Posts

Showing posts from 2017

ಸುತ್ತ ಸುಳಿವವಳೇ...

ಚಿತ್ತ  ಚಂಚಲವಾಗದಂತೆ ಸುತ್ತ ಸುಳಿದವಳೇ ಮತ್ತೇನು ಕುಶಲೋಪರಿ ಎಂದು ಮುತ್ತನೀವವಳೇ ಅಂತರಂಗದ ಅಂತಃಪುರದಲಿ ಅಂತರಾಂತರ ಎಣಿಸುವವಳೇ ಇಂತು ರಾಗದಿ ಕುಂತು ಮುದದಲಿ ಅಂತರ್ಧಾನವಾಗುವವಳೇ ಮಬ್ಬಿನಲೆ ತಬ್ಬುತಿಹ ಎಳೆ ಶಶಿಯಾಗಸವ ಉಬ್ಬುತಲಿ ಹಬ್ಬವದು ಸಖಿ ಸಖನೆದೆಯಾಗಸವ -- ರನ್ನ ಕಂದ

ಹೂಗಳು

ಯಾವುದೋ ದಾರಿಯ ಬೇಲಿಯ ಹೂಗಳು ನಗುತ್ತವೆ ಪರಿಮಳದ ಅಹಮ್ಮಿನಲಿ ಸುಂದರತೆಯ ಬಿಮ್ಮಿನಲಿ ಸದಾ ಖುಷಿಯ ಧೇನಿಸುತ್ತವೆ ಒಂದೊಂದು ಹೂವಿಗೆ  ಒಂದು ಚೆಂದವಿದೆ ಸೌಗಂಧವಿದೆ ಒಂದೊಂದು ದೇವರ ಮುಡಿಗೆ ಬೇಷರತ್ ಮೀಸಲಿವೆ ನಮ್ಮಂತೆ ಬದುಕು ಹಸನು ಈ ಹೂಗಳದ್ದು ಮುಡಿಯೇರಿ ನಗುತ್ತವೆ  ಮಾಲೆಯ ಸೇರಿ ಹಲವು ಹೂಗುಚ್ಛದಲಿ ಅವಿತು ಕೆಲವು ಒಂದೊಂದು ಜಾಗೆಗೆ  ಒಂದೊಂದು ಅರ್ಥ ನೀಡುತ್ತವೆ ಈ ಹೂಗಳು ಅಂತೆಯೇ ನಮ್ಮ ಮನದ ಹೂಗಳು ಸದಾ ಅರಳಬೇಕು ಒಲವ ಸೌಗಂಧ ಸೂಸುತ ಮುಡಿಯೇರಬೇಕು ಮುಳ್ಳುಗಳ ನಡುವೆ ಮೃದುತನವ ತೋರಬೇಕು ಈ ಹೂಗಳಂತೆ.. --- ರನ್ನ ಕಂದ

ಹನಿಗವಿತೆಗಳು

ಹೂ ಮಾತು ತುಂಬಿಗಳ ತುಟಿಗೊಂದಿಷ್ಟು ಸವಿಯ ತೋರಿ ಗಾಳಿಗೊಂದಿಷ್ಟು ಗಂಧ ಸವರಿ ಹೂ ತಾ ನಗುತಲಿದೆ ಎಷ್ಟೋ ಮನಸುಗಳಿಗೆ ಚಂದ ತೋರಿ ಅದೆಷ್ಟೋ ಕಾವ್ಯಗಳ ಛಂದ ಮೀರಿ ಮಾತಾಡುತಿದೆ ಮೌನದೊಳಗೆ --- ರನ್ನ ಕಂದ ಬೆಸುಗೆ ಬಲ್ಲಿದರ ಮುಗಿಲ ನೆಕ್ಕುವ  ಇಮಾರತಿನ ಬಿಡಿಭಾಗಗಳೆಲ್ಲ ಬಡವರ ಶ್ರಮದ ಬೆವರಿನ ಬಂಧಗಳ ಬೆಸುಗೆ --- ರನ್ನ ಕಂದ

