ಬೇರು(ದಿ.28-09-2008ರಂದು 'ಸಂಯುಕ್ತ ಕರ್ನಾಟಕ' ದಿನಪತ್ರಿಕೆಯ 'ಸಾಪ್ತಾಹಿಕ ಸೌರಭ'ದಲ್ಲಿ ಪ್ರಕಟಗೊಂಡಿದ್ದ ಕತೆ)
ನಾನು ಅತ್ತೆಯ ಮನೆಗೆ ಹೋದದ್ದು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ಹೋಗಿದ್ದೆನಾದರೂ ಈ ಸಲ ಹೋದುದರ ವೈಶಿಷ್ಟ್ಯವೇ ಬೇರೆ. ಈ ಸಲ ಬದುಕಿಗೆ ಒಂದು ಭದ್ರ ನೆಲೆಗಟ್ಟನ್ನು ರೂಪಿಸಿಕೊಂಡಿದ್ದೆ. ತೃಪ್ತಿ ತರುವಂಥ ಸರ್ಕಾರಿ ಕೆಲಸ, ನನ್ನ ತಂದೆ ತಾಯಿ, ಮಾವ ಅತ್ತೆ ನನ್ನ ಹರದಯ ಸನ್ನಿಧಿಯಲ್ಲಿದ್ದರು. ನಾನು ಆರಾಧಿಸುತ್ತಿದ್ದ ನನ್ನ ಪ್ರೇಮ ದೇವತೆ 'ದೀಪಾ' ಬಗೆಗಿನ ನೂರಾರು ಕನಸುಗಳು, ಏನನ್ನಾದರೂ ಸಾಧಿಸಬೇಕೆಂಬ ಅದಮ್ಯವಾಧ ಛಲ - ಹೀಗೆ ಎಲ್ಲವನ್ನು ಸಮ್ಮಿಳಿಸಿಕೊಂಡು ನನ್ನ ಅತ್ತೆಯ ಮನೆಗೆ ಹೋಗಿದ್ದೆ. ತಂಗಿಯ ಮಗ ಎಂಬ ಕಾಳಜಿಯಿಂದ ನನ್ನನ್ನು ನನ್ನ ಕಾಲ ಮೇಲೆ ನಿಲ್ಲುವಷ್ಟು ಎರವಾಗಲು ನನಗೆ ಶಕ್ತಿ ಮೀರಿ ಶಿಕ್ಷಣ ಕೊಡಿಸಿ, ತಂದೆ ಇಲ್ಲದ ಕೊರಗು ಕಾಡದಿರಲಿ ಎಂದು ನನ್ನೆಲ್ಲಾ ಬೇಡಿಕೆಗಳನ್ನು ಈಡೇರಿಸಿದ್ದರು ನನ್ನ ಮಾವ.ಬಹುಶಃ ನನ್ನ ತಾಯಿ ಕೂಡ ಕೊಡದಷ್ಟು ಪ್ರಿತಿ ಮಮತೆಯನ್ನು ನನ್ನತ್ತೆ ನೀಡಿ ಏಳೆಂಟು ವರ್ಷ ಸಲುಹಿದವಳು.
ದೀಪಾ ಮತ್ತು ನಾನು ಬಾಲ್ಯದಿಂದಲೇ ಒಂದೇ ಗೂಡಿನ ಹಕ್ಕಿಗಳು. ಒಳ್ಳೆಯ ಮಿತ್ರರು. ಸ್ನೇಹ ತುಸು ಗಟ್ಟಿಗೊಂಡು ಪ್ರೀತಿಗೆ ತಿರುಗಿದ್ದು ನಮಮ್ರಿವಿಗೆ ತಡವಾಗಿ ಬಂದಿತು.
