ಪ್ರೀತಿ



ನೆನೆಪೆಲ್ಲ ನಿನ್ನದೇ ಈಗ
ಅವಕೆಲ್ಲ ಮೀರಿದೆ ವೇಗ
ಮನಸಲ್ಲಿ ಒಲುಮೆಯ ರಾಗ
ಬರಲಾರೆಯಾ ನೀ ಬೇಗ


ಅತಿಯಾಸೆ ಎಂದೆನಿಸಿದರೂ
ಗತಿಗೇಡು ಆಗದು ಪ್ರೀತಿ
ಹಳೆ ಬೇರು ಬದುಕೆಂಬುವುದು
ಹೊಸ ಚಿಗುರು ಹುಟ್ಟುವ ಪ್ರೀತಿ

ನರರೆಲ್ಲ ಒಂದಾಗಿರಲೂ
ನರಕ ಎಂಬುದೇ ಇರದು
ಜಗವೆಲ್ಲ ಪ್ರೀತಿಸುತಿರಲು
ಸ್ವರ್ಗಕ್ಕೆ ಕುಂದೇ ಬರದು

*--- ರನ್ನ ಕಂದ*

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...