ಹಳದಿ ಗಾಜಿನ ಕನ್ನಡಕ

ಎಲ್ಲವೂ ಹಿಮ್ಮುಖ ಅಪ್ರಬುದ್ಧ ಮನಸುಗಳು ಹಳದಿ ಕಣ್ಣಲಿ ಜಗವ ಹುಡುಕಿ  ಜಗಕೆಲ್ಲ ಕಾಮಾಲೆ ಎಂದು ಪದ್ಯ ಬರೆವರು ಇತ್ತುದನ್ನು ಒತ್ತು ಕೊಡದೇ ಅರ್ಥ ಮಾಡಿಕೊಳ್ಳದೇ ಅರಿತುಕೊಳ್ಳದೇ ಗಡ್ಡ ಕೆದರಿ ಪದ್ಯ ಬರೆವರು ಯಾಕೆ ಏನು ಎಂಬುದನು ಇಂಬುಗೊಳದೇ ಜಂಭವನೆ ನಂಬಿಕೊಂಡ ಹುಂಬಿನಲಿ ಪದ್ಯ ಬರೆವರು ಕಸ್ತೂರಿಯನರಿದ  ಬಿತ್ತರದ ಮನವಿರದೆ ಒತ್ತರದಲಿ ನಾಲ್ಕೈದು ಸಾಲು ಗೀಚಿ ಎತ್ತರೆತ್ತರದಿ ಸರಿವ ಸುಳ್ಳು ಸುಖದಿ ಪದ್ಯ ಬರೆವರು.. -- ರನ್ನ ಕಂದ

ಹಸು,ಹುಲಿ ಮತ್ತು ಸತ್ಯ

ಖಡ್ಗದ ಮೇಲಿನ ರಕ್ತ ದ ಕಲೆ ಕೇವಲ ಒಣಗಿ ಹೋದ ಸೇಡಲ್ಲ. ಹುರಿ ಮೀಸೆಯ ಎಲ್ಲ ತಿರುವು ಶೂರತನದ ಕುರುಹಲ್ಲ.. ಹುಲಿಯ ಸಾವಿಗೂ ಮುನ್ನ ಗೋವು ಸಾಯಬಯಸಿತ್ತು.. ಹುಲಿಯ ಹಸಿವ ನೀಗಲು ಕರುಳ ಹರಿದಿತ್ತು.. ಸತ್ಯ ನಂಬುಗೆಯ  ಹುಲಿಗೆ ಕಲಿಸಿತ್ತು.. ಆ ಹುಲಿ ಕಲಿತುಕೊಂಡರೂ ಉಳಿದ ಹುಲಿಗಳಿಗೆ  ಅರ್ಥವಾಗಲಿಲ್ಲ.. ಕತೆಗೂ ಮೊದಲು ಸತ್ತ ಹಸುಗಳೆಷ್ಟೋ..? ಕೊಂದ ಹುಲಿಗಳೆಷ್ಟೋ ತಿಂದ ದಿನಗಳೆಷ್ಟೋ.. ಸುಮ್ಮನೇ ಕತೆಯಾಗುವುದಿಲ್ಲ ಬರೆದುದೆಲ್ಲ ಕವಿತೆಯಾಗುವುದಿಲ್ಲ.. ಎಲ್ಲ ಗೋಡೆಗಳಿಗೂ ಬೆರಣಿ ತಟ್ಡಿದರೆ ಅಂದ ತೋರುವುದಿಲ್ಲ. --- ರನ್ನ ಕಂದ

ನವ ಕರ್ನಾಟಕ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ....