ಸ್ವಾರ್ಥವಿರದ ಅವಳ ಮನಸ್ಸು ಶುಭ್ರವಾಗಿತ್ತು.ಸದಾ ಮುಕ್ತವಾಗಿರುತ್ತಿತ್ತು. ಅವಳನ್ನು ಪ್ರೀತಿಸುವುದರಲ್ಲಿ ತಪ್ಪಿಲ್ಲ ಎಂದೆನಿಸಿತ್ತು. ನಮ್ಮಿಬ್ಬರ ಈ ಪ್ರೀತಿಯ ವಿಷಯ ನನ್ನತ್ತೆ ಮಾವನಿಗೂ ತಿಳಿದಿತ್ತು. ಈ ಸಲದ ಭೇಟಿ ನಮ್ಮ ಈ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂಬ ನಂಬುಗೆಯನ್ನು ಹೊತ್ತು ಊರಿಗೆ ಬಂದಿದ್ದೆ.
ಮನೆಗೆ ಬಂದ ತಕ್ಷಣ ಎಂದಿನಂತೆ ಊಟ ಮುಗಿಯಿತು. ಊಟ ಮುಗಿದು ಅರ್ದ ತಾಸಾದರೂ ದೀಪಾಳ ಸುಳಿವಿಲ್ಲ. ಅತ್ತೆಯನ್ನು ಕೇಳಿದೆ 'ಅತ್ತೆ ದೀಪಾ ಎಲ್ಲಿ?ಕಾಣ್ತಾ ಇಲ್ಲ..
"ಆಕಿ ತನ್ನ ಗೆಳತಿ ಪಾರೂಗ ಅಡಿಗಿ ಕಲಿಸಲಿಕ್ಕಹೋಗ್ಯಾಳ..ಇನ್ನೇನ ಬರ್ತಾಳ.." ಎಂದು ಒಳ ನಡೆದರು.
"ಮಾವ..ದೀಪಾಳ ಬಗ್ಗೆ ಏನ್ ನಿರ್ಧಾರ ಮಾಡಿದ್ರಿ?" ಎಂದೆ. "ಈ ಶುಕ್ರವಾರ ಅವಳ ನಿಶ್ಚಿತಾರ್ಥ. ಅದಕ್ಕs ಅಲ್ಲೇನು..ನಿನಗ ನಿಮ್ಮವ್ವಗ ಊರಿಗೆ ಕರಿಸ್ಕೊಂಡದ್ದು." ಎಂದರು. ನನಗೆ ಒಳಗೊಳಗೆ ಆಶ್ಚರ್ಯ ಮತ್ತು ಖುಷಿ ಎರಡು ಒಟ್ಟಿಗೆ ಸಂಭವಿಸಿದವು. ಇದೇ ವೇಳಗೆ ದೀಪಾ ಮೇಲೇರಿ ಬಂದಳು. "ಪ್ರಶಾಂತ ನಂಗ ನಿದ್ದಿ ಬರ್ಲಿಕತ್ಹೇದ. ನೀನು ಕೆಳಗಿನ ಕೋಣ್ಯಾಗ ಮಲಕೋ" ಎಂದು ಅಲ್ಲೇ ಒರಗಿದರು. ಕೂಡಲೇ ನಾನು ದೀಪಾಳೊಂದಿಗೆ ಕೆಳಗಿಳಿದು ಬಂದೆ. ಅವಳಿಗೆ ಏನೆಲ್ಲಾ ಹೇಳಬೇಕೆಂದು ಕೊಂಡು ಅವಳ ಕಣ್ಣಲ್ಲಿ ಕಣ್ಣಾದೆ. ಆದರೆ ಅವಳ ತೊಯ್ದ ಕಮಗಳು ನನ್ನನ್ನು ಮುಂದುವರೆಯಲು ಬಿಡಲಿಲ್ಲ. ಅದು ಸಂತಸದ ಕಣ್ಣೀರಿರಬೇಕೆಂದು "ಏ ದೀಪಾ ಯಾಕ್ ಅಳ್ತಿದಿ?ನಮ್ಮ ಪ್ರೀತಿ ಎಷ್ಟು ಗಟ್ಟಿ ಅದ ಗೊತ್ತಾ?ಇನ್ನು ಕೆಲವೇ ದಿನ..ನಾವಿಬ್ರು ಗಂಡಾ ಹೆಂಡ್ತಿ" ಎಂದೆ.ಅವಳು ಮಾತ್ರ ಖುಷಿಯಾಗಲಿಲ್ಲ. ಬದಲಿಗೆ ಕಿಟಕಿ ಹತ್ತಿರ ಮೆಲುವಾಗಿ ನಡೆದಳು. ನನ್ನತ್ತ ತಿರುಗಿ "ಪ್ರಶೂ..ಹುಣ್ಣಿಮೆ ಚಂದ್ರನ್ನ ಬರೀ ನೋಡ್ಬಹುದು ಅಷ್ಟ..! ಕೈಲಿ ಹಿಡ್ಕೊಂಡು ಮುದ್ದು ಮಾಡಾಕ ಸಾದ್ಯಾನ ಇಲ್ಲ." ಅಂದ್ಳು. ನನಗೆ ಅವಳ ಭಾವ ಸ್ಪಷ್ಟವಾಗಲಿಲ್ಲ.
