ಕೆಸರಿನ ಕಮಲ...

ಪಾಪ..!ಕರ್ನಾಟಕದ ಸ್ಥಿತಿ ಹೆಂಗಾಯ್ತಲ್ಲ..?ನಿಮ್ಗೆ ಆ ಕತೆ ನೆನಪಿರಬಹುದು. ಅದೆ ಎಲ್ಡು ಬೆಕ್ಕುಗಳಿಗೆ ಒಂದು ಮಂಗ ನ್ಯಾಯ ಹೇಳಿದ್ದು. ಇಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲೇ ತೃಪ್ತ ಮತ್ತು ಅತೃಪ್ತ ಬಣಗಳ ನಡುವಿನ ಜಟಾಪಟಿಯ ನಡುವೆ ಜೆಡಿಎಸ್ ಮತ್ತು ಕೈ ಪಕ್ಸದವ್ರು ಲಾಬ ಎಣಿಸ್ತಿದಾರೆ.ಸರ್ಕಾರ ಉಳಿಯುತ್ತೋ ಬೂಳುತ್ತೋ ಗೊತ್ತಿಲ್ಲಾ..ಅಲ್ರೀ, ಮಂತ್ರಿಗಿರಿ ಸಿಗ್ಲಿಲ್ಲಾ ಅಂತಾ ಪಕ್ಸಕ್ಕೆ ಹಿಂಗ್ ದ್ರೋಹಾ ಬಗ್ಯೋದಾ? ನಮ್ ಯಡ್ಯೂರಪ್ಪಂಗೂ ಬುದ್ಧಿ ಇಲ್ಲಾ.. ಕಣ್ಣೋರ್ಸೋಕೆ ಸೆರಗೆ ಬೇಕಿತ್ತಾ? ಕರ್ಚೀಫ ನಡೀತಿರ್ಲಿಲ್ವಾ? ಮುಖ್ಯಮಂತ್ರಿಯೋರ್ರೇ.. ಏನ್ ನಡೀತಿದೆ ಇಲ್ಲಿ..? ಆಡ್ಕೊಂಡ್ ನಗೋರ್ ಮುಂದೆ ಎಡ್ವಿ ಬೀಳ್ತಿದ್ದೀರಲ್ರೀ...!

ರೇಣುಕಾಚಾರ್ಯರೇ... ನಿಮ್ಗೆ ನಿಯತ್ತು ಅನ್ನೋದು ಇದೆಯಾ? ರಾಜ್ಯದ ಜನತೆಯ ಉದ್ಧಾರ ನೋಡ್ತೀರಾ ಅತ್ವಾ ಬರೀ ನಿಮ್ ಸುಖಾನೇ ನೋಡ್ತೀರಾ.. ಥೂ..!ಓಡಿ ಹೋಗಿರೋ ಸಾಸಕರೇ.. ಜನರಿಗೆ ನೀಡಿದ್ದ ಭರವಸೆಗಳನ್ನಾ ಮೊದ್ಲು ಈಡೆರ್ಸಿ.. ಆಮ್ಯಾಕೆ ಸುಡಗಾಡಿಗೆ ಹೋಗ್ರಿ.. ನಿಮ್ನಾ ಆರಿಸಿ ತಂದಿರೋ ನಮಗೆ ಬುದ್ಧಿ ಇಲ್ಲಾ..

ಕೈ ಪಕ್ಸದೋರೇ...60 ವರ್ಷ ನೀವ್ ಮಾಡಿದ ಶೂನ್ಯ ಸಂಪಾದನೆ ಜನ್ರಿಗೆ ಗೊತ್ತಿದೆ. ಒಸಿ ಅವ್ರಿಗೆ ಸುಧಾರಣೆ ಮಾಡೋಕೆ ಅವ್ಕಾಸಾ ಮಾಡಿಕೊಡಿ.. ನಿಮ್ಗೆಲ್ಲಾ ವಯಸ್ಸಾಗಿದೆ. ಒಸಿ ರೆಸ್ಟ್ ಮಾಡಿ.
ಇಂತಿ ನಿಮ್
ಮತದಾರ

Comments

Popular posts from this blog

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