ಹೂಗಳು

ಯಾವುದೋ ದಾರಿಯ
ಬೇಲಿಯ ಹೂಗಳು ನಗುತ್ತವೆ
ಪರಿಮಳದ ಅಹಮ್ಮಿನಲಿ
ಸುಂದರತೆಯ ಬಿಮ್ಮಿನಲಿ
ಸದಾ ಖುಷಿಯ ಧೇನಿಸುತ್ತವೆ


ಒಂದೊಂದು ಹೂವಿಗೆ 
ಒಂದು ಚೆಂದವಿದೆ
ಸೌಗಂಧವಿದೆ
ಒಂದೊಂದು ದೇವರ ಮುಡಿಗೆ
ಬೇಷರತ್ ಮೀಸಲಿವೆ
ನಮ್ಮಂತೆ ಬದುಕು ಹಸನು
ಈ ಹೂಗಳದ್ದು

ಮುಡಿಯೇರಿ ನಗುತ್ತವೆ 
ಮಾಲೆಯ ಸೇರಿ ಹಲವು
ಹೂಗುಚ್ಛದಲಿ ಅವಿತು ಕೆಲವು
ಒಂದೊಂದು ಜಾಗೆಗೆ 
ಒಂದೊಂದು ಅರ್ಥ ನೀಡುತ್ತವೆ
ಈ ಹೂಗಳು

ಅಂತೆಯೇ ನಮ್ಮ ಮನದ ಹೂಗಳು
ಸದಾ ಅರಳಬೇಕು
ಒಲವ ಸೌಗಂಧ ಸೂಸುತ
ಮುಡಿಯೇರಬೇಕು
ಮುಳ್ಳುಗಳ ನಡುವೆ
ಮೃದುತನವ ತೋರಬೇಕು
ಈ ಹೂಗಳಂತೆ..

--- ರನ್ನ ಕಂದ

Comments

Popular posts from this blog

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...