ಮಿಲನ

ನಸು ನಾಚಿಕೆಯೇಕೆ ಪಿಸುಮಾತಿಗೆ
ಬಿಗಿದಪ್ಪಿ ಮುತ್ತಿಡಲು
ಇಲ್ಲ್ಯಾರ ಹೆದರಿಕೆ?
ಬೇರಾರು ಇಲ್ಲ,
ಹೂ ಮಂಚವಂದನ್ನು ಬಿಟ್ಟು
ದೀಪದ ಬೆಳಕಿರಲಿ
ನೋಡಬೇಕು ನಿನ್ನ ಮುಖ
ನಾಚಿ ಕೆಂಪೇರುವುದ..
ದೀಪವು ಸಹ ನಾಚಿಕೊಳ್ಳಲಿ
ನಿನ್ನ ಕೆನ್ನೆ ಕೆಂಪಿನ ಮುಂದೆ
ಬಾ ಪ್ರಿಯ ಸಖಿ
ಬಿಗಿದಪ್ಪು,ತೆಕ್ಕೆಯೊಳು
ಸಂಭವಿಸಲಿ ಅವ್ಯಕ್ತ ಒಲುಮೆ
ನರನಾಡಿಗಳಲ್ಲಿ ಹರಿಯಲಿ ಜೀವಕಳೆ..

   ---ಮಹಾಂತೇಶ ದೊಡ್ಡಮನಿ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...