ಗಟ್ಟಿತನ…


 

ಮಾತನು ಮೌನದೊಳಗೆ ಅಡಗಿಸಿಟ್ಟವರಿಗೆ

ಹಾಡಬೇಕಿದೆ ಕ್ರಾಂತಿಗೀತೆಯ

ಶಾಂತಿ ಕದಡುತಿಹ ಮನಸುಗಳಿಗೆ

ಹಾಡಬೇಕಿದೆ ಕ್ರಾಂತಿಗೀತೆಯ

 

 

 

ಗಿಡದ ಹೂ ಬರಿ ಗಿಡಕೆ ಸೌಂದರ್ಯವಲ್ಲ

ಅದು ಜಗದ ಸುಂದರತೆಯ ಕಿಡಿ

ನಿನ್ನಿರವು  ಬರಿ ಈ ಸಂಬಂಧಗಳಿಗಷ್ಟೇ ಅಲ್ಲ

ಹೃದಯದಿ ವಿಶ್ವಮಾನವತೆಯ ಮಿಡಿ

 

 

 

ನಡೆವ ನೆಲ ಕುಡಿವ ಜಲ

ಸುಂಕ ಬೇಡುವ ಮುನ್ನ

ಒಡ್ಡು ಎದೆಯನು ಸೀಳಲಿ ಶೂಲ

ಬಾಳು ಪುಟಕಿಟ್ಟ ಚಿನ್ನ

 

 

 

ಹೊಳೆವ ನಕ್ಷತ್ರದಂತಿರು ದೂರದೂರದೆ

ಮಾತ ಕೊಲುವವರಿಗೆ  ತೋರು

ಒಡಲ ಬೆಂಕಿ ಆರದಾರದೆ

ಮೃದುತನದಿ ಗಟ್ಟಿತನದ ಕುರುಹು

ಗಟ್ಟಿಗೊಳ್ಳುವ ತನಕ ಅರುಹು..

 

 

 

 

--- ಸಚಿನ್ ಕುಮಾರ ಬ.ಹಿರೇಮಠ(ರನ್ನ ಕಂದ)

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....