ನಿರೀಕ್ಷೆ

ನಗುವೊಂದು ನಿಂತಿದೆ
ತುಟಿಯ ಅಂಚಲ್ಲೆ
ಎದೆಯ ದುಗುಡವ ತಡವಿಕೊಂಡು
ಮಂದಹಾಸವಾಗಿ


ನಡೆದಷ್ಟು ಕಲ್ಲುಮುಳ್ಳಿನ ಹಾದಿ
ಬದಿಗೆಲ್ಲ ನೋಡಿ ನಗುವವರದೇ ಬೀದಿ
ಕಾರುಣ್ಯ ರಸ ಹಳಸಿದೆ ಎಲ್ಲರಲಿ
ಕಲ್ಲರಳುವ ಸಮಯವಿಲ್ಲ ಇಲ್ಲಿ


ಅಗುಳ ಕಂಡರೇ ಕರೆವ ಕಾಗೆಯಂತಿಲ್ಲ
ಮನುಜ
ಕಂಡರೂ ಕಾಣದಂತಿದ್ದರೆ ಎಲ್ಲವೂ
ಸಹಜ
ಮನ-ಮನದ ನಡುವಿನ ಸೋಪಾನ ಸಡಿಲ
ಬದುಕು ಬಾಳುವುದಿಲ್ಲಿ ಇನ್ನೂ ಜಟಿಲ


ನಗು ತಾ ಹುಟ್ಟಬೇಕಿದೆ ದಿನವೂ
ಮನದ ಕದ ತಟ್ಟಬೇಕಿದೆ ನಗುವು
ಮನಕೆ ಮನದ ಮುದವಾಗಲೇಬೇಕು
ಆಗ ಮಾತ್ರ ಹಸನು ನಂಮ ಬದುಕು
-- ರನ್ನ ಕಂದ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...