ಹುಡುಕಬೇಕಿದೆ ನೆಮ್ಮದಿಯನು...

 ಹುಡುಕಬೇಕಿದೆ
ಬದುಕಿನ ಸಂದೂಕಿನಲ್ಲೊಂದಿಷ್ಟು
ಹುದುಗಿಸಿಟ್ಟ ನೆಮ್ಮದಿಯನು
ಅದಕಿದಕೆ ಎಡತಾಕದೆ
ಹೆಚ್ಚೇನೂ ಕೆದಕದೆ
ಅಡಕವಾದ ಬಾಳಿನೊಲುಮೆಯನು
ಹುಡುಕಬೇಕಿದೆ ಇನ್ನು
ಹುದುಗಿಸಿಟ್ಟ ನೆಮ್ಮದಿಯನು

 ಹುಟ್ಟಿದಾಗ ನಮ್ಮೊಳಗಿತ್ತು
ನಮ್ಮ ಬಳಗದಲೇ
ಅದು ಕಳುವಾಗಿತ್ತು
ಬೆಳೆ ಬೆಳೆಯುತ್ತ ಬಾಳುತ್ತ
ಕಳೆದುಕೊಂಡೆವದನು ನಾವೆಲ್ಲ
ಹುಡುಕಬೇಕಿದೆ ಇನ್ನು
ಹುದುಗಿಸಿಟ್ಟ ನೆಮ್ಮದಿಯನು

 ನಮ್ಮ ನಮ್ಮೊಳಗೆ ಬೆಳೆದು
ಸುಮ್ಮ ಸುಮ್ಮನೆ ಸೆಳೆದು
ಹಮ್ಮು ಬಿಮ್ಮಿನಲಿ ಕಳೆದು
ಕೈ ಪೂರಾ ಖಾಲಿ ಉಳಿದು
ಆಯಿತಲ್ಲ ಬದುಕು
ಬಾರದಿಲ್ಲ ಎದಕು
ಹುಡುಕಬೇಕಿದೆ ಇನ್ನು
ಹುದುಗಿಸಿಟ್ಟ ನೆಮ್ಮದಿಯನು

 ಒಲುಮೆಯನು ಉಟ್ಟು
ನಗುನಗವ ತೊಟ್ಟು
ಎಲ್ಲರೆದೆಯಲಿ
ನಲುಮೆಯನು ನೆಟ್ಟು
ಬಾಳಗುರಿಯನು ಮುಟ್ಟು
ಹುಡುಕಬೇಕಿದೆ ಇನ್ನು
ಹುದುಗಿಸಿಟ್ಟ ನೆಮ್ಮದಿಯನು

--- ಸಚಿನ್ ಕುಮಾರ ಬ.ಹಿರೇಮಠ(ರನ್ನ ಕಂದ)


Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....