ಆಶಯ


ನೆಲದ ತವಕ
ಸಸಿಗೆ ನೆವಕ
ರವಿಯ ಬೆಳಕು
ಹೃದಯ ಸ್ಪರ್ಶ
ಹೊಸದೊನ್ದು
ಬದುಕು..

ಎದೆಯ ಗುಡಿಯಲಿ
ತಮದ ಜಾಡು
ಅರಿವ ಬೆಳಕಿನ ಕೋಲು
ಪುನಃ ತಮದ ಸೋಲು

ತನುವ ಪಣತಿಗೆ
ಒಲುಮೆ ತೈಲವ ತುಮ್ಬಿ
ಅರಿವ ಕಿಡಿ ಮುಡಿಸಬೇಕು
ಬದುಕೇ ಹೊಸ ಬೆಳಕು
ಅದು ಜಗವ ಬೆಳಗಬೇಕು..

--ಸಚಿನ್ ಕುಮಾರ ಬ.ಹಿರೇಮಠ(ರನ್ನ ಕಂದ)

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...