ಬದುಕು ಬದುಕಾಗಬೇಕಾದರೆ...

ಅದೊಂದು ಸುಡು ಬಿಸಿಲಿನ ಮಧ್ಯಾಹ್ನ. ಎತ್ತ ನೋಡಿದರತ್ತ ಭಣಗುಡುವ ಬಿಸಿಲು. ಬೆಂಕಿಯಂತೆ ಕಾದಿತ್ತು ಭೂಮಿ. ಇಂಥ ವಿಷಣ್ಣ ಸ್ಥಿತಿಯಲ್ಲಿ ದಾರಿಹೋಕನೊಬ್ಬ ತುಂಬಾ ದಣಿದು ಆ ದಾರಿಯುದ್ದಕ್ಕೂ ನಡೆದು ಬರುತ್ತಿದ್ದ. ತುಸು ದೂರ ನಡೆದ ಬಳಿಕ ಅವನಿಗೆ ಒಂದು ತೋಪು ಕಂಡಿತು. ಅದರಲ್ಲಿ ಮಾವು ಬೇವು,ಆಲದಂತಹ ಮರಗಳೂ, ಟೊಮೊಟೊ, ಈರುಳ್ಳಿ, ಕುಂಬಲ, ಸೌತೆಯಂತಹ ಗಿಡಬಳ್ಳಿಗಳೂ ಕಂಡವು. ಜತೆಗೆ ಅಲ್ಲೊಂದು ನೀರಿನ ಒರತೆ.ದಾರಿ ಹೋಕನಿಗೆ ಅದು ಒಂದರ್ಥದಲ್ಲಿ ಸ್ವರ್ಗವೇನೋ ಎಂಬಂತೆ ತೋರಿತು. ಹೊಟ್ಟೆ ಬೇರೆ ಹಸಿದಿತ್ತು. ಹೀಗಾಗಿ ತಾನು ತಂದಿದ್ದ ಬುತ್ತಿ ಸಮೇತ ತೋಪಿನೊಳಗೆ ಸೇರಿಬಿಟ್ಟ ಆ ದಾರಿಹೋಕ. ಹೊಟ್ಟೆ ತುಂಬಿಸಿಕೊಂಡು ಅಲ್ಲಿದ್ದ ಬೇವಿನ ಮರದ ಕೆಳಗೆ ವಿಶ್ರಮಿಸಿದ.ಅಲ್ಲಿದ್ದ ಮರಗಿಡಬಳ್ಳಿಗಳನ್ನೊಮ್ಮೆ ಎಗ್ಗಿಲ್ಲದಂತೆ ದಿಟ್ಟಿಸಿದ.ಆ ಸೃಷ್ಟಿಯಲ್ಲಿ ಏನೋ ಪ್ರಮಾದವಿರುವಂತೆ ಕಂಡಿತು ಆ ದಾರಿಹೋಕನಿಗೆ. "ಎಲ್ಲ ದೊಡ್ಡ ದೊಡ್ಡ ಮರಗಳಲ್ಲಿ ಚಿಕ್ಕ ಚಿಕ್ಕ ಕಾಯಿಗಳಿವೆ. ಬಲವಿಲ್ಲದ  ಬಳ್ಳಿಗಳಲ್ಲಿ ಭಾರದ ಕಾಯಿಗಳಿವೆ. ಇದೆಂಥ ಅಸಮಾನತೆ? ಹೀಗೆ ವೈರುಧ್ಯದಿಂದ ನಿಸರ್ಗವನ್ನು ಸೃಷ್ಟಿಸಿದ ಆ ದೇವರಿಗೆ ನನ್ನ ಧಿಕ್ಕಾರವಿದೆ. ಅವುಗಳ ಆಕಾರಕ್ಕೆ ತಕ್ಕಂತೆ ಕಾಯಿಗಳನ್ನು ಸೃಷ್ಟಿಸಬಹುದಿತ್ತಲ್ಲ ಆ ದೇವರು.? ನಿಜಕ್ಕೂ ಆ ದೇವರು ಮಹಾ ಮೂರ್ಖ..!" ಅಂತ ಸ್ವಗತ ಗೈದು ತುಸು ಹೊತ್ತು ನಿದ್ರಿಸಲನುವಾದ.ಿದೆ ವೇಳೆ ಬೆವಿನ ಮರದಿಂದ ಬೇವಿನ ಕಾಯಿಯೊಂದು ದಾರಿಹೊಕನ ತಲೆಯ ಮೇಲೆ ಬಿತ್ತು . ಇವನಿಗೆ ಥಟ್ಟನೆ ಎಚ್ಚರವಾಯಿತು. ತಲೆಯ ಮೇಲೆ ಬಿದ್ದ ಬೆವಿನ ಕಾಯಿಯನ್ನು ಕಂಡು ಆತ ತುಸು ಚಿಂತಿತನಾದ. ಮತ್ತೇ ಹೇಳದ "ಓಹ್..! ನಾನು ಯೋಚಿಸಿದಂತೆ ಆ ದೇವರುದೊಡ್ಡ ದೊಡ್ಡ ಮರಗಳಲ್ಲಿ ದೊಡ್ಡ ದೊಡ್ಡ ಕಾಯಿಗಳನ್ನು ಸೃಷ್ಟಿಸಿದ್ದರೆ ಇವತ್ತು ತನಗೆ ದೊಡ್ಡ ಅನಾಹುತವೆ ಆಗಿರುತ್ತಿತ್ತು. ಛೇ..!ಆ ದೇವರ ಸೃಷ್ಟಿಯೇ ಸರಿ..ನನ್ನ ಯೋಚನೆಯೇ ತಪ್ಪು..!"ಎಂದು ಅವನಿಗನ್ನಿಸತೊಡಗಿತು. ಪ್ರಕೃತಿಯಲ್ಲಿ ಎಲ್ಲವೂ ಸರಿಯಾಗಿಯೇ ಇದೆ. ನಾವದನ್ನು ಚೆನ್ನಾಗಿ ಅರಿತುಕೊಳ್ಳಬೇಕಷ್ಟೇ ಎಂದು ತನ್ನ ನಿಲುವು ಬದಲಾಯಿಸಿಕೊಂಡು ಮುಂದೆ ಸಾಗಿದ.

                          ಈ ಚಿಕ್ಕ ಸಂಗತಿ ನಮ್ಮ ಬದುಕಿನೊಂದಿಗೆ ಎಷ್ಟು ಚೆಂದವಾಗಿ ಹೊಂದಿಕೊಂಡಿದೆಯಲ್ಲವೇ? ಕೇವಲ ಆಕೃತಿ - ಗಾತ್ರ, ರೂಪದಿಂದ ಮಾತ್ರ ಯಾರ ಬಲಾಬಲವನ್ನು ಗುರುತಿಸಲಾಗುವುದಿಲ್ಲ. ಸೊ ಬದುಕು ಬೆಳಗಬೇಕಾದರೆ ಎಲ್ಲವನ್ನು ಅವುಗಳದ್ದೇ ರಿತಿಯಲ್ಲಿ ಅನುಭವಿಸುತ್ತಾ ಅನುಪಾಲಿಸುತ್ತಾ ಹೋಗಬೇಕು. ಆಗ ಮಾತ್ರ ನಮ್ಮ ಬದುಕು ಬದುಕಾಗುತ್ತದೆ.

                                 --- ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....