ಕವಿತೆ

ಕಾನನದ ನಡುವೆ ಸುಳಿವ
ಮೌನವೇ ಈ
ಕವಿತೆ
ಚಂದ್ರನ ಬಿಂಬದಿ ಸುರಿವ
ಬೆಳದಿಂಗಳೇ ಈ ಕವಿತೆ

ಮರುಭೂಮಿಯ
ಒಳಗೆ
ನೀರ ನೆಲೆಯಂತೆ
ಅರಿಯದ
ದ್ವೀಪದಲಿ
ಸಿಕ್ಕ ಜೀವಸೆಲೆಯಂತೆ

ಕಾರುಣ್ಯದಾ ಕಡಲೊಳಗೆ
ಅದ್ದಿ
ತೆಗೆದಿರಿಸಿ
ಆತ್ಮಕ್ಕೆ ಸವರಿ ಕಾಪಿಟ್ಟ
ಸವಿಗವಿತೆ

ಪದಗಳಿಲ್ಲದಿದ್ದರೂ ತಾ
ಭಾವಸೆಲೆಯೊಡೆದು
ಒಲವ ಕಂಪ
ಬೀರೋ
ಹೂವು ಈ ಕವಿತೆ
--- ರನ್ನ ಕಂದ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...