಂಗದ ಒಳಗೆ.. ಬದುಕು ಹಸನಾಗುವ ಬಯಕೆಗಳೆಲ್ಲ ಆಣೆಗಳೊಡಗೂಡಿ ಭರವಸೆಗಳ ಜೋಡಿ ಮೆರೆದಿದ್ದವು ಇಂದಿಗೂ ಒಬ್ಬಂಟಿಯಾಗಿ ಚರಿಸುತಿವೆ ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ.. ಸುಧೆ ಸೂಸುವ ಹೂದೋಟದಲಿ ಹಾಲಾಹವನೆರೆದು ಹಣ್ಣು ನೀಡೆಂದು ಹೇಳಬಹುದೆ? ಒಲವೆಲ್ಲ ಉಡುಗಿ ಹೋದ ಮೇಲೆ ಉಳಿಯಿತೇನು..? ಅವಳೆಂದು ನೀಡಿದ ಅಂತರಂಗದ ಒಳಗೆ… —-ಸಚಿನ್ ಕುಮಾರ ಬಿ.ಹಿರೇಮಠ

ಭಾವ ಬಸಿರಿನ ಕೂಸು...

ಇದು ಬರಿ ಕವಿತೆಯಷ್ಟೇ ಅಲ್ಲ..ಭಾವ ಬಸಿರಿನ ಕೂಸು ನನಸಿಗೆ ಬೆಸೆದುಕೊಂಡಿರುವ ಬೆಚ್ನೆಯ ಕನಸು ಗವ್ವನೇ ಹೊದ್ದುಕೊಂಡ ಕತ್ತಲೆಯ ಸೆರಗನ್ನು ಹಿಡಿದೆಳೆದು ಅಂತರ್ಯವನ್ನು ನಗ್ನಗೊಳಿಸಿದ  ಜ್ಯೋತಿ ನೀನು ಇಗೋ ನಿನ್ನಲಿ ನನ್ದೊಂದು ನಿವೇದನೆ.. ಕಣ್ಣು ತೆರೆದರೆ ಸಾಕು ತೆರೆದುಕೊಳ್ಳುತ್ತದೆ ನಿನ್ನದೇ ಸಿಟ್ಟು, ಸೆಳತ, ಸಲುಗೆ, ಸ್ನೇಹ, ನಗು ಒಲುಮೆ ತುಂಬಿದ ಚೆಲುವು ಹಾಗೆಂದು ಕಣ್ಣು ಮುಚ್ಚಿಕೊಂಡರೂ ಪದೇ ಪದೇ ನೆನಪಾಗುತ್ತೀಯ , ಇಳಿಯುತ್ತಿಲ್ಲ ನಿನ್ನ ಸ್ವಚ್ಛಂದದ ಮನಸಿನ ಏಕತಮ ಕಾವು ತಣಿಸಿ ಒಲಿಸುವುದು ಸುರಿವ ಸೋನೆ ಮಳೆ ನಲಿವುದು ಕ್ಷಣ ಕ್ಷಣಕೂ ಸೌಗಂಧ ಸೂಸಿ ಇಳೆ ಅಂತೆಯೇ ಹುಡುಗಿ ನನ್ನೆದೆ ನೆನೆವುದು ನಿನ್ನ ನೆನೆವಾಗ ಇಂಥ ರಮಣೀಯತೆ ಮುಂದೆ ತೃಣ ಮಾತ್ರ ಸಿರಿ ಭೋಗ ಹೂವು ನೀಡಿ ಹೃದಯ ಒಪ್ಪಿಸುವುದೆಲ್ಲಾ ಹಳತು ಪದಕೆ ಭಾವ ಬೆರೆಸಿ, ಬೆರೆಸು ಮೌನಕೆ ಮಾತು ಇದೋ ನೆನಪಿರಲಿ ಈ ಕವಿತೆಯಲ್ಲಿನ ಕೊನೆಯ ಸಾಲು ಯುಗಗಳಾಚೆಗೂ ಅಮರವೀ ಪ್ರೀತಿ ಇದಕುಂಟೇ ಸೋಲು..?                    —ಸಚಿನ್ ಕುಮಾರ ಬಿ.ಹಿರೇಮಠ

ನನ್ನ ಹವಣಿಕೆ ನಿನ್ನುಸಿರಿನ ಎಣಿಕೆಗಿಂತ ಮಿಗಿಲು...