ನಾನು ಪ್ರತಿ ಸಲ ವಿಜಯಪುರಕ್ಕೆ ಹೋದಾಗ ಗಾಂಧೀ ವೃತ್ತದ ಮುಂದಿನ ರಸ್ತೆಯಲ್ಲಿನ ನಗರ ಸಭೆ ಕಟ್ಟಡದ ಪಕ್ಕದಲ್ಲಿ ತಪ್ಪದೇ ಕಣ್ಣು ಹಾಯಿಸುತ್ತೇನೆ. ಅಲ್ಲಿ ಈಗ ಮಾಸ್ಟರ್ ಪ್ಲ್ಯಾನ್ ಬಂದು  ಎಲ್ಲ ಬದಲಾಗಿದೆ. ಮೊದಲು ಅಲ್ಲಿ 'ನವಕರ್ನಾಟಕ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳ'  ಎಂಬ ಖಾಯಂ ಶೆಡ್ಡೊಂದು ಸದಾ ಕಾಣ ಸಿಗುತ್ತಿತ್ತು. ಅದನ್ನು ದೂರದಿಂದಲೇ ಕಂಡಾಗ ನನ್ನ ಬಾಲ್ಯದ ಕೆಲ ಮಧುರ ನೆನಪುಗಳಿಗೆ ರೆಕ್ಕೆ ಬಂದಂತಾಗಿ ನೆನಪಿನಂಗಳದಲ್ಲಿ ಹಾರಾಡಿ ಕಣ್ಣು ತೋಯಿಸುತ್ತಿದ್ದವು.       1998 ರ ಇಸವಿ. ಆಗ ನಾನು ಒಂಭತ್ತನೆಯ ತರಗತಿ ಓದುತ್ತಿದ್ದೆ. ನನಗೆ ನಂಮ ಕನ್ನಡ ಮೇಷ್ಟ್ರು ಶ್ರೀ ಜಿ.ಕೆ.ಪಾಟೀಲ್ ಅಂದ್ರೆ ಪಂಚ ಪ್ರಾಣ. ಕಾರಣ ಅವರು ಕನ್ನಡವನ್ನು ಕೇವಲ ಕಲಿಸುತ್ತಿರಲಿಲ್ಲ.. ಕನ್ನಡ ಭಾಷೆಯ ರಸಾನುಭಾವಗೈಯ್ಯುತ್ತಿದ್ದರು. ರನ್ನನ 'ಗದಾಯುದ್ಧ' ದಲ್ಲಿನ 'ಕುರುಕುಲಾರ್ಕುನುಮರ್ಕನುಮಸ್ತಮೆಯ್ದಿದರ್' ಎಂಬ ಕಾವ್ಯ ಭಾಗವನ್ನು ವಿವರಿಸುವಾಗಲಂತೂ ಅವರು ಮಗುವಿನಂತೆ ಅತ್ತಿದ್ದು, ಆ ಕಾವ್ಯದಲ್ಲಿ ಸುಯೋಧನನ ದುರಂತ ಅಂತ್ಯವನ್ನು ತಿಳಿದು ನಾವೂ ಅತ್ತಿದ್ದು ಮರೆಯಲಾಗದ್ದು. ಹೀಗೆ ಸರಾಗವಾಗಿ ಹಳಗನ್ನಡವನ್ನು ನಿರರ್ಗಳವಾಗಿ ಓದುತ್ತಿದ್ದ ಅವರ ಭಾಷಾ ಪ್ರೌಢಿಮೆಯ ಬಗ್ಗೆ ಹೇಳತೀರದು. ಹೀಗೆ ಭಾಷೆಯ ಬಗೆಗೆ ಹೇಗೆ  ಪ್ರೀತಿ ಬೆಳೆಸಿಕೊಳ್ಳಬೇಕೆಂದು  ಅವರಲ್ಲಿ ಕೇಳಿದಾಗ ಻ವರು ಹೇಳಿದ್ದ ಮಾತು ಒಂದೇ. "ಕನ್ನಡ ಪುಸ್ತಕಗಳನ್ನು ಕೊ...

