ಮಿಠಾಯಿ ಗಾಡಿ (22-03-2009 ರಲ್ಲಿ ವಿಜಯ ಕರ್ನಾಟಕ ದಿನಪತ್ರಕೆಯ ಪುಟಾಣಿ ವಿಜಯದಲ್ಲಿ ಪ್ರಕಟಗೊಂಡ ಮಕ್ಕಳ ಕವಿತೆ)
ಮಿಠಾಯಿ ಗಾಡಿ ಬಂದಿದೆ ಅಮ್ಮ
ಬೇಗನೆ ಬಾರಮ್ಮ
ಸಕ್ಕರೆ ಕಡ್ಡಿ ಕೊಳ್ಳುವೆನಮ್ಮ
ಕಾಸನು ತಾರಮ್ಮ..
ಹಸಿರು ಬಣ್ಣದ ಜಾಡಿಯೊಳಗೆ
ಜಿಲೇಬಿ ಪೇಡಗಳು
ನೀಲಿ ಬಣ್ಣದ ಜಾಡಿಯೊಳಗೆ
ಹಲವು ಬರ್ಫಿಗಳು
ಬಗೆ ಬಗೆ ಬಣ್ಣದ ಸಕ್ಕರೆ ಕಡ್ಡಿ
ರುಚಿ ರುಚಿ ಬಿಸ್ಕತ್ತು
ಹೆಚ್ಚಿಗ ತಿಂದರ ಸೋಹನ್ ಪಪ್ಪಡಿ
ತಪ್ಪದು ಆಪತ್ತು
ವಿದ್ಯೆಯ ಕಲಿತು ದಏಶವ ಮಾಳ್ಪ
ಸಿಪಾಯಿ ಆಗುವೆನು
ಅಲ್ಲಿಯವರೆಗೆ ಸ್ವಲ್ಪೇ ಸ್ವಲ್ಪ
ಮಿಠಾಯಿ ತಿನ್ನುವೆನು
---ಸಚಿನ್ ಕುಮಾರ ಬಿ.ಹಿರೇಮಠ
ಬೇಗನೆ ಬಾರಮ್ಮ
ಸಕ್ಕರೆ ಕಡ್ಡಿ ಕೊಳ್ಳುವೆನಮ್ಮ
ಕಾಸನು ತಾರಮ್ಮ..
ಹಸಿರು ಬಣ್ಣದ ಜಾಡಿಯೊಳಗೆ
ಜಿಲೇಬಿ ಪೇಡಗಳು
ನೀಲಿ ಬಣ್ಣದ ಜಾಡಿಯೊಳಗೆ
ಹಲವು ಬರ್ಫಿಗಳು
ಬಗೆ ಬಗೆ ಬಣ್ಣದ ಸಕ್ಕರೆ ಕಡ್ಡಿ
ರುಚಿ ರುಚಿ ಬಿಸ್ಕತ್ತು
ಹೆಚ್ಚಿಗ ತಿಂದರ ಸೋಹನ್ ಪಪ್ಪಡಿ
ತಪ್ಪದು ಆಪತ್ತು
ವಿದ್ಯೆಯ ಕಲಿತು ದಏಶವ ಮಾಳ್ಪ
ಸಿಪಾಯಿ ಆಗುವೆನು
ಅಲ್ಲಿಯವರೆಗೆ ಸ್ವಲ್ಪೇ ಸ್ವಲ್ಪ
ಮಿಠಾಯಿ ತಿನ್ನುವೆನು
---ಸಚಿನ್ ಕುಮಾರ ಬಿ.ಹಿರೇಮಠ
Comments