ಕಾಯುತಿಹೆ ನಿನಗಾಗಿ...
ಸೂರ್ಯ ಮೋಡದ ಮರೆಯಲ್ಲಿ ಅವಿತಿದ್ದ
ಇರುಳು ಮೈ ಕೊಡವಿ ಮೇಲೇಳುತ್ತಿತ್ತು
ನಿನಗೆಂದೇ ತರಿಸಿದ್ದ ಚಹಾ ಹಬೆಯಾರಿ
ತಣ್ಣಗಾಗಿತ್ತು
ಕೆಫೆಯಲ್ಲಿದ್ದವರೆಲ್ಲ ಹೋಗಿ
ಎಷ್ಟೋ ಹೊತ್ತಾಗಿತ್ತು..
ಆದರೂ ನೀ ಬರಲಿಲ್ಲ
ನನಗೇನೂ ಬೇಜಾರಿಲ್ಲ...
ನಿನ್ನ ದಾರಿ ಕಾಯುವುದರಲ್ಲಿ..
ನೀ ಬರುವೆ ಎಂದು ನಾ ಕಾಯುವುದು
ಇನ್ನು ನಿಲ್ಲಿಸಿಲ್ಲ..
ನಿನಗಾಗಿ ದಿನ ಕಾಯುವೆ
ಒಂದು ಕಪ್ ತಣ್ಣಗಾದ ಚಹಾದೊಂದಿಗೆ ಕೆಫೆಯೊಂದರಲ್ಲಿ..
---ಮಹಾಂತೇಶ ದೊಡ್ಡಮನಿ
ಇರುಳು ಮೈ ಕೊಡವಿ ಮೇಲೇಳುತ್ತಿತ್ತು
ನಿನಗೆಂದೇ ತರಿಸಿದ್ದ ಚಹಾ ಹಬೆಯಾರಿ
ತಣ್ಣಗಾಗಿತ್ತು
ಕೆಫೆಯಲ್ಲಿದ್ದವರೆಲ್ಲ ಹೋಗಿ
ಎಷ್ಟೋ ಹೊತ್ತಾಗಿತ್ತು..
ಆದರೂ ನೀ ಬರಲಿಲ್ಲ
ನನಗೇನೂ ಬೇಜಾರಿಲ್ಲ...
ನಿನ್ನ ದಾರಿ ಕಾಯುವುದರಲ್ಲಿ..
ನೀ ಬರುವೆ ಎಂದು ನಾ ಕಾಯುವುದು
ಇನ್ನು ನಿಲ್ಲಿಸಿಲ್ಲ..
ನಿನಗಾಗಿ ದಿನ ಕಾಯುವೆ
ಒಂದು ಕಪ್ ತಣ್ಣಗಾದ ಚಹಾದೊಂದಿಗೆ ಕೆಫೆಯೊಂದರಲ್ಲಿ..
---ಮಹಾಂತೇಶ ದೊಡ್ಡಮನಿ
Comments