"ದೀಪಾ ಏನ್ ಮಾತಾಡಕ್ಹತ್ತಿ..?ನಿನ್ನ ಒಗಟಿನಂತ ಮಾತು, ನಿನ್ನ ಪ್ರೀತಿ ತುಂಬಿದ ಈ ನನ್ ತಲಿಗೆ ಅರ್ಥ ಆಗ್ತಾಯಿಲ್ಲ. ಒಂದೀಟ ಬಿಡಿಸಿ ಹೇಳು.."ಎನ್ನುತ್ತ ಅವಳತ್ತ ಧಾವಿಸಿದೆ.
"ಪ್ರಶೂ..ಈ ಶುಕ್ರವಾರ ನನ್ನ ನಿಶ್ಚಿತಾರ್ಥ ನಿನ್ನ ಕೂಡ ಅಲ್ಲ. ಬೇರೆಯವರ ಕೂಡ. ನನ್ನ ಹಣಿಗೆ ನಿನ್ನ ಸಿಂಧೂರ ಸಿಂಗಾರ ಆಗೂದು ಆ ಬ್ರಹ್ಮಗ ಇಷ್ಟ ಇಲ್ಲಾಂತ ಕಾಣುತ್ತ..." ಎಂದಳು ದೀಪಾ.
ಒಂದೆರಡು ಕ್ಷಣ ದಂಗಾದೆ. ಅವಳಿಲ್ಲದ ನನ್ನ ಬದುಕನ್ನು ನನ್ನಿಂದ ಕಲ್ಪಿಸಿಕೊಳ್ಳಲಾಗಲಿಲ್ಲ. ಸಾವರಿಸಿಕೊಂಡು ದೀಪಾಳನ್ನು ಬರಸೆಳೆದು "ಇದೆಲ್ಲ ಏನು? ನಮ್ಮಿಬ್ಬರ ಈ ಪ್ರೀತಿ ವಿಷಯ ಮಾವನಿಗೆ ಅತ್ತೆಗೆ ನಮ್ಮವ್ವಗ ಎಲ್ಲಾರಿಗೂ ಗೊತ್ತು. ಮತ್ತ್ಯಾಕ ಈ ಥರದ ನಾಟಕಾ?ಇದಕ್ಕೆಲ್ಲಾ ನೀ ಒಪ್ಕೊಂಡ್ಯಾ ನೀ ಮಾಡಿದ್ದ ಪ್ರಮಾಣವೆಲ್ಲಾ ಏನಾದ್ವು?ನಿನ್ನ ಬಿಟ್ರ ನನಗ ಸಾವೇ ಗತಿ ನಿನ್ನ ಅರಮನೆಗೆ ನಾನ ಮಹಾರಾಣಿ ಅಂತ ೇನೆಲ್ಲ ಪ್ರಮಾಣ ಮಾಡಿದ್ದಿ?" ಎಂದೆ.
