Posts

Showing posts from November, 2016

ಹುಡುಕಬೇಕಿದೆ....

ಸೂಕ್ಷ್ಮದರ್ಶಕದಲ್ಲಿ ಸಮಾಜವೊಂದು ಸವಿಸ್ತಾರವಾಗಿ ತೋರುತ್ತಿದೆ... ಹಸಿರು,ನೀರು,ಗಾಳಿ ಘಮಲು.. ನಡುವೆ ವಿಷದ ಹೂಂಕರಿಕೆ,ಕೊಚ್ಚೆ,ಬರೀ ಅಮಲು.. ಗೂಗಲಿನೋಪಾದಿಯಲಿ ತಲೆ ಉಳ್ಳವರ ನಡುವೆ ಖಾಲಿ ಮನಸುಗಳು ಹಲವು... ಎದೆಯ ಬಸಿದು ಬದುಕ ನೀಡುವವರ ಜತೆಗೆ ಕಾಂಕ್ರೀಟಿನ ಎದೆಯುಳ್ಳವರ ತೊರೆದ ಒಲವು.. ನಿಸ್ತೇಜ ಬಾನಿನಲ್ಲಿ ಸತ್ತು ಬಿದ್ದ ತಾರೆಗಳ ರೀತಿ ಮನದ ಅಂಗಳದಲ್ಲಿ ದಿಕ್ಕಾಪಾಲಾಗಿದೆ ನೀತಿ... ಮಹಲುಗಳಲಿ ಕಲ್ಲು ಹೊತ್ತವರ ಬೆವರು ಇನ್ನೂ ಕಾಣಸಿಗುತ್ತದೆ ಆಸೆ ಪಟ್ಟಾಗ ಬರೀ ಹತಾಶೆಯ ಉಸಿರು... ಇನ್ನಷ್ಟು ಹಿಗ್ಗಿಸಿದಾಗ, ಸತ್ಯಗಳ ಕಂತೆಯ ಹೊದ್ದ ಸುಳ್ಳಿನ ಹೊದಿಕೆ ನಿಚ್ಚಳವಾಗುವುದು ಸತ್ಯಮೇವ ಜಯತೇ... ಆಗಾಗ ನಗುತ್ತಾರೆ ಬುದ್ಧ ಬಸವ ಗಾಂಧೀ ಅಂಬೇಡ್ಕರ್ ನಗೆಯ ಕಾರಣ ಕಾಣಿಸುವುದಿಲ್ಲ.. ಯಾವುದೇ ಮಸೂರ ಹುಡುಕಿ... ಸಿಗುವುದಿಲ್ಲ... --- ರನ್ನ ಕಂದ

ಕನಸುಗಳ ಜಾಡು ಹಿಡಿದು...

ಕನಸುಗಳ ಊರಿಗೆ ಹೋದಾಗಲೆಲ್ಲ ಕೆಲ ಸಲ ಭ್ರಮ ನಿರಸನ ನಿದ್ದೆ ಹಾರಿ ಕನಸು ಪರಾರಿ ಮನಸಿನೊಳಗೇನೋ ಕಿರಿ ಕಿರಿ... ಕನಸು ಎಂದರೇನು? ನಿದ್ದೆಯ ಸಮಾನಾಂತರ ಸ್ಥಿತಿಯೇ? ಮನಸು ಮಾಡುವ ಪರಿಯೇ? ನಿದ್ದೆಯಲಿ ಏನೇನೋ ಮೂಡುವುದಲ್ಲ ! ಎದ್ದೇಳುವಂತೆ ಕಾಡುವುದು ಎಲ್ಲ.. ಒಂದೊಂದು ಕನಸು ಮನಸಿನ ಒಂದೊಂದು ಸ್ಥಿತಿ .. ಬದುಕಿನ ನೀಳ ನಕ್ಷೆ.. ಮುಂದೆ ಅದುವೇ ಶ್ರೀ ರಕ್ಷೆ.. ನಿದ್ದೆಯಿಂದ ಎದ್ದವರೆಲ್ಲ ಕನಸ ಬೆಂಬತ್ತಿದವರೇ! ಅದರ ಜಾಡು ಹಿಡಿದು ಬುದ್ಧರಾದವರು... ಸಿದ್ಧರಾದವರು ಅನೇಕ.. ಎಲ್ಲ ಕನಸುಗಳು ರಹದಾರಿಗಳಲ್ಲ.. ಕಲ್ಲು ಮುಳ್ಳು ಹೊಂದಿರುವ ಕಿರುದಾರಿ.. ಮನಃಪಟಲದ ಅಮೋಘ,ಅದಮ್ಯ ಆತ್ಮಾನುಸಂಧಾನ ಈ ಕನಸುಗಳು.. --- ರನ್ನ ಕಂದ