ಒಂದರೊಳಗೊಂದೊಂದು..

ನಾಲ್ಕು ಬಾಹು...
ನಾನು,ನೀನು
ಆನು,ತಾನು...
ಎಂಬೀ ಹೆಸರಿನ ಆಯತವಷ್ಟೇ..
ಬದುಕು ಎಂದು
ನಂಬಿಕೊಂಡು
ಬದುಕುತ್ತಿದ್ದೆ...

ಆವರಿಸಿತಾಗೊಂದು
ಪರಿಧಿ..
ಇದಕಿಂತಲೂ ಮೇಲು..
ಬೇರೇನಿದ್ದರೂ ಎಲ್ಲ ಒಂದೇ
ಎಂಬಂತೆ ಶೂನ್ಯ..

ಎಲ್ಲರೊಳಗೊಂದಾಗಿ
ಪರಿಧಿಯಾಗುವುದೇ
ಮನುಜ ಮತ...
ಎಂಬ ಸತ್ಯ ಕಕ್ಕಿತು
ಆ ವೃತ್ತ..
ಮೌನ ಸಂವಾದತ್ತ..

ನಿರ್ಲಿಪ್ತತೆಗೂ ಮುನ್ನ
ಈ ಪರಿಧಿಯ
ಮತ್ತೊಂದು ಪರಿಧಿ ನುಂಗಿತು..
ಅದೋ ವಿಶ್ವ ಪಥ...
ನಾಕುತಂತಿಯ
ದನಿ ನಾದಮಯ...

ನಾಲ್ಕಕ್ಕೆ ಮೂಲ
ಒಂದು...
ಒಂದರಳೊಗೊಂದೊಂದು...

--- ರನ್ನ ಕಂದ ( ಸಚಿನ್ ಕುಮಾರ ಬ.ಹಿರೇಮಠ),ರನ್ನ ಮುಧೋಳ

Comments

Popular posts from this blog

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