ಮರದ ಸ್ವಗತ


ಒಂದೊಮ್ಮೆ ನಾ ಹಸಿರಾಗಿದ್ದೆ
ಇಂಗಾಲವ ಹೀರಿ 
ಬಿಸಿಲ ಊಡಿ ಬಗೆಬಗೆಯ
ಭಕ್ಷ್ಯಗಳನ್ನ ನೀಡುತ್ತಿದೆ..


ಒಂದೊಮ್ಮೆ ನಾ ಉಸಿರಾಗಿದ್ದೆ
ಮೋಡ ಸೆಳೆದು ಮಳೆಯಾಗಿಸಿ
ಧರಣಿಯ ಎದೆ ತಣಿಸುತ್ತಿದ್ದೆ

ಒಂದೊಮ್ಮೆ ನಾ ಹೆಸರಾಗಿದ್ದೆ
ಬಳಲಿ ಬಂದವರಿಗೆ
ನೆಳಲ ನೀಡಿ ಮಡಿಲಾಗಿ
ನೇವರಿಸಿ ತೂಗುತ್ತಿದ್ದೆ..

ಇಂದು ಕಸಿರಾಗಿದ್ದೇನೆ
ಸಿಕ್ಕ ಸಿಕ್ಕಲ್ಲಿ ಕೊಡಲಿ ಏಟು
ಬೇರು ಸಹಿತ ಹೊಸೆದು ಹಾಕಿ
ಮಷೀನುಗಳ ನಡುವೆ ನೂಕಿ
ಎದೆಯ ಸೀಳಿಸಿಕೊಳ್ಳುವಾಗ
ನನ್ನ ದೇಹ ಹುಡಿಯಾಗಿ ಬೀಳುತ್ತೆ
ಆತ್ಮ ಉತ್ತರವಿರದ 
ಪ್ರಶ್ನೆಗಳ ಕೇಳುತ್ತೆ..

--- ರನ್ನ ಕಂದ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....