ಮನಕಲಕಿದ ಜೋಕು...

ಒಮ್ಮೆ ನಮ್ಮ ಭಾರತೀಯ ರಾಜಕಾರಣಿಯೊಬ್ಬರು ವಿದೇಶಕ್ಕೆ ತೆರಳಿದ್ದರಂತೆ. ಅಲ್ಲಿನ ಒಬ್ಬ ರಾಜಕಾರಣಿಯನ್ನು ಭೇಟಿ ಮಾಡಿ "ನೀವು ಇಷ್ಟು ಬೇಗ ಹೇಗೆ ಶ್ರೀಮಂತರಾದಿರಿ?" ಎಂದು ಕೇಳಿದ. ಅದಕ್ಕೆ ಆ ರಾಜಕಾರಣಿ ನಮ್ಮ ಭಾರತೀಯ ರಾಜಕಾರಣಿಯನ್ನು ತನ್ನ ಮನೆಯ ಕಿಟಕಿಯ ಹತ್ತಿರ ಕರೆದುಕೊಂಡು ಹೋಗಿ "ನಿಮಗೆ ಆ ಸೇತುವೆ ಕಾಣುತ್ತಿದೆಯಾ?" ಅಂದ.ಅದಕ್ಕಿವನು "ಹೌದು.. ಕಾಣ್ತಿದೆ.." ಎಂದ. ಆಗ ಆ ರಾಜಕಾರಣಿ "ನಾನು ಆ ಸೇತುವೆಯಲ್ಲಿ 10% ಗುಳುಂ ಮಾಡ್ದೆ" ಅಂತಂದ.


1 ತಿಂಗಳು ನಂತರ ಆ ವಿದೇಶಿ ರಾಜಕಾರಣಿ ಭಾರತಕ್ಕೆ ಬಂದ. ಆಗ ತನ್ನ ಮನೆಗೆ ಭೇಟಿ ಕೊಟ್ಟಿದ್ದ ಹಳೇ ಭಾರತೀಯ ರಾಜಕಾರಣಿಯನ್ನು ಕಂಡು ಬೆರಗಾದ. ಭಾರತೀಯ ರಾಜಕಾರಣಿ ಕೇವಲ ಒಂದು ತಿಂಗಳಲ್ಲಿ ಶ್ರೀಮಂತನಾದದ್ದನ್ನು ಕಂಡು ಇದ್ಹೇಗೆ ಸಾಧ್ಯ ಅಂತ ಕೇಳಿದಾಗ ಆತ ತನ್ನ ಮನೆಯ ಕಿಟಕಿ ಹತ್ತಿರ ಆ ವಿದೇಶಿ ರಾಜಕಾರಣಿಯನ್ನು ಕರೆದುಕೊಂಡು ಹೋಗಿ "ನಿಮಗೆ ಆ ಸೇತುವೆ ಕಾಣ್ತಿದೆನಾ?" ಅಂತಂದ.

"ಇಲ್ಲ..." ವಿದೇಶಿ ರಾಜಕಾರಣಿ ಹೇಳ್ದ.

"ನಾನು 100ಕ್ಕೆ 100ರಷ್ಟು ಗುಳುಂ ಮಾಡ್ದೆ..."
ಆ ವಿದೇಶಿ ರಾಜಕಾರಣಿ ದಂಗಾದ...

     (ಮೊನ್ನೆ ಕನ್ನಡ ಪ್ರಭದಲ್ಲಿ ಓದಿದ್ದು..)

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....