ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?
ನವೆಂಬರ್ 26, 2008 ಭಾರತದ ಇತಿಹಾಸದಲ್ಲಿ ಕಪ್ಪು ಅಕ್ಷರಗಳಲ್ಲಿ ಬರೆದಿಡಬೇಕಾದಂಥ ದಿನ. ಮುಂಬಯಿ ಮಹಾನಗರದಲ್ಲಿನ ಹೋಡೆಲ್ಲುಗಳ ಮೇಲಿನ ಉಗ್ರರ ಅಟ್ಟಹಾಸವನ್ನು ಕಂಡರಿತ ದಿನ. ನೂರಾ ಐದು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದ ಸ್ಮಾರಕವೊಂದು ಮೈ ಸುಟ್ಟುಕೊಂಡ ದಿನ. ಭಾರತಿಯರ ಮೃದು ಧೋರಣೆಗೆ ಕೊಡಲಿ ಪೆಟ್ಟು ಬಿದ್ದ ದಿನ.ಹೀಗೆ ಬೆಳೆಯುತ್ತಾ ಹೋಗುತ್ತದೆ ದಿನ ದಿನಗಳ ಪಟ್ಟಿ. 2004ರಲ್ಲಿ ನಾವು ಮುಂಬಯಿಗೆ ಪ್ರವಾಸಕ್ಕೆ ಹೋದಾಗ ಗೇಟ್ ವೇ ಆಫ್ ಇಂಡಿಯಾದ ಎದುರು ನಿಂತು ಚಿತ್ತಾರ್ಷವಾಗಿ ಕಾಣುತ್ತಿದ್ದ ತಾಜ್ ಹೋಟೆಲನ್ನು ಕಣ್ಣಾರೆ ಸವಿದು ವಾಹ್..! ತಾಜ್ ಎಂದು ಕಣ್ತುಣಬಿಕೊಂಡು ಬಂದಿದ್ದೆವು. ಮುಂದೆ ನೌಕರಿ ಸಿಕ್ಕಾಗ ಒಮ್ಮೆಯಾದರೂ ಈ ಪಂಚತಾರಾ ಹೋಟೆಲ್ಲಿಗೆ ಗೆಳತಿಯೊಡನೆ ಹೋಗಿ ಬಂದರೆ ಸಾಕು ಎಂದು ನನ್ನೊಳಗೆ ಯೋಜನೆ ಹಾಕಿಕೊಂಡಿದ್ದೆ. ತಾಜ್ ಹೊತ್ತಿ ಉರುಯುತ್ತಿರುವಾಗ ಎಲ್ಲಿಲ್ಲದ ನೋವು, ತಳಮಳ ಜೊತೆಗೆ ನನ್ನಾಸೆಯೂ ಭಾಗಶಃ ಹೊತ್ತಿ ಉರಿದು ಹೋಗುತ್ತಿತ್ತು. ರೋಷ ಉಕ್ಕುತ್ತಿತ್ತು. ನಮ್ಮ ಮನೆಗೆ ಯಾರೋ ಬೆಂಕಿ ಇಟ್ಟಂತೆ ಭಾಸವಾಗುತ್ತಿತ್ತು.
