ಬೆಂಕಿ

ಬೆಂಕಿ
ನಗುತ್ತಿದೆ
ದಲಿತರ ಕಪ್ಪು ಚರ್ಮವ ನೋಡಿ
ತನ್ನ ಧಗೆಯೊಳಗೆ ಅವಿತ
ಕಪ್ಪಿನೊಂದಿಗೆ ಹೋಲಿಸಿಕೊಂಡು
ಬೆಂಕಿ ನಗುತ್ತಿದೆ

ಬಿಳಿಯ ಹೂವುಗಳು
ಮಾತ್ರ ಅರಳುತ್ತಿವೆ ದಿನವಿಡೀ
ಬದುಕಿ
ಅರಳಿಸದೇ ಉಳಿದವುಗಳ
ನೆರಳಿಗಷ್ಟೇ ನೂಕಿ

ಸತ್ತ ಸಾವಿಗೂ ಸುದ್ದಿಯಿಲ್ಲದಂತೆ
ಬೆಂಕಿ ಸದ್ದಡಗಿಸುತಿದೆ
ತನ್ನ ತಾನರಿಯದ ಕಪ್ಪು
ಬೆಪ್ಪಾಗುತಲಿದೆ
ಬೆಂಕಿಯ ಅಪ್ಪಿ ಮುಪ್ಪಾಗುತಿದೆ

ಮೈ ಬೆವರು ರಕ್ತ
ತಿಂದು ತೇಗುವುದೆಲ್ಲ ಒಂದೇ ಇರಲು
ಎಲ್ಲಿಯದು ಈ ದಲಿತ ಪಟ್ಟ
ಕಟ್ಟಬೇಕಿದೆ ಈ ಬಗೆಯ ಶೋಷಣೆಗೆ ಚಟ್ಟ

ಬೆಂಕಿಯ ನಗುವಳಿಸಿ
ಸುಟ್ಟ ಗಾಯದನುಭವವ ಮಾಡಿಸಬೇಕಿದೆ
ಈ ಹಾಳು ಬೆಂಕಿಗೆ.,
--- ರನ್ನ ಕಂದ

Comments

Popular posts from this blog

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