ಕಣ್ಣಿಗೂ ನಕ್ಷತ್ರವಾಗುವ ಬಯಕೆ...


ಮನದ ಆಕಾಶದೊಳಗೆ ಹೀಗೆ
ಒಮ್ಮೊಮ್ಮೆ ಜಾರುತ್ತವೆ..
ಕಣ್ಣಿಗೂ ನಕ್ಷತ್ರವಾಗುವ ಬಯಕೆ
ಒಮ್ಮೊಮ್ಮೆ ಹೊಳೆಯುತ್ತವೆ



ಸುತ್ತ ಸುತ್ತುವ ಗ್ರಹಗಳಂತೆ
ಚಿತ್ರ ವಿಚಿತ್ರಗಳು
ಆಗಾಗ ಹಿಡಿವುದು ಗ್ರಹಣ
ಒಂದನ್ನೊಂದು ನುಂಗಿ


ತೆರೆದರೆ ಕಣ್ಣ ಅದು ಸುದಿನ
ಮುಚ್ಚಿದರೆ ಕಣ್ಣ ಅದು ನಿಧನ
ಕಣ್ಣಿಗೂ ನಕ್ಷತ್ರವಾಗುವ ಬಯಕೆ

ಕಣ್ಣುಗಳಲಿ ಅಸಂಖ್ಯಾತ ರಾಶಿ ರಾಶಿ ಕನಸುಗಳು
ಬೈಜಿಕ ಕ್ರಿಯೆಯಂತೆ
ನನಸು ಮಾಡುವ ಹುನ್ನಾರ
ಒಂದಿಷ್ಟು ಶಕ್ತಿ ಸಾಮರ್ಥ್ಯ
ಕಣ್ಣೆಂಬ ನಕ್ಷತ್ರಗಳಿಗೆ..
ಮಿಟುಕಾಟ ಅರೆಗಳಿಗೆ..

*--- ರನ್ನ ಕಂದ*

Comments