ಹನಿಗವಿತೆಗಳು

ಹೂ ಮಾತು


ತುಂಬಿಗಳ ತುಟಿಗೊಂದಿಷ್ಟು ಸವಿಯ ತೋರಿ
ಗಾಳಿಗೊಂದಿಷ್ಟು ಗಂಧ ಸವರಿ
ಹೂ ತಾ ನಗುತಲಿದೆ
ಎಷ್ಟೋ ಮನಸುಗಳಿಗೆ ಚಂದ ತೋರಿ
ಅದೆಷ್ಟೋ ಕಾವ್ಯಗಳ ಛಂದ ಮೀರಿ
ಮಾತಾಡುತಿದೆ ಮೌನದೊಳಗೆ

--- ರನ್ನ ಕಂದ



ಬೆಸುಗೆ

ಬಲ್ಲಿದರ
ಮುಗಿಲ ನೆಕ್ಕುವ 
ಇಮಾರತಿನ
ಬಿಡಿಭಾಗಗಳೆಲ್ಲ
ಬಡವರ
ಶ್ರಮದ ಬೆವರಿನ
ಬಂಧಗಳ ಬೆಸುಗೆ

--- ರನ್ನ ಕಂದ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...