Posts

Showing posts from January, 2010

ಮುಗಿಯುತು ಸಿಂಹ ಗರ್ಜನೆ.........!

Image
ಮುಂ ಜಾನೆ ಎಷ್ಟು ಕ್ರೂರವಾಗಿರುತ್ತವೆ ಎಂಬುದಕ್ಕೆ ಇಂದಿನ ದಿನವಾದ 30-12-2009 ಸಜೀವ ಸಾಕ್ಷಿ. ಕನ್ನಡ ಚಿತ್ರರಂಗವಷ್ಟೇ ಅಲ್ಲ, ಇಡೀ ಕರ್ನಾಟಕವೇ ಕಂಬನಿ ಮಿಡಿಯುವ ಅತ್ಯಂತ ಕರಾಳವಾದ ದಿನ. ಸಾಹಸಸಿಂಹ ಡಾ.ವಿಷ್ಣುವರ್ಧನ ನಮ್ಮಿಂದ ದೂರಾದ ಕೆಟ್ಟ ಘಳಿಗೆ.   ಬೆಳಗಿನ ಜಾವವೇ ಸುದ್ದಿವಾಹಿನಿಗಳು ಸುದ್ದಿ ಬಿತ್ತರಿಸಿದವಾದರೂ ಕನ್ನಡಿಗರ್ಯಾರೂ ಆ ಸುದ್ದಿಗಳನ್ನ ತಮ್ಮ ಮಟ್ಟಿಗೆ ನಂಬದೇ ಹೋಗಿದ್ದರು. ಏಕೆಂದರೆ ನಿನ್ನೆಯಷ್ಡೇ ಗಾನ ಚೆತನ ಸಿ.ಅಶ್ವಥ್ ಗಾನಲೀನವಾಗಿದ್ದರು. ಕನ್ನಡಾಂಬೆ ಇಂಥ ಅನ್ಯಾಯವನ್ನು ತನ್ನ ಮಕ್ಕಳೊಂದಿಗೆ ಮಾಡಲಾರಳು ಎಂಬುದನ್ನು ನಂಬಲು ಸಾಧ್ಯವಿರಲಿಲ್ಲ. ಆದರೆ ಸತ್ಯ ಮಾತ್ರ ಕಹಿ..ನಿಜ..ಡಾ.ವಿಷ್ಣು ನಮ್ಮೊಡನೆ ಇನ್ನಿಲ್ಲ...            ಪ್ರೀತಿ ತುಂಬಿದ ಕಣ್ಣುಗಳು. ಕಂಚಿನ ಕಂಟದ ಮುದ್ದು ಧ್ವನಿ, ಆ ವಿಭಿನ್ನ ಶೈಲಿ, ಸರಳ ವ್ಯಕ್ತಿತ್ವ, ಸಹಾಯ ಮನೋಭಾವ ಇಲ್ಲವನ್ನೂ ದೇವರಂತೆ ಮೈಗೂಡಿಸಿಕೊಂಡಿದ್ದ ಡಾ.ವಿಷ್ಣು ಕನ್ನಡಿಗರ ಹೃದಯದಲ್ಲಿ ಆರಾಧ್ಯ ದೈವರಂತೆ ಎದ್ದು ನಿಲ್ಲುತ್ತಾರೆ.ಸದಾ ಕನ್ನಡತನವನ್ನ, ಪಾತ್ರ ತನ್ಮಯತೆಯನ್ನ ಹಾಗೂ ಅಪಾರ ಪ್ರೀತಿಯನ್ನೆ ತೋರುತ್ತಿದ್ದ ವಿಷ್ಣು, ಚಿತ್ರಲೋಕದ ಅದಮ್ಯ ತಾರೆ.      ಹೆಚ್.ಎಲ್.ನಾರಾಯಣ್ ರಾವ್ ಮತ್ತು ಕಾಮಾಕ್ಷಮ್ಮ ನವರ ಮಗನಾಗಿ ಮೈಸೂರಿನ ಚಾಂಮುಂಡಿಪುರಂ ನಲ್ಲಿ ಜನಿಸಿದ ಈ ಕಲಾವಿದ ಮೈ...