ನೀ ಸತಿಯೋ.. ರತಿಯೋ...? ದುಷ್ಟ ಸಂಹಾರಿ

ನಿಮ್ಮ ಈ ನರ್ತನ ಯಾವುದರ ಅಪವರ್ತನ? ಯಾವುದೇ ಭಂಗಿಗಳೂ ಸದ್ಯಕ್ಕೆ ತಾರವು ಯಾವುದೇ ಪರಿವರ್ತನ… ನೀ ಸತಿಯೋ ರತಿಯೋ ಅರಿತರೇನೊಂದು ತರವಲ್ಲ.. ಆ ಶಿವನ ಈ ಮದನ ಕೆದಕಿದಂತೆ ಇದು ಸಲ್ಲ… ನಿನ್ನ ಲಲಾಟದ ಮೇಲಿನ ಕೆಂಪು ನಿನ್ನ ರೌರವದ ಗುರುತೇ? ಯಾವ ಔಚಿತ್ಯಕ್ಕೆ ಈ ನಿನ್ನ ಸಿಟ್ಟು? ಇರಬಹುದೇ ನಿಮ್ಮೊಳಗೊಂದು ಗುಟ್ಟು? ನಿನ್ನ ಬೆನ್ನ ಮೇಲೆ ಅವಳ ಒಂಟಿಗಾಲಿನ ಭಂಗಿ ನಿಂತಂತೆ ನಾರಿದೈವವೊಂದು ಪುರುಷ ಪಿಶಾಚಿಯನ್ನು ನುಂಗಿ.. ಶತಮಾನಗಳಿಂದ ತುಳಿದ ಪುರುಷನ ಪೌರುಷವ ಹೇಷಾವರದಿ ಕುಕ್ಕಿ ಹತ್ತಿಕ್ಕಿ.. ಮಹಾಪರ್ವವ ಆರಾಧಿಸುತ ನಿಂತ ನಾರಿ ತಾಂಡವದಿ ದುಷ್ಟ ಸಂಹಾರಿ.. ಸದಾ ಚೇತೋಹಾರಿ…

ಮರದ ಸ್ವಗತ...

ಒಂದೊಮ್ಮೆ ನಾ ಹಸಿರಾಗಿದ್ದೆ ಇಂಗಾಲವ ಹೀರಿ  ಬಿಸಿಲ ಊಡಿ ಬಗೆಬಗೆಯ ಭಕ್ಷ್ಯಗಳನ್ನ ನೀಡುತ್ತಿದೆ.. ಒಂದೊಮ್ಮೆ ನಾ ಉಸಿರಾಗಿದ್ದೆ ಮೋಡ ಸೆಳೆದು ಮಳೆಯಾಗಿಸಿ ಧರಣಿಯ ಎದೆ ತಣಿಸುತ್ತಿದ್ದೆ ಒಂದೊಮ್ಮೆ ನಾ ಹೆಸರಾಗಿದ್ದೆ ಬಳಲಿ ಬಂದವರಿಗೆ ನೆಳಲ ನೀಡಿ ಮಡಿಲಾಗಿ ನೇವರಿಸಿ ತೂಗುತ್ತಿದ್ದೆ.. ಇಂದು ಕಸಿರಾಗಿದ್ದೇನೆ ಸಿಕ್ಕ ಸಿಕ್ಕಲ್ಲಿ ಕೊಡಲಿ ಏಟು ಬೇರು ಸಹಿತ ಹೊಸೆದು ಹಾಕಿ ಮಷೀನುಗಳ ನಡುವೆ ನೂಕಿ ಎದೆಯ ಸೀಳಿಸಿಕೊಳ್ಳುವಾಗ ನನ್ನ ದೇಹ ಹುಡಿಯಾಗಿ ಬೀಳುತ್ತೆ ಆತ್ಮ ಉತ್ತರವಿರದ  ಪ್ರಶ್ನೆಗಳ ಕೇಳುತ್ತೆ.. --- ರನ್ನ ಕಂದ

ಪ್ರೀತಿ

ನೆನೆಪೆಲ್ಲ ನಿನ್ನದೇ ಈಗ ಅವಕೆಲ್ಲ ಮೀರಿದೆ ವೇಗ ಮನಸಲ್ಲಿ ಒಲುಮೆಯ ರಾಗ ಬರಲಾರೆಯಾ ನೀ ಬೇಗ ಅತಿಯಾಸೆ ಎಂದೆನಿಸಿದರೂ ಗತಿಗೇಡು ಆಗದು ಪ್ರೀತಿ ಹಳೆ ಬೇರು ಬದುಕೆಂಬುವುದು ಹೊಸ ಚಿಗುರು ಹುಟ್ಟುವ ಪ್ರೀತಿ ನರರೆಲ್ಲ ಒಂದಾಗಿರಲೂ ನರಕ ಎಂಬುದೇ ಇರದು ಜಗವೆಲ್ಲ ಪ್ರೀತಿಸುತಿರಲು ಸ್ವರ್ಗಕ್ಕೆ ಕುಂದೇ ಬರದು *--- ರನ್ನ ಕಂದ*