"ಹೌದು.. ಮಾಡಿದ್ದೀನಿ. ಆದ್ರ ನಮ್ಮನ್ನ ಹಡೆದ ತಂದೆ ತಾಯಿಗಳಿಗೆ ನಾವು ಒಂದಿಷ್ಟಾದರೂ ಋಣ ತಿರಿಸ್ಬೇಕಲ್ಲ. ಅವರ ಎಲ್ಲಾ ಮಾತುಗಳನ್ನ ಕೇಲದಿದ್ರೂ ಒಂದೆರೆಡಾದ್ರೂ ಪಾಲಿಸಲೇ ಬೇಕು. ಆಗ ಮಾತ್ರ ನಮ್ಮ್ನ ಪಡೆದದ್ದಕ್ಕೂ ಅವರ ಜನ್ಮಸಾರ್ಥಕ ಅನ್ನಿಸ್ತೈತಿ." ದೀಪಾ ಒಲ್ಲದ ಮನಸ್ಸಿನಿಂದ ಹೀಗಂದಳು.
"ಅಂದ್ರ.. ನಮ್ಮಾವ ಅತ್ತೆ ನಿಮಗ ಬೇರೆ ಕಡೆ ಗಂಡು ನೋಡ್ಯಾರ ..ನನ್ನ ಬಿಟ್ಟು ಬೇರೆಯವನ ಜೊತೆಗೆ ನಿನ್ನ ನಿಶ್ಚಿತಾರ್ಥ ಮಾಡ್ಲಿಕಿ ಹೊಂಟಾರ ಅದೂ ನಮ್ಮ ಪ್ರೀತಿ ವಿಷಯ ಗೊತ್ತಿದ್ರೂ, ಅವರ ಹೇಳಿದ್ದನ್ನ ನೀನು ಶಿರಸಾ ವಹಿಸಿ ಪಾಲಿಸಾಕ್ಹತ್ತಿ.."ಎಂದು ನಾನು ಅತ್ತೆಯತ್ತ ನಡೆದೆ.
ನನಗಾಗ ಎಲ್ಲಿಲ್ಲದ ಕೋಪ ಬಂತಾದರೂ ಸಹಿಸಿಕೊಂಡೆ. ಮಾತು ಬೆಳೆಸಿದೆ.
"ಅತ್ತೆ ಇದು ನಂಬಿಕಿ ದ್ರೋಹ.. ನಾನು ದೀಪಾ ಒಬ್ರಿಗೊಬ್ರು ಇಷ್ಟ ಪಡ್ತಿದ್ದಿವಿ ಅಂತ ನಿಮ್ಗೆಲ್ಲ ಗೊತ್ತು. ಮತ್ತ್ಯಾಕ ಹಿಂಗ್ ಮಾಡೀದಿ?"
"ಪ್ರಶೂ.. ನೀವಿಬ್ರು ಪ್ರೀತಿಸಿದ್ದು ನನಗ್ಗೊತ್ತು.. ಆದರ ಜನರ ಮಾತುಗಳನ್ನ ಕೇಳಿದಾಗ ನನ್ನ ಎದಿ ಧಸ್ಸಂತು. ಕಲ್ಸಿ, ಬೆಳ್ಸಿದ ಋಣಕ್ಕ ಪ್ರಶಾಂತ ಮನಿ ಅಳಿಯ ಆಗ್ಬೇಕಾಯ್ತು. ಎಂ.ಎ ಮುಗ್ಸಿ ಸರ್ಕಾರಿ ಕೆಲ್ಸ ತಗೊಂಡ ಹುಡುಗ ಅನ್ನೋದ ಋಣಕ್ಕ ಕಡಿಮೆ ಸಂಬಳದ ಹುಡ್ಗೀನ ಮದ್ವಿ ಆದ ಅನ್ನೋ ಮಾತು ಬರ್ಬಾರ್ದು ಅಂತ ಈ ನಿರ್ಧಾರಕ್ಕ ಬಂದ್ವಿ.ನಂಗ ನಿನ್ನ ಖುಷಿ ನನ್ನ ಮಾನ ಇವೆರಡೂ ಮುಖ್ಯ.."ಎಂದಾಗ ನಂಗೆ ಅತ್ತೆ ಮಾವನ ಮಾತುಗಳ ಮೇಲೆ ನಗು ಬಂತು.
