ಹೀಗೊಬ್ಬ ದೇವರು...
ಅದು 2003ನೇ ಇಸವಿ. ನಾನು ಆಗ ತಾನೆ ಪಿಯುಸಿ ಮುಗಿಸಿದ್ದೆ. ಪಿಯುಸಿಯಲ್ಲಿ ಮೊದಲ
ಶ್ರೇಣಿಯಲ್ಲಿ ಪಾಸಾಗಿದ್ದರೂ ಆರ್ಥಿಕ ತೊಂದರೆಯಿಂದ ಇಂಜಿನಿಯರಿಂಗ್, ಮೆಡಿಕಲ್ ಗಳಂತಹ
ವೃತ್ತಿಪರ ಕೋರ್ಸುಗಳಿಗೆ ನನಗೆ ಸೇರಲಾಗಲಿಲ್ಲ. ನನ್ನ ಚಿಕ್ಕಪ್ಪನವರ ಸಲಹೆ ಮೇರೆಗೆ
ಡಿ.ಇಡಿ ಮಾಡುವ ನಿಟ್ಟಿನಲ್ಲಿ ಕೋರ್ಸಿಗೆ ಅರ್ಜಿ ಸಲ್ಲಿಸಿದೆ. ಆದರೆ ಅದರಲ್ಲೂ ನನಗೆ
ನಿರಾಸೆ ಕಾದಿತ್ತು. ನಾನು ಸಾಮಾನ್ಯ ವರ್ಗದ ಕೆಟಗರಿಯಲ್ಲಿ ಬರುತ್ತಿದ್ದುದರಿಂದ ಸಾಮಾನ್ಯ
ವರ್ಗಕ್ಕೆ ನಿಗದಿಪಡಿಸಿದ ಶೇಕಡಾ ಅಂಕಗಳಿಗಿಂತ(cut off percentage) ನನ್ನ ಪಿಯುಸಿ
ಅಂಕಗಗಳು ತುಸು ಕಮ್ಮಿ ಇದ್ದವು. ನಿರಾಸೆಯೊಂದಿಗೆ ಸ್ಥಳೀಯ ಸಂಸ್ಥೆಯಲ್ಲಿ ಟೈಪಿಂಗ್
ಕ್ಲಾಸ್ ಗೆ ಸೇರಿಕೊಂಡೆ .
ಒಂದು ವಾರದ ಬಳಿಕ ನನ್ನ ಚಿಕ್ಕಪ್ಪನಿಂದ ನನಗೆ ಕರೆ ಬಂತು. ” ‘ವಿಜಯ ಕರ್ನಾಟಕ’ದಲ್ಲಿ ಡಿ.ಇಡಿ ಕೋರ್ಸಗೆ ಪರಿಷ್ಕೃತ ಶೇಕಡಾ ಅಂಕಗಳನ್ನು ಕೇಂದ್ರೀಕೃತ ದಾಖಲಾತಿ ಘಟಕದವರು ಪ್ರಕಟಿಸಿದುದರ ಅಧಿಸೂಚನೆಯೊಂದು ವಿಜಯ ಕರ್ನಾಟಕದಲ್ಲಿದ ಪ್ರಕಟಗೊಂಡಿದೆ, ಓದಿಕೊಂಡು ಮುಂದುವರಿ” ಎಂದು ನನಗೆ ವಿಜಯ ಕರ್ನಾಟಕ ಪತ್ರಿಕೆಯನ್ನು ಗಮನಿಸಲು ಸೂಚಿಸಿದರು. ಆವತ್ತು ಆ ಪ್ರಕಟಣೆ, ವಿಜಯ ಕರ್ನಾಟಕ ಪತ್ರಿಕೆಯೊಂದನ್ನು ಹೊರತು ಪಡಿಸಿ ಬೇರೆ ಯಾವ ಪತ್ರಿಕೆಯೂ ಪತ್ರಿಕೆಯಲ್ಲೂ ಪ್ರಕಟಗೊಂಡಿರಲಿಲ್ಲ. ಅದಲ್ಲದೇ ಅಲ್ಲಿ ನಿಗದಿ ಪಡಿಸಿದ ಶೇಕಡಾ ಅಂಕಗಳಿಗಿಂತ ನನ್ನ ಪಿಯುಸಿ ಶೇಕಡಾ ಅಂಕಗಳು ಹೆಚ್ಚಾಗಿದ್ದಿದ್ದರಿಂದ ನನಗೆ ಮೂರು ದಿನದಲ್ಲಿ ಡಿ.ಇಡಿ ಕೋರ್ಸಿಗೆ ಪ್ರವೇಶ ಸಿಕ್ಕಿತು. ಆ ಸಮಯದಲ್ಲಿ ನನ್ನ ಚಿಕ್ಕಪ್ಪ ಮತ್ತು ವಿಜಯಕರ್ನಾಟಕ ನನ್ನ ಪಾಲಿನ ದೇವರೆಂದೇ ಹೇಳಬೇಕು. ಬಳಿಕ ನಾನು 2007ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆಗೆ ಸೇರಿದೆ. ನನ್ನ ಇಂದಿನ ಸುಸ್ಥಿತಿಗೆ ನನ್ನ ಚಿಕ್ಕಪ್ಪ ಮತ್ತು ವಿಜಯ ಕರ್ನಾಟಕ ಪತ್ರಿಕೆಯೇ ಕಾರಣವೆಂಬುದನ್ನು ಅಲ್ಲಗಳೆಯುವಂತಿಲ್ಲ..
ಸಚಿನ್ ಕುಮಾರ ಬಿ.ಹಿರೇಮಠ

Comments