ರಕ್ತ ಒಂಮೊಂಮೆ ಕುದಿಯಲೇಬೇಕು..
ರಕ್ತ ಒಂಮೊಂಮೆ
ಕುದಿಯಲೇಬೇಕು
ಅದು ಕೇವಲ ಶಾಂತಿ ಸಾರುವ
ಬಿಳಿ ಕಣಗಳಿಗಿಂತಲೂ
ನಂಮವರು ಕಾದಿ
ಅಪಾಯಕ್ಕೊಳಗಾಗಿ
ನೋವು ತೋರುವ
ಕೆಂಪು ಕಣಗಳನ್ನೇ ವಿಪರೀತ ಹೊಂದಿದ್ದು...
ಯುದ್ಧ ಸಾರ್ವಕಾಲಿಕ ಕೆಡಕು
ಆದರೆ ದೇಶ- ಕಾಲದ ನಡುವೆ
ಇದೆ ಸಾಕಷ್ಟು ಒಡಕು
ಸಾಕಷ್ಟಿವೆ ಮನಸ್ಸನ್ನು
ಡಿಫಾಲ್ಟ್ ಮಾಡುವ
ಅನೇಕ ದಾರಿಗಳು
ದುರಂತವೆಂದರೆ ದಾರಿಯುದ್ದಕ್ಕು
ಸ್ವಾಗತಿಸುತಿವೆ
ಅವೇ ಬೇಲಿಯ ಮುಳ್ಳು..
ಪ್ರೀತಿಯಿಂದ ಗೆಲ್ಲಬಹುದಿತ್ತು ಹಗೆಯ
ಆದರವರೆದೆ ತುಂಬ ಕಂಡಿದ್ದೇವೆ
ಬರಿ ದ್ವೇಷ ದಳ್ಳುರಿಯ ಹೊಗೆಯ
ಮುಂದಾದರೂ ಕಾಣಬಲ್ಲೆವಾ ಸ್ನೇಹದಾ ನಗೆಯ?
ಶಾಂತಿ ದೂತನ ಗಡಿ ಪಾರು ಮಾಡಿದ್ದು ಯಾರು?
ಇತಿಹಾಸದ ಎದೆಯ ಹೊಕ್ಕಿ ಬಗೆದ ಸತ್ಯ
ಶಾಂತಿ ಎಂದೂ ಕ್ರಾಂತಿಯನ್ನುಂಟು ಮಾಡುವುದಿಲ್ಲ..
ಕ್ರಾಂತಿಯಾಗದೇ ಯಾವುದೂ ಬದಲಾಗುವುದಿಲ್ಲ..
ರಕ್ತ ಸುರಿಸಿ ದೇಶ ಪ್ರೇಮ ಮೆರೆಯಬೇಕಾದ
ಅನಿವಾರ್ಯತೆ ನಂಮ ಮುಂದಿರುವ
ವ್ಯಥೆ..!
ರಕ್ತ ಕುದಿಯುತ್ತಿರುವಾಗ
ಅದನ್ನು ತಡೆಯದೇ
ನಂಮವರ ನೋವಿಗೆ ಮದ್ದಾಗಿ
ಕೊಂಚ ಹರಿಸಲೇಬೇಕು..
ನೇತಾಜಿಯ ತರಹ..
ಚೆನ್ನಂಮನ ತರಹ..
--- ರನ್ನ ಕಂದ, ರನ್ನ ಮುಧೋಳ
ಕುದಿಯಲೇಬೇಕು
ಅದು ಕೇವಲ ಶಾಂತಿ ಸಾರುವ
ಬಿಳಿ ಕಣಗಳಿಗಿಂತಲೂ
ನಂಮವರು ಕಾದಿ
ಅಪಾಯಕ್ಕೊಳಗಾಗಿ
ನೋವು ತೋರುವ
ಕೆಂಪು ಕಣಗಳನ್ನೇ ವಿಪರೀತ ಹೊಂದಿದ್ದು...
ಯುದ್ಧ ಸಾರ್ವಕಾಲಿಕ ಕೆಡಕು
ಆದರೆ ದೇಶ- ಕಾಲದ ನಡುವೆ
ಇದೆ ಸಾಕಷ್ಟು ಒಡಕು
ಸಾಕಷ್ಟಿವೆ ಮನಸ್ಸನ್ನು
ಡಿಫಾಲ್ಟ್ ಮಾಡುವ
ಅನೇಕ ದಾರಿಗಳು
ದುರಂತವೆಂದರೆ ದಾರಿಯುದ್ದಕ್ಕು
ಸ್ವಾಗತಿಸುತಿವೆ
ಅವೇ ಬೇಲಿಯ ಮುಳ್ಳು..
ಪ್ರೀತಿಯಿಂದ ಗೆಲ್ಲಬಹುದಿತ್ತು ಹಗೆಯ
ಆದರವರೆದೆ ತುಂಬ ಕಂಡಿದ್ದೇವೆ
ಬರಿ ದ್ವೇಷ ದಳ್ಳುರಿಯ ಹೊಗೆಯ
ಮುಂದಾದರೂ ಕಾಣಬಲ್ಲೆವಾ ಸ್ನೇಹದಾ ನಗೆಯ?
ಶಾಂತಿ ದೂತನ ಗಡಿ ಪಾರು ಮಾಡಿದ್ದು ಯಾರು?
ಇತಿಹಾಸದ ಎದೆಯ ಹೊಕ್ಕಿ ಬಗೆದ ಸತ್ಯ
ಶಾಂತಿ ಎಂದೂ ಕ್ರಾಂತಿಯನ್ನುಂಟು ಮಾಡುವುದಿಲ್ಲ..
ಕ್ರಾಂತಿಯಾಗದೇ ಯಾವುದೂ ಬದಲಾಗುವುದಿಲ್ಲ..
ರಕ್ತ ಸುರಿಸಿ ದೇಶ ಪ್ರೇಮ ಮೆರೆಯಬೇಕಾದ
ಅನಿವಾರ್ಯತೆ ನಂಮ ಮುಂದಿರುವ
ವ್ಯಥೆ..!
ರಕ್ತ ಕುದಿಯುತ್ತಿರುವಾಗ
ಅದನ್ನು ತಡೆಯದೇ
ನಂಮವರ ನೋವಿಗೆ ಮದ್ದಾಗಿ
ಕೊಂಚ ಹರಿಸಲೇಬೇಕು..
ನೇತಾಜಿಯ ತರಹ..
ಚೆನ್ನಂಮನ ತರಹ..
--- ರನ್ನ ಕಂದ, ರನ್ನ ಮುಧೋಳ

Comments