ಪ್ರೀತಿ ಎಂದರೆ ಹಾಗೇನೆ..! ರೆಪ್ಪೆ ಮಿಟುಕಿಸುವುದರಷ್ಟರಲ್ಲಿ ಎದೆಯೊಳಗೆ ಹುಟ್ಟಿಕೊಂಡು ಬಿಡುತ್ತದೆ. ಪ್ರೀತಿ ಹುಟ್ಟೋಕೆ ಯಾವ ಕಾರಣವೂ ಬೇಕಿಲ್ಲ. ನೋಡ ನೋಡುತ್ತಲೇ, ನೋಡದೇನೆ, ಮಾತಾಡುತ್ತ, ಮಾತಿಲ್ಲದೆ, ಪ್ರೀತಿ ಅವತರಿಸಿಬಿಡುತ್ತದೆ. ಹೀಗೆ ಹುಟ್ಟುವ ಪ್ರೀತಿ ನಿಶ್ಕಲ್ಮಶವಾಗಿರುತ್ತದೆ. ಪ್ರೀತಿ ಜಾತಿ, ಕುಲ,ಭೇದ, ದೇಶ, ಭಾಷೆ – ಹೀಗೆ ಯಾವಿದಕ್ಕೂ ಜಗ್ಗದೇ ಸೀಮಾತೀತವಾಗಿರುತ್ತದೆ. ಮೊದಮೊದಲು ಸ್ನೇಹದಲ್ಲಿ ಈ ಪ್ರೀತಿ ನೆಲೆಗಂಡು ಮೊಗ್ಗಾಗಿ, ಅರಳಿ ಹೂವಾಗಿ  ಬೀರುವ ಕಂಪಿನ ಖದರ್ರೇ ಬೇರೆ.                       ನಿಜಕ್ಕೂ ಪ್ರೀತಿ ಮಧುರ. ೊಮ್ಮೆ ಈ ಹುಡುಗುಗೆ ಅಪಘಾತವಾಗಿ ರಕ್ತಸ್ರಾವವಾಗಿ ಆಸ್ಪತ್ರೆಯಲ್ಲಿದ್ದಳು. ಇವಳದು o+ve ರಕ್ತದ ಗುಂಪು. ಅಂದೊಂದು ದಿನ ಎಂದಿನಂತೆ ಈ ಹುಡುಗ ಾಸ್ಪತ್ರೆಗೆ ಬಂದು ರಕ್ತದಾನ ಮಾಡಿದ. ಾಶ್ಚರ್ಯವೆನೆಂದರೆ ಅವನದೂ o+ve ರಕ್ತದ ಗುಂಪು.  ರಕ್ತದಾನದ ಬಳಿಕ ಿವಳ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದ. ಇವಳದು ಮಾಸದ ಚೆಲುವು. 20 ರ ಆಸು ಪಾಸಿನ ಈ ಹುಡುಗಿಯನ್ನು ನೋಡುತ್ತಲೇ ಹೊರ ನಡೆದ. ಈ ಹುಡುಗಿ ತನಗೆ ರಕ್ತ ನೀಡಿದವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ವೈದ್ಯರಲ್ಲಿ ವಿಚಾರಿಸಿದಳು. ಇವನು ಆರು ತಿಂಗಳಿಗೊಮ್ಮೆ ಬಂದು ತಪ್ಪದೇ...

ಹೀಗೊಬ್ಬ ದೇವರು...

