ಅವಳೆಂದುಕೊಂಡು ನೀಡಿದ ಅಂತರಂಗದೊಳಗೆ...

ಹಗಲು ಮಲಗಿತೆಂದರೆ ಸಾಕು
ಮಬ್ಬಿದಿರಿಸಿನಲಿ ಕುಣಿಯತೊಡಗುತವೆ ಕನಸುಗಳು
ಯಾರ ಒತ್ತಾಯಕ್ಕೊ ಸಿಕ್ಕು
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..ಆಚಮನಕ್ಕೆ ತೆಗೆದಿರಿಸಿದ ಉದಕ
ಅಂಗೈಗೆ ಜಾರಿದೊದೆ ಆವಿಯಾದುದಕೆ ಆಶ್ಚರ್ಯವಿಲ್ಲ
ನಾನು ಮಾತ್ರ ಕಾಣಬಲ್ಲೆ ವಡಬಾನಲ
ಅವಳೆಂದು ಕೊಂಡು ನೀಡಿದ ಅಂತರಂಗದ ಒಳಗೆ..
ಬದುಕು ಹಸನಾಗುವ ಬಯಕೆಗಳೆಲ್ಲ
ಆಣೆಗಳೊಡಗೂಡಿ ಭರವಸೆಗಳ ಜೋಡಿ ಮೆರೆದಿದ್ದವು
ಇಂದಿಗೂ ಒಬ್ಬಂಟಿಯಾಗಿ ಚರಿಸುತಿವೆ
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..
ಸುಧೆ ಸೂಸುವ ಹೂದೋಟದಲಿ
ಹಾಲಾಹವನೆರೆದು ಹಣ್ಣು ನೀಡೆಂದು ಹೇಳಬಹುದೆ?
ಒಲವೆಲ್ಲ ಉಡುಗಿ ಹೋದ ಮೇಲೆ ಉಳಿಯಿತೇನು..?
ಅವಳೆಂದು ನೀಡಿದ ಅಂತರಂಗದ ಒಳಗೆ…
—-ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....