ನಾವೇಕೆ ಹೀಗೆ?

ಮೆಟ್ಟಿದ ಮಣ್ಣು
ಹೆಜ್ಜಗಳ ಹಳಿದಿಲ್ಲ
ನಾವೇಕೆ ಹೀಗೆ?ತಿಳಿದಿಲ್ಲ!
****
ಏಟು ತಿಂದ ಮರ
ನೋವು ಎಂದಿಲ್ಲ
ನಾವೇಕೆ ಹೀಗೆ?ತಿಳಿದಿಲ್ಲ!
****
ಬೆಂಕಿ ತುಂಬಿದ ಭೂಮಿಯ
ಎದೆಯ ಬಗೆದರೂ ಸುಟ್ಟಿಲ್ಲ
ನಾವೇಕೆ ಹೀಗೆ?ತಿಳಿದಿಲ್ಲ!
****
ಕಿತ್ತ ಹೂವು ಮತ್ತೇ ನಕ್ಕು
ಗಂಧ ಬೀರದೆ ಇರಲಿಲ್ಲ
ನಾವೇಕೆ ಹೀಗೆ?ತಿಳಿದಿಲ್ಲ!
****
ಪ್ರಕೃತಿ ಗುರುವಾಗಿ ಬಂದು
ಎಲ್ಲ ಕಲಿಸದೇ ಉಳಿದಿಲ್ಲ
ಆದರೂ
ನಾವೇನೂ ಕಲಿತಿಲ್ಲ!
---ರನ್ನ ಕಂದ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....