ನವೆಂಬರ್ 27, 2008 ರಂದು ಶಾಲೆಗೆ ಹೋಗಲು ಮನಸ್ಸೇ ಇರಲಿಲ್ಲ. ಆದರೂ ಬೇರೆ ವಿಧಿ ಇರಲಿಲ್ಲ. ಮನಸ್ಸಿಲ್ಲದೆ ಪಾಠ ಮಾಡುವುದೆಂತು? ಒಬ್ಬ ವಿದ್ಯಾರ್ಥಿ ಕೇಳಿದ : "ಸರ್, ಮುಂಬಯಿಯಲ್ಲಿ ಭಯೋತ್ಪಾದಕರು ತಾಜ್ ಹೋಟೆಲ್ ಮೇಲೆ ಬಾಂಬ್ ದಾಳಿ ನಡೆಸಿದ್ದಾರಂತೆ? ನಿನ್ನೆ ಟಿವಿಯಲ್ಲಿ ನೋಡಿದ್ವಿ. ಸರ್ ಇವತ್ತು ಬೆಳಿಗ್ಗೆ ಕರೆಂಟ್ ಬಂದಿದೆಯಂತೆ. ಐದೇ ನಿಮಿಷ..ಹಿಂಗ್ ಹೋಗಿ ಹಂಗ್ ಬರ್ತೀನಿ.." ಎನ್ನುತ್ತ ಮನೆ3ಗೆ ಹಾರಿದ. ನಾನವನನ್ನು ತಡೆಯಲಿಲ್ಲ..ಮಧ್ಯಾಹ್ನ ಆತ ತನ್ನ ಗೆಳೆಯರೊಂದಿಗೆ ಮಾತನಾಡಿಕೊಳ್ಳುತ್ತಿದ್ದ ಮಾತುಗಳನ್ನು ನಾನು ಕೇಳಿಕೊಂಡೆ. "ಏಯ್ ಮಹಾಂತೇಶಾ..ನಮ್ಮ ದೇಶದಲ್ಲಿ ಭಯೋತ್ಪಾದಕರೆಂಬ ಡೇಂಜರ್ ವ್ಯಕ್ತಿಗಳಿದ್ದಾರೆ. ಅವರು ಜನರನ್ನ ಅಮಾನುಷವಾಗಿ ಬಾಂಬ್ ಸಿಡಿಸಿ ಕೊಲ್ಲುತ್ತಿದ್ದಾರೆ. ಅಲ್ಲ ಕಣೋ..ನಮ್ಮ ದೇಶದ ಪ್ರಧಾನ ಮಂತ್ರಿ ಇಂಥ ಭಯೋತ್ಪಾದಕರನ್ನು. ಈ ಭಯೋತ್ಪಾದಕ ಸಂಘಟನೆಗಳನ್ನು ಯಾಕೆ ಸೈನ್ಯದ ಸಹಾಯದಿಂದ ನಾಶ ಮಾಡಿಬಿಡುವುದಿಲ್ಲ..? ನಾನೇನಾದರು ಪ್ರಧಾನಿಯಾಗಿದ್ದಿದ್ದರೆ ಈ ಉಗ್ರರನ್ನು ಮುಲಾಜಿಲ್ದೆ ಸಾಯಿಸ್ಬಿಡ್ತಿದ್ದೆ." ಎಂದ ಅವನ ಾ ಮಾತುಗಳು ನನ್ನಲ್ಲಿ ಆಳವಾಗಿ ಬೇರೂರಿದವು.
ಸಂಜೆ ಮನೆಯತ್ತ ಸಾಗುವಾಗ ಸಿದ್ದಪ್ಪ ಕುಡಿದು ಟೈಟಾಗಿದ್ದ. ತೂರಾಡುತ್ತ "ಏಯ್ ಸೂಳೇ ಮಕ್ಳಾ..ಧಮ್ ಇದ್ರ ಎದ್ರಿಗೆ ಬರ್ರೋ.. ಅಲ್ಲೆಲ್ಲೋ ಹೋಟೆಲ್ ನಾಗ್ ಕುಂತು ಗಂಡಸ್ಥನ ತೋರಿಸ್ತೇನ್ರಲೇ...?ಲೇ... ಸಿಂಗಾ...ನೀ ಗಂಡಸೇನ್ಲೇ..? ಹೊರಗಿನ ದೇಶದ ಹೆಂಗಸಿನ ಮಾತ ಕೇಳಿ ಸೆರಗನ್ಯಾಗ ಬೆರಗ್ ಮಾಡ್ತಿಯೇನ್ಲೇ..? ನಿನಗ ಅದು ಇತ್ತಂದ್ರ ನೀ ಹಿಂಗ್ ಸುಮ್ಮ ಕೂಡತಿರ್ಲಿಲ್ಲ..."ಎಂದು ಬಾಯಿಗೆ ಬಂದ ಹಾಗೆ (ಮನಸಿಗೆ ಅನ್ನಿಸಿದ ಹಾಗೆ) ಚೀರುತ್ತಿದ್ದ..
