ಹೆಜ್ಜೆ ಇಟ್ಟಿದ್ದೇನೆ...

ಹೆಜ್ಜೆ ಇಟ್ಟಿದ್ದೇನೆ
ಇಡೀ ಬದುಕಿಗೆ
ಶ್ರಮದ ಹೆಗಲಲಿ
ಆಶೋತ್ತರಗಳ ಹೊತ್ತು


ಹಾದಿಯ ಬದಿಗೆ
ಮುಗುಳ್ನಗುವ ಹೂ
ಹೇಳ ಹೊರಟಿದೆ ಹೊಸ ವಿಚಾರವನೊಂದು
ದಾರಿಯಲ್ಲಿನ ಕಲ್ಲುಗಳೂ ಸಹ
ಕೋರುತಿವೆ ಅವಕಾಶವನೊಂದು

ಮೆಟ್ಟಿದರೂ ಮೇಲೇಳುವ ಬಗೆಯ
ಕಲಿಸುತಿದೆ ಗರಿಕೆ ಹುಲ್ಲು
ಅಪ್ಪಳಿಸುವ ತೊರೆಗೆ ಎದೆ ನೀಡುವುದ ಕಲಿಸುತಿದೆ
ತೀರದ ಕಲ್ಲು

ನೋವಿನಲೂ ನಗುವುದನು
ತೋರುತಿದೆ ಫಲ ಹೊತ್ತ ಮರವು
ನಗುವಿನಲೂ ನರಳುತಿವೆ ನೋವುಗಳ ಅಪಸ್ವರವು

ಹೆಜ್ಜೆ ಇಟ್ಟಿದ್ದೇನೆ
ಅರ್ಧ ದಾರಿಗೆ
ಅರ್ಥವಾಗುವವರೆಗೂ
ನಡೆಯಲೇಬೇಕು
ಎಲ್ಲವನೂ ಹೊತ್ತು.


-- *ರನ್ನ ಕಂದ*

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....