ಅದು 2003ನೇ ಇಸವಿ. ನಾನು ಆಗ ತಾನೆ ಪಿಯುಸಿ ಮುಗಿಸಿದ್ದೆ. ಪಿಯುಸಿಯಲ್ಲಿ ಮೊದಲ ಶ್ರೇಣಿಯಲ್ಲಿ ಪಾಸಾಗಿದ್ದರೂ ಆರ್ಥಿಕ ತೊಂದರೆಯಿಂದ ಇಂಜಿನಿಯರಿಂಗ್, ಮೆಡಿಕಲ್ ಗಳಂತಹ ವೃತ್ತಿಪರ ಕೋರ್ಸುಗಳಿಗೆ ನನಗೆ ಸೇರಲಾಗಲಿಲ್ಲ. ನನ್ನ ಚಿಕ್ಕಪ್ಪನವರ ಸಲಹೆ ಮೇರೆಗೆ ಡಿ.ಇಡಿ ಮಾಡುವ ನಿಟ್ಟಿನಲ್ಲಿ ಕೋರ್ಸಿಗೆ ಅರ್ಜಿ ಸಲ್ಲಿಸಿದೆ. ಆದರೆ ಅದರಲ್ಲೂ ನನಗೆ ನಿರಾಸೆ ಕಾದಿತ್ತು. ನಾನು ಸಾಮಾನ್ಯ ವರ್ಗದ ಕೆಟಗರಿಯಲ್ಲಿ ಬರುತ್ತಿದ್ದುದರಿಂದ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿದ ಶೇಕಡಾ ಅಂಕಗಳಿಗಿಂತ(cut off percentage) ನನ್ನ ಪಿಯುಸಿ ಅಂಕಗಗಳು ತುಸು ಕಮ್ಮಿ ಇದ್ದವು. ನಿರಾಸೆಯೊಂದಿಗೆ ಸ್ಥಳೀಯ ಸಂಸ್ಥೆಯಲ್ಲಿ ಟೈಪಿಂಗ್ ಕ್ಲಾಸ್ ಗೆ ಸೇರಿಕೊಂಡೆ .         ಒಂದು ವಾರದ ಬಳಿಕ ನನ್ನ ಚಿಕ್ಕಪ್ಪನಿಂದ ನನಗೆ ಕರೆ ಬಂತು. ” ‘ವಿಜಯ ಕರ್ನಾಟಕ’ದಲ್ಲಿ ಡಿ.ಇಡಿ ಕೋರ್ಸಗೆ ಪರಿಷ್ಕೃತ ಶೇಕಡಾ ಅಂಕಗಳನ್ನು ಕೇಂದ್ರೀಕೃತ ದಾಖಲಾತಿ ಘಟಕದವರು ಪ್ರಕಟಿಸಿದುದರ  ಅಧಿಸೂಚನೆಯೊಂದು ವಿಜಯ ಕರ್ನಾಟಕದಲ್ಲಿದ ಪ್ರಕಟಗೊಂಡಿದೆ, ಓದಿಕೊಂಡು ಮುಂದುವರಿ” ಎಂದು ನನಗೆ ವಿಜಯ ಕರ್ನಾಟಕ ಪತ್ರಿಕೆಯನ್ನು ಗಮನಿಸಲು ಸೂಚಿಸಿದರು. ಆವತ್ತು ಆ ಪ್ರಕಟಣೆ, ವಿಜಯ ಕರ್ನಾಟಕ ಪತ್ರಿಕೆಯೊಂದನ್ನು ಹೊರತು ಪಡಿಸಿ ಬೇರೆ ಯಾವ ಪತ್ರಿಕೆಯೂ ಪತ್ರಿಕೆಯಲ್ಲೂ ಪ್ರಕಟಗೊಂಡಿರಲಿಲ್ಲ. ಅದಲ್ಲದೇ ಅಲ್ಲಿ ನಿಗದಿ ಪಡಿಸಿ...

What is A friendship?

“To have a friend, be a friend”                                        by Tanu When the days seen longer, when you want someone by your side, you feel very lonely, do I come to mind…? Do the sweetest memories of our togetherness be ever make you cry..? Do your eyes wet while thinking of the day when we said good bye? I know I had never spoken of my affection in my heart for you. But you know very well that I trusted only  you. It’s been days since we are been together. Days since after saying farewell we went but each passing moment the nature remindes me of you my dear friend… I hope the love of our friendship may never depart. We al always be together though miles apart.Yes, these are only for you.. Only a realo friend like you can understand the unspoken words and correct the ...