ಹಾಯ್ಕುಗಳು

ಬಾಕಿ ಉಳಿದಿರುವ ಬದುಕು ಶೋಕಿ ಆಗದಿರಲಿ.. ಕೆರೆದ ಗಾಯ ಕರೆವ ಪ್ರಾಯ ಮೀರಿ ಹೋಗಲಾದಿತೆ? ರಾತ್ರಿಯುದ್ದಕ್ಕೂ ಎಣಿಸ ಕೂಡದು ಚುಕ್ಕಿ ಮುಗಿಯದ ನೋವಿಗೆ ಅಳುವುದೇಕೆ ಬಿಕ್ಕಿ? --- ರನ್ನ ಕಂದ

ಹಾಯ್ಕುಗಳು

*ಚಿಗುರು* ನಿರಾಸಕ್ತ ಮನಸಿನ ಆಸಕ್ತಿ *ಪ್ರೀತಿ*  ಮನಸುಗಳ ಚೈತನ್ಯ ರಂಗೇರಿಸುವ ನಿತ್ಯ ಹಬ್ಬ *ವಿರಹ* ನಾಲಿಗೆ ಇರದ ಬಾಯಿಗೆ ಸುರಿದ ಜೇನು *ಕನಸು* ಹಗಲಿರುಳು ಬೆಂಬಿಡದ ಸುಂದರ ಖಯ್ಯಾಲಿ *ಶೃಂಗಾರ* ಇಬ್ಬರೇ  ಸೇವಿತ ಕಾಮಪೂರಿತ ಅಮೃತ *ನಾನು* ಅವಳ  ಕಣ್ಣ  ಹುಡುಕಾಟದ ವಸ್ತು.. *ಬದುಕು* ಸಾವಿನ ಮನೆಯ  ದಾರಿಯ ವೈಭೋಗ *ಹೆಣ್ಣು* ಶಕ್ತಿಯ ಮತ್ತೊಂದು ರೂಪ *ನಗು* ತುಟಿಗೆ ತೊಡಿಸಿದ ಒಡವೆ *ಕನಸು* ಅಪರೂಪಕ್ಕೆ ಆಗಮಿಸೋ ನಿದಿರೆಯ ತಂಗಿ *ಒಲುಮೆ* ಹೃದಯಗಳ ನಡುವಿನ ಸೋಪಾನ --- *ರನ್ನ‌ ಕಂದ*

ಸಖಿ ಗೀತ

ಚಿತ್ತ  ಚಂಚಲವಾಗದಂತೆ ಸುತ್ತ ಸುಳಿದವಳೇ ಮತ್ತೇನು ಕುಶಲೋಪರಿ ಎಂದು ಮುತ್ತನೀವವಳೇ ಅಂತರಂಗದ ಅಂತಃಪುರದಲಿ ಅಂತರಾಂತರ ಎಣಿಸುವವಳೇ ಇಂತು ರಾಗದಿ ಕುಂತು ಮುದದಲಿ ಅಂತರ್ಧಾನವಾಗುವವಳೇ ಮಬ್ಬಿನಲೆ ತಬ್ಬುತಿಹ ಎಳೆ ಶಶಿಯಾಗಸವ ಉಬ್ಬುತಲಿ ಹಬ್ಬವದು ಸಖಿ ಸಖನೆದೆಯಾಗಸವ -- ರನ್ನ ಕಂದ

