ಹಾಯ್ಕುಗಳು

*ಚಿಗುರು*

ನಿರಾಸಕ್ತ
ಮನಸಿನ
ಆಸಕ್ತಿ


*ಪ್ರೀತಿ*

 ಮನಸುಗಳ
ಚೈತನ್ಯ
ರಂಗೇರಿಸುವ
ನಿತ್ಯ ಹಬ್ಬ


*ವಿರಹ*
ನಾಲಿಗೆ ಇರದ
ಬಾಯಿಗೆ ಸುರಿದ
ಜೇನು


*ಕನಸು*

ಹಗಲಿರುಳು
ಬೆಂಬಿಡದ
ಸುಂದರ
ಖಯ್ಯಾಲಿ


*ಶೃಂಗಾರ*
ಇಬ್ಬರೇ 
ಸೇವಿತ
ಕಾಮಪೂರಿತ
ಅಮೃತ


*ನಾನು*
ಅವಳ 
ಕಣ್ಣ 
ಹುಡುಕಾಟದ
ವಸ್ತು..


*ಬದುಕು*
ಸಾವಿನ
ಮನೆಯ 
ದಾರಿಯ
ವೈಭೋಗ

*ಹೆಣ್ಣು*
ಶಕ್ತಿಯ
ಮತ್ತೊಂದು
ರೂಪ


*ನಗು*
ತುಟಿಗೆ
ತೊಡಿಸಿದ
ಒಡವೆ


*ಕನಸು*
ಅಪರೂಪಕ್ಕೆ
ಆಗಮಿಸೋ
ನಿದಿರೆಯ
ತಂಗಿ


*ಒಲುಮೆ*
ಹೃದಯಗಳ
ನಡುವಿನ
ಸೋಪಾನ

--- *ರನ್ನ‌ ಕಂದ*

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....