ತಂಪು ಬಿಸಿಲು

ಅದೊಂದು ಸುಂದರ ಮಧ್ಯಾಹ್ನ. ನಾವು ತಲುಪಬೇಕಾದ ೂರು 100 ಕಿ.ಮೀ ಆಚೆ ಇತ್ತು. ಬೆಂಬಿಡದ ದಗೆಯಲ್ಲಿ ಮೈ ಕರಗಿ ಹೋಗುತ್ತಿತ್ತು. ಬಸ್ಸಿನಲ್ಲಿ ಅಲುಗಾಡಲನುವಾಗದಷ್ಟು ರಶ್ಶು. ಆ ನೂಕು ನುಗ್ಗಲಿನೊಮದಿಗೆ ಬಸ್ಸು ಚಲಿಸತೊಡಗಿತ್ತು. ಮಗ್ಗಲಿನ ೊಂದು ಸೀಟು ಖಾಲಿ ಆಗುತ್ತಿದ್ದಂತೆಯೇ ಹೊರಗಿನಿಂದ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಕರ್ಚಿಫನ್ನು ಕಿಟಕಿಯಿಂದ  ಎಸೆದು ತಮ್ಮ ಮಗಳಿಗೆ ಸೀಟು ಕಾದಿರಿಸಿದರು. ನಮ್ಮಲ್ಲಿ ಬಸ್ಸುಗಳಲ್ಲಿ, ರೈಲುಗಳಲ್ಲಿ, ಸೀಟು ಕಾಯ್ದಿರಿಸುವ ರಿತಿ ಇದು. ಆ ಸೀಟು ಯಾರದ್ದೋ ಎಂದು ನಾವು ನಿರೀಕ್ಷಿಸುತ್ತಿರುವಾಗ ಇಪ್ಪತ್ತರ ಸನಿಹದ ಬಾಲೆಯೊಬ್ಬಳು ಾ ಸೀಟಿಗೆ ಬಂದು ಕುಳಿತಳು. ಅಪ್ರತಿಮ ಸುಂದರಿ ಅಲ್ಲದ್ದಿದ್ದರೂ ಮಾಸದ ಚೆಲುವು.                                      ತುಸು ಕಿಲೋ ಮೀಟರುಗಳನ್ನು ನುಂಗಿ ಬಸ್ಸು ಚಲಿಸುತ್ತಿರುವಾಗ ಾಕೆ ಮ್ಯಾಗಝೀನ್ ನ್ನು ಬಿಡಿಸಿ ಓದತೊಡಗಿದಳು. ನಾವು ಮೂರು ಜನ ಗೆಳೆಯರು, ಸಹಜವಾಗಿ ನಮ್ಮ ದೃಷ್ಟಿ ಅವಳತ್ತ ಹರಿಯಿತು. ಪದೇ ಪದೆ ಅವಳನ್ನೇ ನೋಡುವಷ್ಟು ಚೆಂದವಾಗಿದ್ದಳು ಆಕೆ. ಮನಸ್ಸೊಂದು ಮರ್ಕಟ. ಅ ಕ್ಷಣಗಳಲ್ಲೆಲ್ಲ ನಮ್ಮ ನಮ್ಮಲ್ಲಿ ಸರಿದ...

