ಸಖಿ ಗೀತ

ಚಿತ್ತ 
ಚಂಚಲವಾಗದಂತೆ
ಸುತ್ತ ಸುಳಿದವಳೇ
ಮತ್ತೇನು
ಕುಶಲೋಪರಿ ಎಂದು
ಮುತ್ತನೀವವಳೇ

ಅಂತರಂಗದ
ಅಂತಃಪುರದಲಿ
ಅಂತರಾಂತರ ಎಣಿಸುವವಳೇ
ಇಂತು ರಾಗದಿ
ಕುಂತು ಮುದದಲಿ
ಅಂತರ್ಧಾನವಾಗುವವಳೇ

ಮಬ್ಬಿನಲೆ
ತಬ್ಬುತಿಹ
ಎಳೆ ಶಶಿಯಾಗಸವ
ಉಬ್ಬುತಲಿ
ಹಬ್ಬವದು
ಸಖಿ ಸಖನೆದೆಯಾಗಸವ

-- ರನ್ನ ಕಂದ

Comments

Popular posts from this blog

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