ಸಂಕಟ
ಮೋಡಕ್ಕೆ ಸಾಕಾಗಿತ್ತು,
'ಎಷ್ಟಂತ ಸುರಿಯಲಿ?
ಇನ್ನೂ ಎಷ್ಟು ಜನರನ್ನು ನುಂಗಲಿ?
ಸಾಕು ಮಾಡುತ್ತೇನೆ
ನೋಡಲಾಗುತ್ತಿಲ್ಲ
ಪಾಪದ ಜನರ ಗೋಳು'
ಭುವಿಯತ್ತ ಬೇಸರದ ಕಣ್ಣಾಡಿಸಿತು ಮೋಡ
ಭುವಿ
'ನನ್ನ ಮೈಯನ್ನೊಮ್ಮೆ ನೋಡು,
ಪೊರೆದ ಮಡಿಲಿನ ತುಂಬ
ಕೊರೆದ ಅಡಿಗಳವರೆಗೆ ಅವಶೇಷ
ಕಾಪಿಟ್ಟ ಬೊಗಸೆಗೆಲ್ಲ
ಕಿಚ್ಚಿಟ್ಟ ಬೊಬ್ಬೆಗಳು
ನಿನ್ನ ಕಾಡಿ ಕುಡಿಗಳಿಗೆ
ಕುಡಿಸಿದ ಜೀವಜಲದ ತುಂಬೆಲ್ಲ
ಇವರದೇ ಹೊಲಸು ರಾಡಿ
ಏನು ಫಲ ಇವರ ನಾ ಕಾಪಾಡಿ?
ನೆಟ್ಟ ಹಸಿರನ್ನೆಲ್ಲ ಕಡಿದು
ಬೆಟ್ಟಗಳ ಬರಿದು ಮಾಡಿ
ಕೊಟ್ಟ ಪ್ರೇಮಕೆ ಬದಲು ನೋವ
ಇಟ್ಟು ನಡೆಯುತಿಹರು
ಅದಕ್ಕೆ ಸುರಿ,
ಕೊಚ್ಚಿ ಹೋಗಲಿ ಅವರೆದೆಯ
ಅಹಮ್ಮಿನ ಪರಿ,
ಮುಳುಗುವುದು ಬರಿ ನಿಂತ ನೆಲವಷ್ಟೇ ಅಲ್ಲ,
ಕಟ್ಟಿಕೊಂಡ ಬದುಕೂ ಎಂದು.
---ರನ್ಧ ಕಂದ
'ಎಷ್ಟಂತ ಸುರಿಯಲಿ?
ಇನ್ನೂ ಎಷ್ಟು ಜನರನ್ನು ನುಂಗಲಿ?
ಸಾಕು ಮಾಡುತ್ತೇನೆ
ನೋಡಲಾಗುತ್ತಿಲ್ಲ
ಪಾಪದ ಜನರ ಗೋಳು'
ಭುವಿಯತ್ತ ಬೇಸರದ ಕಣ್ಣಾಡಿಸಿತು ಮೋಡ
ಭುವಿ
'ನನ್ನ ಮೈಯನ್ನೊಮ್ಮೆ ನೋಡು,
ಪೊರೆದ ಮಡಿಲಿನ ತುಂಬ
ಕೊರೆದ ಅಡಿಗಳವರೆಗೆ ಅವಶೇಷ
ಕಾಪಿಟ್ಟ ಬೊಗಸೆಗೆಲ್ಲ
ಕಿಚ್ಚಿಟ್ಟ ಬೊಬ್ಬೆಗಳು
ನಿನ್ನ ಕಾಡಿ ಕುಡಿಗಳಿಗೆ
ಕುಡಿಸಿದ ಜೀವಜಲದ ತುಂಬೆಲ್ಲ
ಇವರದೇ ಹೊಲಸು ರಾಡಿ
ಏನು ಫಲ ಇವರ ನಾ ಕಾಪಾಡಿ?
ನೆಟ್ಟ ಹಸಿರನ್ನೆಲ್ಲ ಕಡಿದು
ಬೆಟ್ಟಗಳ ಬರಿದು ಮಾಡಿ
ಕೊಟ್ಟ ಪ್ರೇಮಕೆ ಬದಲು ನೋವ
ಇಟ್ಟು ನಡೆಯುತಿಹರು
ಅದಕ್ಕೆ ಸುರಿ,
ಕೊಚ್ಚಿ ಹೋಗಲಿ ಅವರೆದೆಯ
ಅಹಮ್ಮಿನ ಪರಿ,
ಮುಳುಗುವುದು ಬರಿ ನಿಂತ ನೆಲವಷ್ಟೇ ಅಲ್ಲ,
ಕಟ್ಟಿಕೊಂಡ ಬದುಕೂ ಎಂದು.
---ರನ್ಧ ಕಂದ
Comments