ಆಶಯ

ಬಾಳ ನೊಗವನು ಹೊತ್ತು ಜೀವಗಳೊಂದಾಗಿ ಹೋಹುದಕೆ ವಿಧಿ ಮೇಳೈಸಿಕೊಂಬುತ ಬರುತಿಹದು ಬೆನ್ನ ಹಿಂದೆ ಸುಖ ದುಃಖದ ಛಡಿಯೇಟುಗಳ ನೀಡಿ  ನೊಗಭಾರ ಮಣಭಾರ ಎಂದುಲಿದು ನಿಲ್ಲಿಸದೇ ಹೊತ್ತು ನಡೆಯಬೇಕಿದೆ ಒಡೆಯ ಹೇಳಿದುದಕೆಲ್ಲ ಕೈ ಮುಗಿದು ಬದುಕು ಬೇಲಿಯ ಸುತ್ತ ಸುತ್ತಬೇಕಿದೆ ನಾಯಕನ ನೇವರಿಕೆಗೆ ಎಂಥಹದು ಪುಳಕ ಧರ್ಮ ನೀತಿಗಳ ಕಡಿವಾಣದೊಳಗಿದ್ದು ಕಾಯಕ ಬೆವರಿನಿಂದಲೆ ಈ ಮೈ ಗೆ ಜಳಕ ಕರ್ಮ ಕೃತಿಗಳ ಹರಿವಾನದೊಳಗಿಂದು ಬದುಕ ತುಂಬೆಲ್ಲ ಇನ್ನೆಂದು ಬರಿ ಉಳುಮೆ   ಮಣ್ಣ ಕಣ ಕಣಗಳಿಂದ ಸುಖದ ಬೆಳೆ ತರಲು ಬದುಕ ತುಂಬಲಿ ಎಂದೆಂದೂ ಸಿರಿ ಒಲುಮೆ ಭಿನ್ನ ಮನಮನಗಳಿಂದ ಒಲವ ಮಳೆ ತರಲು         —-ಸಚಿನ್ ಕುಮಾರ ಬಿ.ಹಿರೇಮಠ

ಶಕ್ತ

ನೀನಾಗಲಿ, ನಿನ್ನ ನೆನಪುಗಳಾಗಲಿ ಬರಕೂಡದೆಂದು ನನ್ನೆದೆಗೆ ಬೀಗ ಜಡೆದುಕೊಂಡು ಕೀಲಿ ಕೈ ಕಳೆದುಕೊಂಡೆ ಸಂಬಂಧಗಳನ್ನೆಲ್ಲಾ ತೊಳೆದುಕೊಂಡೆ ಮನಸಿನೊಳಗೆ ನಿನ್ನ ಕನಸುಗಳು ತೂರದಂತೆ ಬೇಲಿ ಹಾಕಿಕೊಂಡೆ ಕಣ್ಣು ರೆಪ್ಪೆಗಳನ್ನು ಹಿಂಡಿ ನಿನ್ನ ಜಾರಿಕೊಂಡೆ ಇವೆಲ್ಲವನ್ನು ಮೀರಿ ನೀ ನನ್ನೊಳ ಬಂದೆ ಹೇಗೆ ಸಾದ್ಯ ಎಂದಾಗ ಪ್ರೀತಿ ಎಂದೆ ಪ್ರೀತಿ ಇಷ್ಟು ಶಕ್ತವೇ…? — ಸಚಿನ್ ಕುಮಾರ ಬಿ.ಹಿರೇಮಠ

ಕನಸುಗಳು...

ಸಾಲುಗಟ್ಟಿ ಕುಳಿತಿವೆ ಕನಸುಗಳು ಮನದ ಬಾಲ್ಕನಿಯಲ್ಲಿ.. ನನಸಾಗಿ ಹಾರುವ ಹಸಿ ನಿರೀಕ್ಷೆಯಲ್ಲಿ ಇರುಳಿನ ತುಂಬ ಇಣುಕುತ್ತಿವೆ… ಬುದ್ಧ, ಬಸವ, ಗಾಂಧೀ, ನೆಹರು ಹೀಗೆ ನುಸುಳುತ್ತಿವೆ ನೂರಾರು.. ಚುಕ್ಕಿ ಚಂದ್ರಮರೆತ್ತರಕೆ ಚಿಮ್ಮಿದರೂ ಬಲುಗಟ್ಟಿ ಹೃದಯಂತರಾಳದ ಬೇರು… ಹಸಿದವರ ಬವಣೆ ನೀಗಿಸೋ ಕನಸು.. ಜಗದಳುವ ನೀಗಿ ನಗಿಸೋ ಕನಸು.. ಇಂಥ ಸ್ವಚ್ಛಂದಮಯ ಕನಸುಗಳಿಗೆ ಹಾತೊರೆಯುತ್ತಿದೆ ಎನ್ನ ಮನಸು…. —-ಸಚಿನ್ ಕುಮಾರ ಬಿ.ಹಿರೇಮಠ

ಬದುಕ ದಾರಿಯಲ್ಲಿ ಕಳೆದು ಹೋದವಳೆ..?