ಮರದ ಸ್ವಗತ

ಒಂದೊಮ್ಮೆ ನಾ ಹಸಿರಾಗಿದ್ದೆ ಇಂಗಾಲವ ಹೀರಿ  ಬಿಸಿಲ ಊಡಿ ಬಗೆಬಗೆಯ ಭಕ್ಷ್ಯಗಳನ್ನ ನೀಡುತ್ತಿದೆ.. ಒಂದೊಮ್ಮೆ ನಾ ಉಸಿರಾಗಿದ್ದೆ ಮೋಡ ಸೆಳೆದು ಮಳೆಯಾಗಿಸಿ ಧರಣಿಯ ಎದೆ ತಣಿಸುತ್ತಿದ್ದೆ ಒಂದೊಮ್ಮೆ ನಾ ಹೆಸರಾಗಿದ್ದೆ ಬಳಲಿ ಬಂದವರಿಗೆ ನೆಳಲ ನೀಡಿ ಮಡಿಲಾಗಿ ನೇವರಿಸಿ ತೂಗುತ್ತಿದ್ದೆ.. ಇಂದು ಕಸಿರಾಗಿದ್ದೇನೆ ಸಿಕ್ಕ ಸಿಕ್ಕಲ್ಲಿ ಕೊಡಲಿ ಏಟು ಬೇರು ಸಹಿತ ಹೊಸೆದು ಹಾಕಿ ಮಷೀನುಗಳ ನಡುವೆ ನೂಕಿ ಎದೆಯ ಸೀಳಿಸಿಕೊಳ್ಳುವಾಗ ನನ್ನ ದೇಹ ಹುಡಿಯಾಗಿ ಬೀಳುತ್ತೆ ಆತ್ಮ ಉತ್ತರವಿರದ  ಪ್ರಶ್ನೆಗಳ ಕೇಳುತ್ತೆ.. --- ರನ್ನ ಕಂದ

ಕಣ್ಣಿಗೂ ನಕ್ಷತ್ರವಾಗುವ ಬಯಕೆ...

ಮನದ ಆಕಾಶದೊಳಗೆ ಹೀಗೆ ಒಮ್ಮೊಮ್ಮೆ ಜಾರುತ್ತವೆ.. ಕಣ್ಣಿಗೂ ನಕ್ಷತ್ರವಾಗುವ ಬಯಕೆ ಒಮ್ಮೊಮ್ಮೆ ಹೊಳೆಯುತ್ತವೆ ಸುತ್ತ ಸುತ್ತುವ ಗ್ರಹಗಳಂತೆ ಚಿತ್ರ ವಿಚಿತ್ರಗಳು ಆಗಾಗ ಹಿಡಿವುದು ಗ್ರಹಣ ಒಂದನ್ನೊಂದು ನುಂಗಿ ತೆರೆದರೆ ಕಣ್ಣ ಅದು ಸುದಿನ ಮುಚ್ಚಿದರೆ ಕಣ್ಣ ಅದು ನಿಧನ ಕಣ್ಣಿಗೂ ನಕ್ಷತ್ರವಾಗುವ ಬಯಕೆ ಕಣ್ಣುಗಳಲಿ ಅಸಂಖ್ಯಾತ ರಾಶಿ ರಾಶಿ ಕನಸುಗಳು ಬೈಜಿಕ ಕ್ರಿಯೆಯಂತೆ ನನಸು ಮಾಡುವ ಹುನ್ನಾರ ಒಂದಿಷ್ಟು ಶಕ್ತಿ ಸಾಮರ್ಥ್ಯ ಕಣ್ಣೆಂಬ ನಕ್ಷತ್ರಗಳಿಗೆ.. ಮಿಟುಕಾಟ ಅರೆಗಳಿಗೆ.. *--- ರನ್ನ ಕಂದ*

ಹೆಜ್ಜೆ ಇಟ್ಟಿದ್ದೇನೆ...

ಹೆಜ್ಜೆ ಇಟ್ಟಿದ್ದೇನೆ ಇಡೀ ಬದುಕಿಗೆ ಶ್ರಮದ ಹೆಗಲಲಿ ಆಶೋತ್ತರಗಳ ಹೊತ್ತು ಹಾದಿಯ ಬದಿಗೆ ಮುಗುಳ್ನಗುವ ಹೂ ಹೇಳ ಹೊರಟಿದೆ ಹೊಸ ವಿಚಾರವನೊಂದು ದಾರಿಯಲ್ಲಿನ ಕಲ್ಲುಗಳೂ ಸಹ ಕೋರುತಿವೆ ಅವಕಾಶವನೊಂದು ಮೆಟ್ಟಿದರೂ ಮೇಲೇಳುವ ಬಗೆಯ ಕಲಿಸುತಿದೆ ಗರಿಕೆ ಹುಲ್ಲು ಅಪ್ಪಳಿಸುವ ತೊರೆಗೆ ಎದೆ ನೀಡುವುದ ಕಲಿಸುತಿದೆ ತೀರದ ಕಲ್ಲು ನೋವಿನಲೂ ನಗುವುದನು ತೋರುತಿದೆ ಫಲ ಹೊತ್ತ ಮರವು ನಗುವಿನಲೂ ನರಳುತಿವೆ ನೋವುಗಳ ಅಪಸ್ವರವು ಹೆಜ್ಜೆ ಇಟ್ಟಿದ್ದೇನೆ ಅರ್ಧ ದಾರಿಗೆ ಅರ್ಥವಾಗುವವರೆಗೂ ನಡೆಯಲೇಬೇಕು ಎಲ್ಲವನೂ ಹೊತ್ತು. -- *ರನ್ನ ಕಂದ*

