ಮೊಬೈಲ್ ಬಳಸುವ ಮುನ್ನ....


ನೀವು ಯಾವುದೊ ಟೆನ್ಷೆನ್ನಿನಲ್ಲಿರುತ್ತೀರಿ. ನಿಮ್ಮ ಮೊಬೈಲಿಗೆ ಅಪರಿಚಿತ ನಂಬರ್ನಿಂದ ಮೆಸೇಜೊಂದು ಬರುತ್ತೆ. ನೀವು ಆ ನಂಬರ್ರಿಗೆ 'who s dis?' ಅಂತ ಮೆಸೇಜು ಮಾಡುತ್ತೀರಿ. ಆದರೆ ಆ ನಂಬರ್ರಿನ ವಾರಸುದಾರ ನಿಮ್ಮ ಯಾವ ಪ್ರಶ್ನೆಗಳಿಗೂ ಒಂದಿನಿತೂ ಉತ್ತರಿಸುವುದಿಲ್ಲ. 'guess me' ಅಂತಲೋ ಇಲ್ಲವೇ ಬೇರೆ ಏನಾದರೊಂದು ಸಬೂಬು ಹೇಳುತ್ತ ಹೋಗುತ್ತಾನೆ. ನೀವು ತೀರ confuse ಆಗಿ ಕೋಪಗೊಳ್ಲುತ್ತೀರಿ. ಕಾಲ್ ಮಾಡಿ ಮಾತಲಾಡೆತ್ನಿಸಿದರೆ ಆ ಕಡೆಯಿಮದ ನೋ ಆನ್ಸರ್..! ಹೀಗಾದಾಗ ನನೀವು ಕೋಪದಲ್ಲಿ rubbish ಆಗಿ ಅಥವಾ ಯವುದೋ ಒಂದು ವಿಧಾನದಲ್ಲಿ ಬೈದು ಬಿಡುತ್ತೀರಿ. ಆದರೆ ಇವೆಲ್ಲದಕ್ಕಿಂತ ಮುಂಚೆ ತುಸು ಯೋಚಿಸಿ...
   ಆ ಕಡೆಯವರು ನಿಮ್ಮ ಗೆಳೆಯರೋ,ಗೆಳತಿಯರೋ ಅಥವಾ ಆಪ್ತೇಷ್ಟರೊ ಆಗಿರುತ್ತಾರೆ. ಆಕಡೆಯವರು ಒಂದು ವೇಳೆ ನಿಮ್ಮ ಗೆಳತಿಯಾಗಿದ್ದರೆ ನಿಮ್ಮ ಬಗೆಗಿನ ಅವಳ ಭಾವನೆ ಕಮರಿ ಹೋಗುತ್ತದೆ. ನಿಮ್ಮ ಮತ್ತೊಂದು ಮುಖ ಅವಳೆದರು ಅನಾವರಣಗೊಂಡು ಬಿಡುತ್ತದೆ. ನೀವು ತುಂಬಾ ಚೀಪ್ ಎಂದು ಆಕೆ ತಿಳಿದುಕೊಳ್ಳಬಹುದು.ಇಲ್ಲವೆ ನಿಮ್ಮ ಬಗ್ಗೆ ಅವಳು ಇತರರಿಗೆ ಉಸುರಿಬಿಡಬಹುದು."ಏನೋ ಸ್ವಲ್ಪ ಕಿಚಾಯಿಸೋಣ ಅಂತಂದ್ರೆ ಹಾಗಾ ಬೈಯೋದು?" ಅಂತ ಆಡಿಕೊಳ್ಳಬಹುದು. ಒಂದು ಕ್ಷಣದ ಸಿಟ್ಟಿನಿಂದ ನಿಮ್ಮ ತೇಜೋವಧೆಯಾಗಬಹುದು. ಆದ್ದರಿಂದ ಅಪರಿಚಿತ ನಂಬರ್ರುಗಳಿಂದ ಬರುವ ಮೆಸೆಜುಗಳಿಗೆ ಸೌಮ್ಯವಾಗಿ ಉತ್ತರಿಸಿ. ಸೌಜನ್ಯದಿಂದಲೇ ವರ್ತಿಸಿ. ತೀರ ಅಸಹ್ಯವೆನಿಸುವ ಮೆಸೇಜುಗಳು ಅಥವಾ ಕಿರಿ ಕಿರಿಯನ್ನುಂಟು ಮಾಡುವ ಮೆಸೇಜುಗಳಿಗೆ ಉತ್ತರಿಸಲೇಬೇಡಿ. ಅವರು ತಮ್ಮ ಪರಿಚಯ ಮಾಡಿಕೊಳ್ಳದಿದ್ದರೆ ಅವರೊಂದಿಗೆ ಮುಂದುವರೆಯಲೆ ಬೆಡಿ.[ಅಂತಹ ನಂಬರ್ರುಗಳನ್ನು no screening ಗೆ ಹಾಕಿ ಬಿಡಿ]ಮುಂದೊಂದು ದಿನ ಅವರೇ ತಮ್ಮ ಪರಿಚಯ ಮಾಡಿಕೊಳ್ಳಬಹುದು.
ಹುಡುಗಿಯರು ಈ ವಿಷಯದಲ್ಲಿ ಸಾಕಷ್ಟು ಹುಷಾರಾಗಿರುವುದು ಒಳಿತು. ತಮಗೆ ಬರುವ ಅಪರಿಚಿತ ಕರೆ ಅಥವಾ ಮೆಸೇಜುಗಳಿಗೆ ಉತ್ತರಿಸದೇ ತಮ್ಮ ಪೋಷಕರಿಗೆ ತಿಳಿಸುವುದು ಒಳಿತು.ಮೊಬೈಲ್ ಫೋನ್ ಒಂದು ಸಂಪರ್ಕ ಸಾಧನವಷ್ಟೇ. ಕರೆಗಳಿಗೆ ಅಥವಾ ಮೆಸೇಜುಗಳಿಗೆ ಶಾಂತವಾಗಿ ಪ್ರತ್ಯುತ್ತರಿಸಿ ಮುಂದುವರೆಯುವುದು ಸೂಕ್ತ.ಮೊಬೈಲ್ ಫೋನ್ ನಿಮ್ಮ  ಸಂಪರ್ಕದ ಜೊತೆಗೆ ನಿಮ್ಮ ವ್ಯಕ್ತಿತ್ವವನ್ನು ಕೂಡ ಪ್ರತಿಬಿಂಬಿಸುತ್ತದೆ.

                         ----ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....