"ಮಾವ ಅವ್ಳಿಗೆ ಬೇಕಾದ ಕಡೆ ವರ ಹುಡುಕಿ ಮದ್ವೆ ಮಾಡ್ರಿ. ನಂಗೆನ್ ಬೇಜಾರಿಲ್ಲ. ಒಂದ್ವಿಷಯ ತಿಳ್ಕೊಳ್ಳಿ..ಇಷ್ಟೇಲ್ಲಾ ಕಲ್ಸಿ, ಬೆಳ್ಸಿದ್ರೂ ಋಣಕ್ಕಾಗಿ ಮಾವನ ಮಗಳನ್ನ ಮದ್ವಿ ಆಗ್ಲಿಲ್ಲ ಅಂತ ಜನ ಆಡಾಂಗಿಲ್ಲೇನ? ಮಾವ ನನ್ನ ತಡೆದರು. "ಪ್ರಶೂ.. ನಿನ್ನ ಮಾತು ಖರೇ ಐತಿ. ನಮಗೆಲ್ಲಿ ಊರ ಮಂದಿಯಿಂದ ಮಾತು ಬರ್ತಾವೆನೊ ಅಂತ ಹಿಂಗ್ ಮಾಡಬೇಕಾಯಿತು. ನಿಮ್ಮ ಪ್ರೀತಿ ಒಂದು ಹೆಮ್ಮರ ಇದ್ದ್ಹಂಗ." ಎಂದರು ಮಾವ.
"ಮಾವ ನೀವಿಬ್ರು ನನ್ನ ಜೀವನದ ಮರಕ್ಕ ಬೇರು. ನನ್ನ ಬದುಕನ್ನ ಭದ್ರವಾಗಿಸಿ, ಒಳ್ಳೆಯತನ,ವಿನಯದಂತ ಗುಣಗಳ ಎಲೆ ಚಿಗುರುವಂಗ ಮಾಡಿದ್ರಿ.. ಆಸೆಯ ಹೂವುಗಳನ್ನ ಅರಳಿಸಿದ್ರಿ.ನಿಮ್ಮ ಮಗಳನ್ನ ಯಾವತ್ತೂ ಬಿಟ್ಟು ಕೊಡ್ಹಂಗಿಲ್ಲ. ಅಕಿ ನೆನಿಬೇಕೆಂದಾಗ ಮಳೆಹನಿ ಆಗ್ತೀನಿ. ಹಾಡೋ ಹಕ್ಕಿ ಆಗ್ತೀನಿ. ಹುಣ್ಣಿಮೆ ಚಂದ್ರ ಆಗ್ತೀನಿ. ಓಡೋ ಮೋಡ, ಮುತ್ತಿಡೋ ಇಬ್ಬನಿ, ಸುಳಿಗಾಳಿ ಎಲ್ಲಾ ಆಗಿ ಸದಾ ಅವಳ ನೆರಳಾಗಿರ್ತೀನಿ." ಎಂದಾಗ ಮಾವ, ಅತ್ತೆಯ ಕಂಗಳಲ್ಲಿ ಆನಂದ ಭಾಷ್ಪ ಹರಿದವು. ಕೊನೆಗೆ ದೀಪಾನ ಕೆನ್ನೆ ಸವರಿ ಹೇಳಿದೆ.'ಹುಣ್ಣಿಮೆ ಚಂದ್ರನ್ನ ನೋಡಲೂ ಬಹುದು. ಬೇಕೆಂದಾಗ ಕೈಲಿಟ್ಟುಕೊಂಡು ಮುದ್ದಾಡಲೂ ಬಹುದು."
ನನ್ನ ಮಾತು ಕೇಳಿ ದೀಪಾ ನಾಚಿಕೆಯ ಮೊಗ್ಗಾದಳು..

---ಸಚಿನ್ ಕುಮಾರ ಬಿ.ಹಿರೇಮಠ, ಜೇವರ್ಗಿ

Comments