ಪ್ರೀತಿ

ನೆನೆಪೆಲ್ಲ ನಿನ್ನದೇ ಈಗ ಅವಕೆಲ್ಲ ಮೀರಿದೆ ವೇಗ ಮನಸಲ್ಲಿ ಒಲುಮೆಯ ರಾಗ ಬರಲಾರೆಯಾ ನೀ ಬೇಗ ಅತಿಯಾಸೆ ಎಂದೆನಿಸಿದರೂ ಗತಿಗೇಡು ಆಗದು ಪ್ರೀತಿ ಹಳೆ ಬೇರು ಬದುಕೆಂಬುವುದು ಹೊಸ ಚಿಗುರು ಹುಟ್ಟುವ ಪ್ರೀತಿ ನರರೆಲ್ಲ ಒಂದಾಗಿರಲೂ ನರಕ ಎಂಬುದೇ ಇರದು ಜಗವೆಲ್ಲ ಪ್ರೀತಿಸುತಿರಲು ಸ್ವರ್ಗಕ್ಕೆ ಕುಂದೇ ಬರದು *--- ರನ್ನ ಕಂದ*

ನೆನಪುಗಳು..

Image
ಕೆರೆಯಂಚಿಗೆ ಕುಳಿತು ಎಸೆದ ಕಲ್ಲುಗಳಿಂದುಂಟಾದ ಅಲೆಗಳನ್ನೆಣಿಸಿ ಹೇಳಬಲ್ಲೆಯಾ ಗೆಳತಿ? ಅಷ್ಟೇ ಸಂಖ್ಯೆಯ ನಿನ್ನ ಬಗೆಗಿನ ನೆನಪುಗಳು ನನ್ನೆದೆಯ ಕೊಳದಲ್ಲಿ ನಿನ್ನ ಜೊತೆಗೂಡಿ ನಡೆದ ಹೆಜ್ಜೆಗಳು ಮರೆಯಾಗಿಲ್ಲ ನೀ ನಕ್ಕು ನಲಿದ ಒಲುಮೆಯಂದದಿ ಉಲಿದ ಮಳೆಯ ಮುತ್ತಿಗೆ ತಣಿದ ಧರಣಿಯಂದದ ಕ್ಷಣವು ರಾತ್ರಿಯಾಗಸಕ್ಕೆ ಪೋಣಿಸಿದ ತಾರೆಗಳು ನಿನ್ನ ಕಣ್ಣುಗಳ ತದ್ರೂಪವೆಂದು ವರ್ಣಿಸಿ ಬರೆದ ಪದ್ಯ ನಿನ್ನ ಮುತ್ತಿಗೆ ಸೋತ ತುಟಿಗಳು,ಮಲ್ಲಿಗೆ ತೂಕದ ಮನಸು ನಭದ ಹೊಟ್ಟೆ ಸೀಳಿ ಸುಳಿವ ಮಿಂಚು ನಿನ್ನ ನೋಟದಿ ಬೆರೆತು ವಸಂತಕಾಲದ ಐಸಿರಿಯ ಹೊತ್ತು ಚಿಗುರೊಡೆದ ಬಯಕೆ,ಹಗುರಾದ ಮನಕೆ ಬೆರಕೆಯಾದ ಕ್ಷಣವು ಹೀಗೆ ಪುಂಖಾನುಪುಂಖವಾಗಿ ನುಗ್ಗುತಿವೆ ಸಲಿಲವಾಗಿ ಕಣ್ಣ ರೆಪ್ಪೆಗಳಿಗೆ ಪ್ರತಿನಿತ್ಯ ಜಳಕ, ನಿನ್ನ ನೆನೆದುದರ ಫಲವಾಗಿ — ರನ್ನ ಕಂದ