ಅ ವಳು ಈಗಲೂ ನೆನಪಾಗುತ್ತಿದ್ದಾಳೆ. ಸ್ನಿಗ್ಧ ಸೌಂದರ್ಯ, ಏನ್ನನೋ ಹೇಳ ಬಯಸುವ ಕಂಗಳು, ಇರುಳನ್ನೇ ನಾಚಿಸುವಂಥ ಮುಂಗುರುಳು, ಚೆಂದುಟಿಯ ಮೇಲೆ ನಳನಳಿಸುವ ಹೂ ನಗೆ, ನಿತಂಬದವರೆಗಿನ ಜಡೆ – ಎಲ್ಲವೂ ಮನಸ್ಸನ್ನು ಕಲಕಿ ಮಧುರ ಭಾವದಲೆಗಳ್ನು ಎಬ್ಬಿಸಿತ್ತು. ಅವಳು ಯಾಕಾದರೂ ನನಗೆ ಪರಿಚಯವಾದಳೋ…?ಅವಳಿಲ್ಲದ ಈ ಕ್ಷಣಗಳನ್ನು ಯಾಂತ್ರಿಕವಾಗಿ ಕಳೆಯುತ್ತ ಹೋದಲ್ಲಿ ಬದುಕಿಗಿರುವ ಮಹತ್ವವಾದರೂ ಏನು..? ಅವಳು ಮತ್ತೇ ನನನ್ ಹೃದಯಂತರಾಳದೊಳಕ್ಕೆ ಬಂದು ಸೇರುತ್ತಾಳೋ, ಬದುಕಿನ ನೀರವತೆಯನ್ನು ಕಳೆದು ಕಲರವವಾಗುತ್ತಾಳೋ ಒಂದು ಗೊತ್ತಿಲ್ಲ.. ನಮ್ಮ ನಮ್ಮ ನಡುವೆ ಹುಟ್ಟಿಕೊಂಡ ಸ್ನೇಹಲತೆಗೆ ನೀರೆರೆದಿದ್ದೆ ಈ ನನ್ನ ವೃತ್ತಿ. ವೃತ್ತಿಯನ್ನು ಪ್ರೀತಿಸಿಕೊಂಡಷ್ಟೆ ಅವಳ ಈ ಸ್ನೇಹವನ್ನು ಪ್ರೀತಿಸಿಕೊಂಡೆ. ಅವಳು ಬದುಕಿನುದ್ದಕ್ಕೂ ಕಾಣುತ್ತಿದ್ದ ಕನಸುಗಳು, ನನ್ನ ಭವಿಷ್ಯವ್ನನು ನನಗೆ ಚಿತ್ರಿಸಿಕೊಡುತ್ತಿದ್ದ ಬಗೆ, ಅವಳ ಆ ಒಂದು ಮನೋ ಇಂಗಿತ ಎಲ್ಲವನ್ನು ಅರಿತುಕೊಂಡೆ.ಅವಳ ಸ್ನೇಹದ ಸೋನೆ ಮಳೆಯಲ್ಲಿ ನನ್ನ ನೋವು ದುಗುಡಗಳೆಲ್ಲ ತುಸು ಕರಗಿ ಹೋದವೆನ್ನಿ. ಅವಳ ನಗುವಿನಾಳದಲ್ಲಿ ಪುಟಿದೆದ್ದು ಖುಷಿಯ ಸಂಗತಿಗಳನ್ನು ನಾನು ಲೆಖ್ಖವಿಟ್ಟಿಲ್ಲ. ಅವಳಾಡುತ್ತಿದ್ದ ಮಾತುಗಳಿಲ್ಲ.. ಹಾಡಿದ ಹಾಡುಗಳು, ಅದೆಷ್ಟೋ ಮನಸುಗಳಿಗೆ ಜೀವ ಲಾಲಿಯಂತೆ.. ನಿನ್ನ ಸಾಂಗತ್ಯ, ಾಮೀಪ್ಯ ಬದುಕಿನ ಮಹೋನ್ನತ ಸುಖಗಳಲ್ಲೊಂದು. ಆದರೆ ನ...