ಕನಸುಗಳ ಜಾಡು ಹಿಡಿದು...
ಕನಸುಗಳ ಊರಿಗೆ
ಹೋದಾಗಲೆಲ್ಲ
ಕೆಲ ಸಲ ಭ್ರಮ ನಿರಸನ
ನಿದ್ದೆ ಹಾರಿ ಕನಸು ಪರಾರಿ
ಮನಸಿನೊಳಗೇನೋ
ಕಿರಿ ಕಿರಿ...
ಕನಸು ಎಂದರೇನು?
ನಿದ್ದೆಯ ಸಮಾನಾಂತರ ಸ್ಥಿತಿಯೇ?
ಮನಸು ಮಾಡುವ ಪರಿಯೇ?
ನಿದ್ದೆಯಲಿ ಏನೇನೋ ಮೂಡುವುದಲ್ಲ !
ಎದ್ದೇಳುವಂತೆ ಕಾಡುವುದು ಎಲ್ಲ..
ಒಂದೊಂದು ಕನಸು
ಮನಸಿನ ಒಂದೊಂದು ಸ್ಥಿತಿ ..
ಬದುಕಿನ ನೀಳ ನಕ್ಷೆ..
ಮುಂದೆ ಅದುವೇ ಶ್ರೀ ರಕ್ಷೆ..
ನಿದ್ದೆಯಿಂದ ಎದ್ದವರೆಲ್ಲ
ಕನಸ ಬೆಂಬತ್ತಿದವರೇ!
ಅದರ ಜಾಡು ಹಿಡಿದು ಬುದ್ಧರಾದವರು...
ಸಿದ್ಧರಾದವರು ಅನೇಕ..
ಎಲ್ಲ ಕನಸುಗಳು
ರಹದಾರಿಗಳಲ್ಲ..
ಕಲ್ಲು ಮುಳ್ಳು ಹೊಂದಿರುವ
ಕಿರುದಾರಿ..
ಮನಃಪಟಲದ
ಅಮೋಘ,ಅದಮ್ಯ
ಆತ್ಮಾನುಸಂಧಾನ
ಈ ಕನಸುಗಳು..
--- ರನ್ನ ಕಂದ
Comments