ಹಾಯ್ಕುಗಳು
*ಚಿಗುರು* ನಿರಾಸಕ್ತ ಮನಸಿನ ಆಸಕ್ತಿ *ಪ್ರೀತಿ* ಮನಸುಗಳ ಚೈತನ್ಯ ರಂಗೇರಿಸುವ ನಿತ್ಯ ಹಬ್ಬ *ವಿರಹ* ನಾಲಿಗೆ ಇರದ ಬಾಯಿಗೆ ಸುರಿದ ಜೇನು *ಕನಸು* ಹಗಲಿರುಳು ಬೆಂಬಿಡದ ಸುಂದರ ಖಯ್ಯಾಲಿ *ಶೃಂಗಾರ* ಇಬ್ಬರೇ ಸೇವಿತ ಕಾಮಪೂರಿತ ಅಮೃತ *ನಾನು* ಅವಳ ಕಣ್ಣ ಹುಡುಕಾಟದ ವಸ್ತು.. *ಬದುಕು* ಸಾವಿನ ಮನೆಯ ದಾರಿಯ ವೈಭೋಗ *ಹೆಣ್ಣು* ಶಕ್ತಿಯ ಮತ್ತೊಂದು ರೂಪ *ನಗು* ತುಟಿಗೆ ತೊಡಿಸಿದ ಒಡವೆ *ಕನಸು* ಅಪರೂಪಕ್ಕೆ ಆಗಮಿಸೋ ನಿದಿರೆಯ ತಂಗಿ *ಒಲುಮೆ* ಹೃದಯಗಳ ನಡುವಿನ ಸೋಪಾನ --- *ರನ್ನ ಕಂದ*