ಹಳದಿ ಗಾಜಿನ ಕನ್ನಡಕ
ಎಲ್ಲವೂ ಹಿಮ್ಮುಖ
ಅಪ್ರಬುದ್ಧ ಮನಸುಗಳು
ಹಳದಿ ಕಣ್ಣಲಿ ಜಗವ ಹುಡುಕಿ
ಜಗಕೆಲ್ಲ ಕಾಮಾಲೆ
ಎಂದು ಪದ್ಯ ಬರೆವರು
ಇತ್ತುದನ್ನು ಒತ್ತು ಕೊಡದೇ
ಅರ್ಥ ಮಾಡಿಕೊಳ್ಳದೇ
ಅರಿತುಕೊಳ್ಳದೇ
ಗಡ್ಡ ಕೆದರಿ ಪದ್ಯ ಬರೆವರು
ಯಾಕೆ ಏನು ಎಂಬುದನು
ಇಂಬುಗೊಳದೇ
ಜಂಭವನೆ ನಂಬಿಕೊಂಡ
ಹುಂಬಿನಲಿ ಪದ್ಯ ಬರೆವರು
ಕಸ್ತೂರಿಯನರಿದ
ಬಿತ್ತರದ ಮನವಿರದೆ
ಒತ್ತರದಲಿ ನಾಲ್ಕೈದು ಸಾಲು ಗೀಚಿ
ಎತ್ತರೆತ್ತರದಿ ಸರಿವ ಸುಳ್ಳು
ಸುಖದಿ ಪದ್ಯ ಬರೆವರು..
-- ರನ್ನ ಕಂದ
Comments