ತೀರದ ನಂಟು..

ದೂರವಾಗುತ್ತಲೇ ಮತ್ತೇ ಸಮೀಪಿಸಿ
ಮುತ್ತಿಕ್ಕಿ ಹೋಗುತಿವೆ ತೊರೆಗಳು
ತೊರೆಯದೇ ತೀರದ ಬಂಡೆಗಳ...

ಕರಗುತಿವೆ ಬಂಡೆಗಳು ಯಾವ ಸಂಭ್ರಮಕ್ಕೋ ಸೋತು
ಸಣ್ಣವಾಗುತಿವೆ ಅರೆಘಳಿಗೆ ನಿಲ್ಲದೆಯೇ
ಓಡುತಿವೆ ತೊರೆಗಳು...

ಏನು ಹೆಸರೋ..? ಈ ಹೆಸರಿಲ್ಲದ ನಂಟಿಗೆ
ಅಂಟಿಸುವವರು ಯಾರೋ ನಂಟಿನ ಹೆಸರು..?
ಗಟ್ಟಿತನದ ಹೆಸರು...

ಬಂಡೆಗಳ ನಂಬುಗೆ ತುಂಬು ಪ್ರೀತಿಯಲಿ ಬಲಿತು
ಬೀಜವಾಗುತಲಿದೆ ಬೇರೂರಿ ತೀರದಲಿ
ತೊರೆಯದ ತೊರೆಗಳಿಗೆ ಕಾಯುತ್ತ ನಿಂತಿವೆ...

ಶತ ಶತಮಾನಗಳಿಂದಲೂ ಪ್ರೀತಿಯಿಂದಲೇ
ಅಪ್ಪುತಿವೆ ಒಂದನ್ನೊಂದು ಧೇನಿಸುತ್ತ...

---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...