ಿವೆರೆಡು ಸಂಗತಿಗಳ ತಾತ್ಪರ್ಯ ಇಷ್ಟೇ..ಒಬ್ಬ ಶಾಲಾ ಬಾಲಕ ಹಾಗೂ ಒಬ್ಬ ಸಾಮಾನ್ಯ ಮನುಷ್ಯನ ಎದೆಯಲ್ಲಿ ಉಗ್ರರ ಬಗ್ಗೆ ಕಿಚ್ಚು ಹೊತ್ತಿಕೊಂಡು ನಿಸ್ಸಹಾಯಕ ಸಂದಿಗ್ಧತೆಯನ್ನುಂಟು ಮಾಡುತ್ತಿದೆ. ಆದರೆ ಅಧಿಕಾರವಿರುವ, ದೇಶದ ಾಡಳಿತದ ಚುಕ್ಕಾಣಿ ಹಿಡಿದಿರುವ ರಾಜಕಾರಣಿಗಳಿಗೇಕೆ ಈ ಪರಿಯ ಕಿಚ್ಚಿಲ್ಲ..? ವಿಷ ವೃಕ್ಷವನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಬೇಕು. ಇಲ್ಲವಾದಲ್ಲಿ ನಮ್ಮ ನಾಶಕ್ಕೆ ನಾವೇ ಕಾರಣವಾಗಬೇಕಾಗುತ್ತದೆ. ಭಯೋತ್ಪಾದನೆ ನಮ್ಮಲ್ಲಿಂದಲೇ ಇರಲಿ ಅಥವಾ ಬೇರೆಯ ದೇಶಗಳಿಂದಲೆ ಇರಲಿ. ಅದು ಬೇರೂರಿ ಹೆಮ್ಮರವಾಗದಂತೆ ತಡೆಯಬೇಕಾಗಿದೆ. ಮಂತ್ರಿಗಳಿಗೆ ಈ ಸಂಘಟನೆಗಳ ಬಗ್ಗೆ ಚನ್ನಾಗಿ ಅರಿವಿದೆ. ಅವುಗಳ ಕಾರಸ್ಥಾನದ ಕುರಿತು ಗೊತ್ತೇ ಇರುತ್ತೆ. ಆದರೂ ಎಲ್ಲವನ್ನು ಗುಪ್ತಚರ ಇಲಾಖೆಗೆ ವಹಿಸಿ ಮೌನ ತಳೆದು ಕುಂತಿರುವುದು ಇಬ್ಬದಿಯ ನೀತಿ ಅಲ್ಲದೇ ಮತ್ತೇನು..? ಅಲ್ ಖೈದಾ, ಲಷ್ಕರ್ ಎ ತೊಯ್ಬಾ, ಜಿಹಾದ್ ನಂತಹ ುಗ್ರರ ಸಂಘಟನೆಗಳನ್ನು ಹುಟ್ಟು ಹಾಕಿದ್ದೇ ಇವರೇ ಏನೋ ಎಂಬಂತೆ ಅನುಮಾನವುಂಟಾಗುವುದು ಸಹಜ. ಡಾ. ಮನಮೋಹನ್ ಸಿಂಗ್ ಅರ್ಥ ಮಂತ್ರಿಯಿದ್ದಾದ ದೇಶದ ಆರ್ಥಿಕ ಸುಭದ್ರತೆಯನ್ನು ಅದೆಷ್ಟು ಚೆನ್ನಾಗಿ ಕಾಪಾಡಿಕೊಂಡು ಬಂದಿದ್ದರು.. ಇಂದು ಅವರೇ ಆಡಳಿತದ ಚುಕ್ಕಾಣಿ ಹಿಡಿದ್ದಾರೆಂದರೆ ಈ ಭಯೋತ್ಪಾದನೆಯಂತಹ ಸಮಸ್ಯೆಗಳನ್ನು ತೊಡೆದು ಹಾಕಬೆಕು. ಆದರೆ ಅವರೇಕೆ ಹೀಗೆ ತಟಸ್ಥರಾಗಿದ್ದಾರೆ..?ಅವರ ಬುದ್ಧಿಗೆ ಏನಾಗಿದೆ..? ಯಾಕೆ ಭಯೋತ್ಪಾದನೆಯ ವಿರುದ್ಧ ಸೂಕ್ತ ಯೋಜನೆಗಳನ್ನು ಹಾಕಿಕೊಳ್ಳುತ್ತಿಲ್ಲ...?
ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿ ವೀರಸ್ವರ್ಗವನ್ನು ಪಡೆದ ಕರ್ಕರೆ,ಸಂದೀಪ್,ಅಶೋಕ್ ಅವರಂಥ ಕುಟುಂಬಗಳಿಗೆ ಸಿಗಬೇಕಾದ ಪರಿಹಾರದ ಮೊತ್ತವನ್ನು ಕೇವಲ ಲಕ್ಷಗಳಿಗೆ ಇರಿಸಿ ಅವರ ದೀರತನವನ್ನು ಅಲಕ್ಷ ಮಾಡಿದ ಾರೋಪವು ಈ ರಾಜಕಾರಣಿಗಳ ಮೇಲಿದೆ. ಓದು sms ಹೀಗೆ ನನ್ನ ಮೊಬೈಲಲ್ಲಿ ಮೂಡಿತ್ತು..
ಒಲಂಪಿಕ್ಸ್ ನಲ್ಲಿ ಒಂದು ಚಿನ್ನ ಗೆದ್ದಿದ್ದಕ್ಕೆ
ಕೋಟಿ + ಕೋಟಿ + ಲಕ್ಷ + ಲಕ್ಷ...
ಮುಂಬಯಿಯಲ್ಲಿ ಹಲವು ುಗ್ರರನ್ನು ಮೆಟ್ಟಿದ್ದಕ್ಕೆ
ಬರೀ ಲಕ್ಷ..
ಆಹಾ..ಎಂಥ ..ಮಾನ ಸಮ್ಮಾನ...?
ನಿಜಕ್ಕೂ ನನ್ನ ದೇಶ ಮಹಾನ..!
ಒಟ್ಟಿನಲ್ಲಿ ಭಾರತದಲ್ಲಿ ಮತ್ತೊಮ್ಮೆ ಸ್ವಾತಂತ್ರ್ಯ ಹೋರಾಟ ಆರಂಭವಾಗಿದೆ. ಭಯೋತ್ಪಾದನೆಯಿಂದ ಸ್ವಾತಂತ್ರ್ಯ. ಇದರಲ್ಲಿ ಮತ್ತೊಮ್ಮೆ ಭವ್ಯ ಭಾರತದ ನಾಗರಿಕರಾದ ನಮಗೆ ಸದವಕಾಶ..ನಮ್ಮಿಂದೇನು ಸಾಧ್ಯವೋ ಅದನ್ನು ಮಾಡೋಣ.. ನಾವೂ ಟಿಪ್ಪು ಸುಲ್ತಾನ್, ಸಿರಾಜು ದೌಲ್, ತಾತ್ಯಾ ಟೋಪಿ, ಝಾನ್ಸಿ ಲಕ್ಷ್ಮೀ ಬಾಯಿ, ಕಿತ್ತೂರು ಚೆನ್ನಮ್ಮಾ,ಭಗತ ಸಿಂಗ್, ಮಹಾತ್ಮಾ ಗಾಂಧೀ...ಹೀಗೆ ಯಾರಾದರೊಬ್ಬರೂ ಆಗೋಣ..ನೀವೇನಾಗುತ್ತೀರೋ ನಿಮಗೆ ಬಿಟ್ಟದ್ದು..ಹ್ಞಾಂ..ಆದರೆ ಒಂದ್ವಿಷಯ..ದಯವಿಟ್ಟು ರಾಜಕಾರಣಿಗಳಂತು ಆಗಬೇಡಿ..
----ಸಚಿನ್ ಕುಮಾರ ಬಿ.ಹಿರೇಮಠ

Comments