ನಮಗೂ ಗ್ರಹಣ ಹಿಡಿದಿದೆ…


ನಾವೂ ಸಹ ಚಂದ್ರನಂತೆ

ಕಲೆಯುಳ್ಳವರು

ಬೆಲೆಯುಳ್ಳವರು

ಗೆದ್ದ ಜನನಾಯಕರ

ಭ್ರಮಿಸುತ್ತ ಗಮಿಸುವವರು

 

ಲೋಕಕಲ್ಯಾಣವೆಂಬ ಶುಭ್ರ ಸೂರ್ಯನೆಳಸಿ

ನಾನಾ ರೀತಿಯಲಿ ಸಿಡಿಸಿಡಿದ ಜನನಾಯಕರು

ಐದು ವರ್ಷದುದ್ದಕ್ಕೂ ವಿರಳ ರೇಖೆಯಲಿ ಬಂದು

ಎದುರಾಗುತ್ತಾರೆ ಮರೆಮಾಡಿ ಎಲ್ಲವನು

ಆಗ ಹಿಡಿಯುತ್ತದೆ ನೋಡಿ ಗ್ರಹಣ!

 

ಸ್ಪರ್ಶ ಕಾಲದ ಮುನ್ನ

ಉದ್ದುದ್ದ ಭರವಸೆಗಳು

ಮಾರುದ್ದ ಪ್ರಣಾಳಿಕೆಯಲಿ

ಬಹಳಷ್ಟು ಆಸೆಗಳು

ಜೀವ ತೇಯುತ ಕುಂತಿರುತ್ತವೆ

ಕಲ್ಯಾಣ ಕಾರ್ಯಗಳು

ಸ್ಪರ್ಶಿಸುತ್ತಲೇ ಎಲ್ಲವೂ

ಮಸುಕು ಮಸುಕು

ಜನನಾಯಕರ ಪ್ರಭಾವ

ನಮ್ಮಂಥ ಚಂದಿರುಗಳ ಮೇಲೆ

ಎಲ್ಲದಕೂ ಅಭಾವ

 

ಆಗಾಗ್ಗೆ ನಮಗೂ ಹಿಡಿದಿದೆ ಗ್ರಹಣ

ಏನೂ ಕಾಣಿಸುವುದಿಲ್ಲ

ಊಟ ತಿಂಡಿ ಶೌಚ ಎಲ್ಲವನು ಬದಿಗೊತ್ತಿ

ಮೋಕ್ಷಕೆ ಕಾಯಲೇಬೇಕು

ಕತ್ತಲೆಯಲೇ ಇರಬೇಕು

ಮೋಕ್ಷಕೆ ಕಾಯಲೇಬೇಕು..

ನಮಗೆ ಹಿಡಿದ ಗ್ರಹಣ ಕಳೆವುದಿಲ್ಲ

ನಾವು ಅರಿಯದಲೆ ಉಳಿವು ಇಲ್ಲ.

 

--- ಸಚಿನ್ ಕುಮಾರ ಬ.ಹಿರೇಮಠ(ರನ್ನ ಕಂದ)

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....